ಬೆಂಗಳೂರು: ನಿವೃತ್ತ ಯೋಧ ಸುರೇಶ್ @ ಜೂಡ್ ಕೊಲೆ ಪ್ರಕರಣ ಭೇದಿಸುವಲ್ಲಿ ಹಲಸೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲಿ ಪ್ರಮುಖ ಆರೋಪಿ
ಬಾಬು ಕುಟ್ಟಿ ನಾಯಕ್ ಸೇರಿ ಐವರನ್ನು ಬಂಧಿಸಿದ್ದಾರೆ.
ಘಟನೆ ವಿವರ: ಇಬ್ಬರು ಪತ್ನಿಯರು-ಮಕ್ಕಳಿದ್ದರೂ ಸುರೇಶ್ ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಸಮೀಪದ ಗೌತಮ್ ಕಾಲೋನಿಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಈ ವೇಳೆ ಆರೋಪಿ ಬಾಬು ನಾಯಕ್ ಸುರೇಶರನ್ನು ಪರಿಚಯ ಮಾಡಿಕೊಂಡಿದ್ದಾರೆ. ಈತನ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ ಇರುವ ಮಾಹಿತಿ ಪಡೆದುಕೊಂಡು ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ.
ಅದರಂತೆ ಆಂಧ್ರದಲ್ಲಿದ್ದ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದಾನೆ. ನಿನ್ನೆ ತನ್ನ ತಂಡದೊಂದಿಗೆ ಬಂದು ಸುರೇಶ್ ಕೈಕಾಲು ಕಟ್ಟಿ ಕಬ್ಬಿಣದ ಸಲಾಕೆಯಿಂದ ತಲೆಯ ಭಾಗಕ್ಕೆ ಹೊಡೆದು ಮನೆಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು
ಪೊಲೀಸರು, ಶ್ವಾನದಳಕ್ಕೆ ಸುಳಿವು ಸಿಗಬಾರದೆಂದು ಶವದ ಸುತ್ತಮುತ್ತ ಕಾರದಪುಡಿ ಹಾಕಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಹಲಸೂರು ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ. ತೆಲುಗಿನ ಕೊಲೆ ಪ್ರೇರಿತ ಸಿನಿಮಾಗಳನ್ನ ನೋಡಿ ಆರೋಪಿಗಳು ಕೊಲೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.