ಬೆಂಗಳೂರು: ಐತಿಹಾಸಿಕ ಹಾಗೂ ಬೆಂಗಳೂರಿನ ಪ್ರಮುಖ ಉತ್ಸವಗಳಲ್ಲೊಂದಾದ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಈ ಬಾರಿ ಎಂದಿಗಿಂತಲೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದ್ದು, ಬರೊಬ್ಬರಿ 450ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.
ಕರೊನಾ ಕಾರಣಕ್ಕೆ ಕಳೆದೆರಡು ವರ್ಷ ಸಾರ್ವಜನಿಕವಾಗಿ ಕರಗ ನಡೆದಿಲ್ಲ. ಈ ಬಾರಿ ಕರೊನಾ ಸಂಕಷ್ಟ ಕಡಿಮೆಯಾಗಿರುವುದರಿಂದ ಜನರು ಸೇರಲು ಅವಕಾಶ ನೀಡಲಾಗಿದೆ. ಹೀಗಾಗಿ ಹೆಚ್ಚಿನ ಭಕ್ತರು ಸೇರುವ ಅಂದಾಜಿದೆ. ಅದರ ಜತೆಗೆ, ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ಸೇರಿ ಅನೇಕ ವಿಚಾರದಲ್ಲಿ ಹಿಂದು ಮುಸ್ಲಿಂ ನಡುವೆ ಕಲಹೆ ನಡೆಯುತ್ತಿದೆ.
ಇದರ ಮುಂದುವರಿದ ಭಾಗವಾಗಿ ಕೆಲವರು, ಹಿಂದುಗಳ ಪವಿತ್ರ ಉತ್ಸವವಾದ ಕರಗ ಮಹೋತ್ಸವದಲ್ಲಿ ಹಸಿ ಕರಗ ಹೊತ್ತುಕೊಂಡು ಬಳೇಪೇಟೆಯ ಮಸ್ತಾನ್ ಷಾ ದರ್ಗಾಕ್ಕೆ ಭೇಟಿ ನೀಡುವುದು ಬೇಡ ಎಂದು ಕೆಲವರು ಹೇಳಿಕೆ ನೀಡಿದ್ದರು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಸ್ಥಗಿತಗೊಳಿಸಬೇಕು ಎಂಬ ಹೇಳಿಕೆಗಳಿಂದ ಚರ್ಚೆ ಕಾವು ಏರಿತ್ತು.
ಈಗಾಗಲೆ ಈ ಕುರಿತು ಸಚಿವ ಆರ್. ಅಶೋಕ್ ಸೇರಿ ಅನೇಕರು ಹೇಳಿಕೆ ನೀಡಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಯಾವುದೇ ಸಂಪ್ರದಾಯವನ್ನು ಬದಲಾಯಿಸುವುದಿಲ್ಲ. ಕರಗ ಶಕ್ತ್ಯೋತ್ಸವ ಎಂದಿನಂತೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಇಷ್ಟೆಲ್ಲದರ ನಂತರವೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಿಭಾಗ DCP ಎಂ.ಎನ್. ಅನುಚೇತ್, ಏಪ್ರಿಲ್ 13ರ ದೀಪೋತ್ಸವ, 14ರ ಹಸಿ ಕರಗ ಹಾಗೂ 16ರ ಮಹೋತ್ಸವಗಳಂದು ಪ್ರಮುಖವಾಗಿ ಬಂದೋಬಸ್ತ್ ವ್ಯವಸ್ಥೆ ಹೆಚ್ಚಿರುತ್ತದೆ. ಜನರ ನಿಯಂತ್ರಣ, ಸಂಚಾರ ನಿಯಂತ್ರಣ ಹಾಗೂ ಕರಗ ಹೋಗುವ ಮಾರ್ಗದಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಉತ್ಸವ ಸಮಿತಿಯವರ ನಿರ್ಧಾರಕ್ಕೆ ಅನುಗುಣವಾಗಿ ಎಲ್ಲ ಬಂದೋಬಸ್ತ್ ನೀಡಲಾಗುತ್ತಿದೆ.
ವಿಶೇಷವಾಗಿ ಏಪ್ರಿಲ್ 16ರಂದು ಹೆಚ್ಚಿನ ಸಿಬ್ಬಂದಿ ನಿಯೋಜನೆ ಆಗಲಿದ್ದಾರೆ. 38 ಅಧಿಕಾರಿಗಳು, 428 ಸಿಬ್ಬಂದಿ ಸೇರಿ 450ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿಯೂ ಜನದಟ್ಟಣೆಗೆ ಅನುಗುಣವಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಎಲ್ಲ ಕಡೆಗಳಲ್ಲಿ ಸಿಸಿಟಿವಿ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಮಸ್ತಾನ್ ಷಾ ದರ್ಗಾ ಪ್ರವೇಶ ಸೇರಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಲು ಯಾರೇ ಬಂದರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅನುಚೇತ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಕರಗ ಮಹೋತ್ಸವ ಆಚರಣೆಗಳು
ಏಪ್ರಿಲ್ 16ರಂದು ಕರಗ ಉತ್ಸವ ಸಾಗುವ ಮಾರ್ಗ
‘ಬೆಂಗಳೂರು ಸಿಟಿ ತಿಗಳರಪೇಟೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಶನಿವಾರ ರಾತ್ರಿ 12-30ಕ್ಕೆ ಬಿಜಯ ಮಾಡಿಸಿ ಶ್ರೀ ಗಣಪತಿ ದೇವಾಲಯ ಮತ್ತು ಮುತ್ಯಾಲಮ್ಮ ದೇವಾಲಯಗಳಲ್ಲಿ ಪೂಜೆಯನ್ನು ಸ್ವೀಕರಿಸಿ, ಅಲಸೂರುಪೇಟೆ ಆಂಜನೇಯಸ್ಹಾಮಿ, ಶ್ರೀರಾಮ ದೇವಾಲಯ ಮತ್ತು ಶ್ರೀ ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆಗಳನ್ನು ಸ್ವೀಕರಿಸಿ, ನಗರ್ತರ ಪೇಟೆಯ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯದಿಂದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಯನ್ನು ಸ್ವೀಕರಿಸಿ, ಸಿದ್ದಣ್ಣ ಗಲ್ಲಿ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್‌ಪೇಟೆ 14ನೇ ಕ್ರಾಸಿನಲ್ಲಿರುವ ಶ್ರೀ ರಾಮ ಸೇವಾ ಮಂದಿರ, 15ನೇ ಗಲ್ಲಿ ಮತ್ತು ಆಂಜನೇಯಸ್ಟಾಮಿ ದೇವಾಲಯಗಳಲ್ಲಿ ಪೂಜೆಗಳನ್ನು ಸ್ಟೀಕರಿಸಿ ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯ ಸ್ಟಾಮಿ ದೇವಸ್ಥಾನದಲ್ಲಿ ಪೂಜೆ.
ನಂತರ ಚಾಮುಂಡೇಶ್ವರಿ ದೇವಸ್ಥಾನ (ಕಾಳಮ್ಮನಗುಡಿ)ಯಿಂದ ಅವಿನ್ಯೂ ರಸ್ತೆಯ ಈಶ್ವರ ದೇವಾಲಯದವರೆಗೆ ಆಗಮಿಸುವುದು ನಂತರ ದೊಡ್ಡಪೇಟೆ ಮೂಲಕ ಕೋಟಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸ್ಟೀಕರಿಸಿ ನಂತರ ಶ್ರೀ ಕೃಷ್ಣೆರಾಜೇಂದ್ರ ಮಾರುಕಟ್ಟೆ ಸಮೀಪದ ಶ್ರೀ ಉದ್ಧವ ಗಣಪತಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ ಪೋಲೀಸ್ ರಸ್ತೆ ಮೂಲಕ ಮುರಹರಿ ಸ್ಟಾಮಿ ಮಠ, ಬೀರೇದೇವರ ಗುಡಿ, ಅರಳೇಪೇಟೆ ಮುಖ್ಯರಸ್ತೆ ಮಾರ್ಗವಾಗಿ ಅರಳೇಪೇಟೆಯಲ್ಲಿರುವ ಶ್ರೀ ಲಕ್ಷೀನಾರಾಯಣಸ್ಟಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ಬಳೇಪೇಟೆ ಬಳೇಗರಡಿ ಮಾರ್ಗವಾಗಿ ಮಸ್ತಾನ್ ಸಾಹೇಬರ ದರ್ಗಾದಲ್ಲಿ ಪೂಜೆ ಸ್ವೀಕಾರ.
ನಂತರ ಶ್ರೀ ನಿಮಿಷಾಂಭ ದೇವಾಲಯದಲ್ಲಿ ಪೂಜೆಯನ್ನು ಸ್ವೀಕರಿಸಿ, ನಗರದೇವತೆ ಶ್ರೀ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಂತರ ಕಿಲಾರಿ ರಸ್ತೆಯಲ್ಲಿರುವ ಶ್ರೀ ಚಿಕ್ಕ ಧರ್ಮರಾಯಸ್ಜಾಮಿ ದೇವಾಲಯದಲ್ಲಿ ಪೂಜೆ ಸ್ಟೀಕರಿಸಿ, ಯಲಹಂಕ ಗೇಟ್ ಶ್ರೀ ಆಂಜನೇಯಸ್ಟಾಮಿ ದೇವಸ್ಥಾನದಲ್ಲಿ ಪೂಜೆಯನ್ನು ಸ್ಟೀಕರಿಸಿ, ಅವೆನ್ಯುರಸ್ತೆ ಮೂಲಕ ಶ್ರೀ ತುಪ್ಪದಾಂಜನೇಯ ಸ್ಹಾಮಿ ಗುಡಿ, ಶ್ರೀ ರಂಗನಾಥಸ್ಪಾಮಿ. ಶ್ರೀ ಜೌಡೇಶ್ವರಿ ಗುಡಿಗಳಲ್ಲಿ ಪೂಜೆ ಸ್ಟೀಕರಿಸಿ, ಸಿ.ಟಿ. ರಸ್ತೆಯ
ಮೂಲಕ ಕುಂಬಾರಪೇಟೆ ಮುಖ್ಯರಸ್ತೆಯನ್ನು ಪ್ರವೇಶಿಸಿ ಗೊಲ್ಲರಪೇಟಿ, ತಿಗಳರಪೇಟಿಗಳಲ್ಲಿ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆಯನ್ನು ಸ್ವೀಕರಿಸಿ ಆನಂತರ ಹಾಲುಬೀದಿ, ಕಬ್ಬನ್‌ಪೇಟೆ ಮೂಲಕ ಸುಣ್ಣಕಲ್‌ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜಾದಿಗಳನ್ನು ಸ್ಟೀಕರಿಸಿ, ನರಸಿಂಹ ಜೋಯಿಸ್ ಗಲ್ಲಿ ಮೂಲಕ ಹಾದು ದೇವಾಲಯವನ್ನು ಸೇರುತ್ತದೆ.