Site icon Vistara News

Illegal mobile to jail | ‌ಪರಪ್ಪನ ಅಗ್ರಹಾರ ಜೈಲಿಗೆ ಅಕ್ರಮವಾಗಿ ಮೊಬೈಲ್‌ ರವಾನಿಸಿದ್ದ ಮಹಿಳೆ ವಿರುದ್ಧ ಕೇಸ್

Teachers Recruitment Scam

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯ ಭೇಟಿಯ ಸಲುವಾಗಿ ಬಂದಿದ್ದ ಮಹಿಳೆಯೊಬ್ಬರು ಅಕ್ರಮವಾಗಿ ಎರಡು ಮೊಬೈಲ್‌ಗಳನ್ನು ರವಾನಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ಜೈಲು‌ ಸಿಬ್ಬಂದಿ ತಪಾಸಣೆ ನಡೆಸಿದ ಸಂದರ್ಭ ಉಮ್ನಾಶಾಮ್ ಎಂಬುವರು ಸಿಕ್ಕಿ ಬಿದ್ದಿದ್ದಾರೆ. ವಿಚಾರಣ ಕೈದಿ ಮಹಮ್ಮದ್ ನದೇಮ್‌ನನ್ನು ಭೇಟಿ ಮಾಡಲು ಉಮ್ನಾಶಾಮ್‌ ಬಂದಿದ್ದಳು. ಬರುವಾಗ ಮೊಬೈಲ್‌ಗಳನ್ನು ಬಚ್ಚಿಟ್ಟುಕೊಂಡಿದ್ದರು.

ಮಹಮ್ಮದ್ ನದೇಮ್‌ನ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಲು ಮೊಬೈಲ್ ರವಾನೆಯಾಗಿತ್ತು. ಮಹಿಳೆಯಿಂದ ಮೊಬೈಲ್ ತರಿಸಿಕೊಂಡರೆ, ಸಿಬ್ಬಂದಿ ಚೆಕ್ ಮಾಡುವುದಿಲ್ಲ‌ ಎಂದು ಮಹಮ್ಮದ್ ನದೇಮ್ ಭಾವಿಸಿದ್ದ. ಸದ್ಯ ಮಹಿಳೆ ಉಮ್ನಶಾಮ ಹಾಗೂ ಆರೋಪಿ ಮಹಮ್ಮದ್ ನದೇಮ್ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version