ಬೆಂಗಳೂರು: ಪೋರ್ಜರಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಯತ್ನ ಆರೋಪದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಆರೋಪಿ ರವಿಕುಮಾರ್, ಭೋವಿ ಅಭಿವೃದ್ಧಿ ನಿಗಮದ ಇಬ್ಬರು ಹಿರಿಯ ಕೆ.ಎ.ಎಸ್ ಅಧಿಕಾರಿಗಳ ಪೋರ್ಜರಿ ಸಹಿ ಮಾಡಿ 2.35 ಕೋಟಿ ಲೂಟಿ ಮಾಡಲು ಪ್ಲಾನ್ ಕೂಡ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನಲೆ :
ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಭೋವಿ ನಿಗಮಕ್ಕೆ ಅರ್ಜಿಗಳು ಬಂದಿದ್ದವು. ಈ ಪೈಕಿ ನಕಲಿ ಜಾತಿ ಪತ್ರ ಹಾಗೂ ಅಂಕಪಟ್ಟಿ ಸಲ್ಲಿಸಿದ್ದ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು. ಅದರಲ್ಲಿ ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಯಪುರ, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಯ ಅರ್ಜಿಗಳಾಗಿವೆ. ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ ಹಾಗೂ ಜಿಎಂ ನಾಗರಾಜಪ್ಪ ಅವರ ಸಹಿ ಪೋರ್ಜರಿ ಮಾಡಿದ್ದಾರೆ. 60 ಉದ್ಯಮಶೀಲತಾ ಫಲಾಪೇಕ್ಷಿಗಳ ಅರ್ಜಿ ಮಂಜೂರಾತಿಗೆ ಸಲ್ಲಿಕೆಯಾಗಿತ್ತು. ಐಸಿಐಸಿಐ ಬ್ಯಾಂಕ್‌ನಲ್ಲಿರುವ ನಿಗಮದ ಖಾತೆಗಳ ಚೆಕ್‌ಗಳು ಮಾರ್ಚ್‌ನಲ್ಲಿ ಕಳುವಾಗಿದ್ದವು. ಈ ಬಗ್ಗೆ, ನಿಗಮದ ಖಾತೆ ಹೊಂದಿರುವ ಐಸಿಐಸಿಐ ಬ್ಯಾಂಕ್‌ಗೆ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ದೂರು ದಾಖಲಾಗಿತ್ತು.
ಮೇ 4 ರಂದು ನಿಗಮದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರವಿಕುಮಾರ್ ಅಕ್ರಮ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಪ್ರಶ್ನಿಸಲು ಮುಂದಾದ ಅಧಿಕಾರಿಗಳಿಗೆ ಧಮ್ಕಿ ಹಾಕಿಲು ಮುಂದಾಗಿದ್ದಾರೆ. ಹಿರಿಯ ಕೆಎಎಸ್ ಅಧಿಕಾರಿಯಾದ ನಿಗಮದ ಎಂಡಿ ಲೀಲಾವತಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಲ್ಲದೇ, ಜಿಎಂ ಡಾ.ಬಿ.ಕೆ ನಾಗರಾಜಪ್ಪ ಅವರಿಗೆ ವಾಟ್ಸ್‌ಆಪ್ ವಾಯ್ಸ್ ಮೆಸೇಜ್‌ನಲ್ಲಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಲೀಲಾವತಿ ಹಾಗೂ ಡಾ.ಬಿ.ಕೆ. ನಾಗರಾಜಪ್ಪ ನೀಡಿರುವ ದೂರಿನನ್ವಯ ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ IPC 420 506 504 509, 380, 465 468 471 ಅಡಿ ಪ್ರಕರಣ ದಾಖಲಾಗಿದೆ.
ಕಳುವಾಗಿದ್ದ ಚೆಕ್ ಬಳಸಿ ರಾಯಚೂರು ಜಿಲ್ಲೆಗೆ 52 ಲಕ್ಷ ಅಕ್ರಮವಾಗಿ ಜಮಾ ಮಾಡಿರುವುದಲ್ಲದೇ 60 ಅಕ್ರಮ ಫಲಾಪೇಕ್ಷಿಗಳ ಹೆಸರಲ್ಲಿ 1.83 ಲಕ್ಷ ಮಂಜೂರಾತಿಗೆ ಸಹಿ ಪೋರ್ಜರಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ರವಿಕುಮಾರ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PSI Scam | ಹೋರಾಟ ಮಾಡೋಣ ಬನ್ನಿ ಎಂದವನೇ A1; ಇಪ್ಪತ್ತೆರಡು ಅಭ್ಯರ್ಥಿಗಳ ವಿರುದ್ಧ FIR