Site icon Vistara News

ಬೆಂಗಳೂರಿನಲ್ಲಿ 2 ಗಂಟೆಗಳ ಭಾರಿ ಮಳೆಗೆ 1177 ಮನೆಗಳು ಜಲಾವೃತ

rain

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಶುಕ್ರವಾರದ ಸುರಿದಿದ್ದ ಭಾರಿ ಮಳೆಯಿಂದಾಗಿ ಜಲಾವೃತ್ತವಾಗಿದ್ದು ಬರೊಬ್ಬರಿ 1177 ಮನೆಗಳು ಎಂದು ಬಿಬಿಎಂಪಿಯ ಅಂಕಿ ಅಂಶಗಳು ತಿಳಿಸಿವೆ.
ಕೇವಲ 2 ಗಂಟೆಗಳ ಮಳೆಗೆ 2 ವಲಯಗಳು ಜಲಾವೃತವಾಗಿತ್ತು. ಮಹದೇವಪುರ ಹಾಗು ಯಲಹಂಕದಲ್ಲಿ ಪ್ರವಾಹ ಉಂಟಾಗಿತ್ತು. ಜಲಾವೃತ್ತಗೊಂಡಿದ್ದ‌ ಮನೆಗಳ ಸರ್ವೇ ಕಾರ್ಯ ಆರಂಭ ಆಗಿದೆ. ಮಹಾದೇವಪುರದಲ್ಲಿ 1068, ಯಲಹಂಕದಲ್ಲಿ 109 ಮನೆಗಳನ್ನು ಈಗಾಗಲೇ ಪಾಲಿಕೆ ಗುರುತಿಸಿದೆ.
ಸಮಸ್ಯೆಗೆ ಈಡಾದವರ ಬ್ಯಾಂಕ್ ಖಾತೆ ಸೇರಿದಂತೆ ಇತರೆ ಮಾಹಿತಿ ಸಂಗ್ರಹಿಸಲಾಗಿದೆ. ಹಾನಿಗೊಳಗಾದ ಮನೆಗಳಿಗೆ 25,000 ರೂಪಾಯಿ ಪರಿಹಾರ ದೊರೆಯಲಿದೆ.

ರಾಜಕಾಲುವೆಗಳ ಅಭಿವೃದ್ಧಿ
ರಾಜಕಾಲುವೆಗಳ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಹಿಂದೆ‌ ಅನ್ನೋದು ಸಾಬೀತಾಗಿದೆ. ಆದರೆ
ಸರ್ಕಾರ ನೀಡಿರುವ ಅನುದಾನ ಬಳಸಿ ರಾಜಕಾಲುವೆ ಅಭಿವೃದ್ದಿಗೊಳಿಸಲು‌ ಪಾಲಿಕೆ ಇದೀಗ ಸಜ್ಜಾಗಿದೆ.
ಸರ್ಕಾರದ ಅನುದಾನದಿಂದ‌ ಪಾಲಿಕೆಯ ವತಿಯಿಂದ ಕ್ರಿಯಾ ಯೋಜನೆ ಸಿದ್ಧವಾಗಿದೆ.
1500 ಕೋಟಿ ರೂಪಾಯಿ ವೆಚ್ಚದಲ್ಲಿ 171 ಕಿಮೀ ರಾಜಕಾಲುವೆ ಅಭಿವೃದ್ಧಿ ಆಗಲಿದೆ.
ಪ್ರಾಥಮಿಕ ಮತ್ತು ದ್ವೀತಿಯ ಹಂತದ ರಾಜಕಾಲುವೆಗಳ ಅಭಿವೃದ್ಧಿಗೆ ಅನುದಾನ ಬಳಕೆಯಾಗಲಿದೆ.
ಮೂರನೇ ಹಂತದ ರಾಜಕಾಲುವೆಯನ್ನು ತನ್ನ ಸ್ವಂತ ಹಣದಿಂದ ಅಭಿವೃದ್ದಿಗೊಳಿಸಬೇಕು ಎಂದು ಬಿಬಿಎಂಪಿಗೆ ರಾಜ್ಯ ಸರ್ಕಾರ ಷರತ್ತು ವಿಧಿಸಿದೆ.

Exit mobile version