ಬೆಂಗಳೂರು: ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ ೫ರಿಂದ ೧೫ರವರೆಗೂ ಫಲಪುಷ್ಪ ಪ್ರದರ್ಶನ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಕೋವಿಡ್ ಕಾರಣದಿಂದ ಕಳೆದ ೨ ವರ್ಷಗಳಿಂದ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಸೀಮಿತ ಫ್ಲವರ್ ಶೋ ಆಯೋಜಿಸಲಾಗಿತ್ತು.
ಈ ಬಾರಿ ಡಾ. ರಾಜ್‌ಕುಮಾರ್ ಹಾಗು ಪುನೀತ್ ರಾಜ್‍ಕುಮಾರ್ ಅವರ ಕಲಾಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣವಾಗಲಿದೆ.
ಪ್ರವೇಶ ಶುಲ್ಕ ಏರಿಕೆ
ಈ ಬಾರಿ ಫಲಪುಷ್ಪ ಪ್ರದರ್ಶನ ವೇಳೆ ಲಾಲ್‌ಬಾಗ್ ಪ್ರವೇಶ ಶುಲ್ಕ ಏರಿಕೆಯಾಗಲಿದೆ.
ಸಾಮಾನ್ಯ ದಿನಗಳಲ್ಲಿ ೭೦ ರೂ. ಇರುವ ದರ ೮೦ ರೂ.ಗೆ ಹೆಚ್ಚಳವಾಗಲಿದೆ.
ವಾರಾಂತ್ಯದಲ್ಲಿ ೧೦೦ ರೂಪಾಯಿಗೆ ಶುಲ್ಕ ಏರಿಕೆಯಾಗಲಿದೆ.