ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಲಕ್ಷಾಂತರ ಲೀಟರ್ ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಹರಿದು ಬಂದಿದೆ. ಅದರಲ್ಲೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ನಡುವೆ ಭರ್ಜರಿ ಲಿಕ್ಕರ್ ಸೇಲ್ಸ್ ದಾಖಲಾಗಿದೆ.
ಮದ್ಯ ಮಾರಾಟ ವಿವರ ಇಂತಿದೆ
ಡಿ.27–3.57 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟ.
ಡಿ.28–2.31 ಲಕ್ಷ ಲೀಟರ್ ಐಎಂಎಲ್, 1.67 ಲಕ್ಷ ಲೀಟರ್
ಡಿ.29–2.31 ಲಕ್ಷ ಲೀಟರ್ ಐಎಂಎಲ್, 1.93 ಲಕ್ಷ ಲೀಟರ್
ಡಿ.30–2.93 ಲಕ್ಷ ಲೀಟರ್ ಐಎಂಎಲ್, 2.59 ಲಕ್ಷ ಲೀಟರ್
ಡಿ.31–3.00 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್
ಡಿಸೆಂಬರ್ 31ಕ್ಕೆ ಒಂದೇ ದಿನ ಮೂರು ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟವಾಗಿದೆ. 2.41 ಲಕ್ಷ ಲೀಟರ್ ಬಿಯರ್ ಸೇಲ್ ಆಗಿದೆ.
ಡಿಸೆಂಬರ್ 31 ರ ಒಂದು ದಿನದ ಮದ್ಯ ವ್ಯಾಪಾರ 181 ಕೋಟಿ ರೂ.ಗೆ ಏರಿತ್ತು. ಕಳೆದ ಒಂಭತ್ತು ದಿನಗಳಲ್ಲಿ, ಅಂದರೆ ಡಿ. 23 ರಿಂದ ಡಿ.31 ತನಕ 1262 ಕೋಟಿ ರೂ. ಮದ್ಯ ವಿಕ್ರಯವಾಗಿದೆ. ಇದರಿಂದ ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ. ರೂ. ಲಭಿಸಿದೆ. ಕಳೆದ ಡಿ.23 ರಿಂದ 31 ರವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
2020 ರಲ್ಲಿ 17.48 ಲಕ್ಷ ಲೀಟರ್ ಐಎಂಎಲ್, 10.62 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2021 ರಲ್ಲಿ 19.46 ಲಕ್ಷ ಲೀಟರ್ ಐಎಂಎಲ್ ಮದ್ಯ, 11.24 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು.