ಬೆಂಗಳೂರು: ಬಸವೇಶ್ವರ ನಗರದಲ್ಲಿರುವ ಯೂನಿಯನ್ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಸ್ಕೂಟರ್‌ನ ಡಿಕ್ಕಿಯಲ್ಲಿದ್ದ 45 ಸಾವಿರ ರೂಪಾಯಿಯನ್ನು ಕಳ್ಳರು (Bengaluru Theft Case) ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ. ಶುಕ್ರವಾರ (ಮಾ.10) ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಕೂಟರ್ ಸವಾರ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಡಿಕ್ಕಿಯೊಳಗೆ ಇಟ್ಟು, ಮತ್ತೆ ಬ್ಯಾಂಕ್ ಒಳಗೆ ಹೋಗಿದ್ದಾರೆ. ಸವಾರನ ಪ್ರತಿ ಹೆಜ್ಜೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಕಳ್ಳರಿಬ್ಬರು, ಆತ ಬ್ಯಾಂಕ್ ಒಳಗೆ ಹೋಗುತ್ತಿದ್ದಂತೆ ಸ್ಕೂಟರ್ ಸಮೀಪ ಬಂದಿದ್ದಾರೆ.
ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಕಳ್ಳರಿಬ್ಬರು ಅನುಮಾನ ಬರಬಾರದು ಎಂದು ಹೆಲ್ಮೆಟ್ ಧರಿಸಿದ್ದಾರೆ. ಬಳಿಕ ಸುತ್ತಮುತ್ತ ಕಣ್ಣಾಡಿಸಿ, ತಮ್ಮದೇ ಗಾಡಿ ಎನ್ನುವಂತೆ ಒಬ್ಬ ಹ್ಯಾಂಡಲ್ ಬ್ರೇಕ್ ಮಾಡಿದರೆ, ಮತ್ತೊಬ್ಬ ಕೆಳಗೆ ಕೂತು ಹಣವನ್ನು ಸುಲಭವಾಗಿ ಎಗರಿಸಿ ಪರಾರಿ ಆಗಿದ್ದಾರೆ. ಘಟನೆ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಚಿನ್ನದ ಗಟ್ಟಿ ಎಂದು ಲಕ್ಷ ಲಕ್ಷ ಪೀಕಿದ ವಂಚಕ
ನಕಲಿ ಚಿನ್ನದ ಗಟ್ಟಿ ಕೊಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ ಬಂಧಿತ ಆರೋಪಿ ಆಗಿದ್ದಾನೆ. ಬಂಧಿತನಿಂದ 8 ಲಕ್ಷ ರೂ ಹಾಗೂ ಒಂದು ಬೈಕ್ ಅನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: BMTC Fire tragedy: ಕ್ಷಣಾರ್ಧದಲ್ಲಿ ಹೊತ್ತಿ ಉರಿವ ಬಸ್‌ಗಳು; ಬೆಂಗಳೂರಿನಲ್ಲಿ ಬಿಎಂಟಿಸಿ ಓಡಾಟ ಎಷ್ಟು ಸೇಫ್?
ಆರೋಪಿ ಶಿವ ನಿಕಿತ್ ಮೂಲ್ಯ ಎಂಬುವರಿಗೆ ಸ್ಯಾಂಪಲ್ ಎಂದು ಒರಿಜಿನಲ್ ಗಟ್ಟಿ ಚಿನ್ನ ತೋರಿಸಿದ್ದಾನೆ. ಬಳಿಕ ಮಾರಾಟ ಮಾಡುವಾಗ ನಕಲಿ ಗಟ್ಟಿ ಕೊಟ್ಟು, 13 ಲಕ್ಷ ರೂ. ವಂಚಿಸಿ ಪರಾರಿ ಆಗಿದ್ದ. ಕಾರ್ಯಾಚರಣೆ ನಡೆಸಿದ ಗಿರಿನಗರ ಪೊಲೀಸರು ಈತನನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ