Site icon Vistara News

ಮಗುವಿನ ಅಪಹರಣ, ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು

ಮಗುವಿನ ರಕ್ಷಣೆ

ಬೆಂಗಳೂರು: ನಗರದ ಹೆಣ್ಣೂರಿನಿಂದ ಮಂಗಳವಾರ ಸಂಜೆ ಅಪಹರಣಗೊಂಡಿದ್ದ ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಪಹರಣಕಾರರು ಪೋಷಕರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪೋಷಕರು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು.

ಅಪಹರಣಕಾರರ ಫೋನ್ ನಂಬರ್ ಟ್ರೇಸ್ ಮಾಡಿದ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು. ಜಿಗಣಿ ಬಳಿ ಆರೋಪಿಗಳು ಮಗುವನ್ನು ಇರಿಸಿಕೊಂಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಕಾಂಪೌಂಡ್ ಹಾರಿ ಒಳ ನುಗ್ಗಿ ಮಗುವನ್ನು ರಕ್ಷಿಸಿದ್ದಾರೆ.

ಮಗುವನ್ನು ಅಪಹರಿಸಿದ್ದ ಮಹಿಳೆ ನೇಪಾಳ ಮೂಲದ ವ್ಯಕ್ತಿಗೆ ಮಗುವನ್ನು ನೀಡಿ ಪರಾರಿಯಾಗಿದ್ದಳು. ಅಪಹರಣಕ್ಕೆ ಒಳಗಾಗಿದ್ದು ಬಿಎಂಟಿಸಿ ಚಾಲಕನ ಸುಭಾಷ್ ಎಂಬುವರ ಮಗ. ಆತ ಐದನೇ ತರಗತಿಯಲ್ಲಿ ಓದುತ್ತಿದ್ದ. ಪೋಷಕರಿಗೆ ಕರೆ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಜಿಗಣಿ‌ ಬಳಿಯ ಫಾರ್ಮ್ ಹೌಸ್‌ನಲ್ಲಿ ಬಾಲಕನನ್ನು ಇರಿಸಿದ್ದರು.

ಇದನ್ನೂ ಓದಿ | ಲವ್‌ ಮ್ಯಾರೇಜ್:‌ ವರನ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್

ಈ ಕುರಿತು ಕಣ್ಣೀರು ಹಾಕುತ್ತ ವಿವರ ನೀಡಿದ ಮಗುವಿನ ತಾಯಿ ಅಶ್ವಿನಿ ʼʼಆರೋಪಿ ಕರೆ ಮಾಡಿ, ನಿಮ್ಮ‌ ಮಗ ನನ್ನ ಬಳಿ‌ ಇದ್ದಾನೆ. ಎಂದು ಹೇಳಿದ. ಪೊಲೀಸರಿಗೆ ದೂರು ಕೊಡಬೇಡಿ, 50 ಲಕ್ಷ ಕೊಡಿ ಎಂದ. ನಾನು ಮಗುವಿಗೆ ಆಟ ಆಡಲು ಕಳಿಸಿದ್ದೆ. ನನ್ನ ಮಗನನ್ನು ಪಕ್ಕದ ಮನೆಯವಳು ಮತ್ತೊಬ್ಬ ಮಹಿಳೆಯ ಬಳಿ ಕಳುಹಿಸಿದ್ದಳು. ಆಕೆ ಈ ಮೊದಲು ಕೆಲಸದ ವಿಚಾರವಾಗಿ ನನ್ನ ಫೋನ್ ನಂಬರ್‌ ಪಡೆದಿದ್ದಳು. ನನ್ನ ನಂಬರನ್ನು ಆಕೆ ಅಪಹರಣ ಮಾಡಿದ ಮಹಿಳೆಗೆ ನೀಡಿದ್ದಳು. ರಾತ್ರಿ 2.30ಕ್ಕೆ ಮಗುವನ್ನು ಪೊಲೀಸರು ನಮಗೆ ತಂದು ಒಪ್ಪಿಸಿದರುʼʼ ಎಂದರು.

ಇದನ್ನೂ ಓದಿ | ಜಮೀನು ಮಾರಾಟ ವಿಚಾರಕ್ಕೆ ಉದ್ಯಮಿಯ ಕಿಡ್ನಾಪ್‌

Exit mobile version