Site icon Vistara News

ಹಿಂದಿನ ಸಮಿತಿಯಲ್ಲೂ ಬಸವಣ್ಣ ಪಾಠದಲ್ಲಿ ದೋಷ: ಸಾಣೇಹಳ್ಳಿ ಶ್ರೀಗಳ ಆರೋಪ

sanehalli-mutt-swamiji

ಬೆಂಗಳೂರು: ಬಸವಣ್ಣನವರ ಕುರಿತ ಪಾಠದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯಷ್ಟೇ ಅಲ್ಲ, ಇದಕ್ಕೂ ಹಿಂದಿನ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಪ್ರೊ. ಮುಡಂಬಡಿತ್ತಾಯ ಅಧ್ಯಕ್ಷತೆಯ ಸಮಿತಿಗಳು ರೂಪಿಸಿರುವ ಪಾಠದಲ್ಲಿಯೂ ದೋಷಗಳಿದ್ದವು ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Text book | ಮರುಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಸಿಎಂಗೆ ಹೆಚ್‌.ಡಿ. ದೇವೇಗೌಡ ಪತ್ರ

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಾಣೆಹಳ್ಳಿ ಸ್ವಾಮೀಜಿ “”ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯವರು ಹೊರ ತಂದಿರುವ 9ನೇ ತರಗತಿಯ ಸಮಾಜ ವಿಜ್ಞಾನದ ಭಾಗ 1 ಪಠ್ಯದಲ್ಲಿ ಬಸವಣ್ಣನವರ ಬಗೆಗಿನ ಪಾಠದಲ್ಲಿ ಸಾಕಷ್ಟು ದೋಷಗಳಿವೆ. ಇವರಿಗಿಂತ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಮುಡಂಬಡಿತ್ತಾಯ ಅಧ್ಯಕ್ಷತೆಯ ಪಠ್ಯ ರಚನಾ ಸಮಿತಿಯು ಬಸವೇಶ್ವರ ಎನ್ನುವ ಪಾಠದಲ್ಲಿ ಇತಿಹಾಸಕ್ಕೆ ಪೂರಕವಲ್ಲದ ಬಸವತತ್ವಕ್ಕೆ ಅಪಚಾರ ಮಾಡುವ ವಿಷಯಗಳನ್ನೇ ಸೇರಿಸಿದ್ದರು. ಬರಗೂರು ರಾಮಚಂದ್ರಪ್ಪ ಸಮಿತಿ ಈ ಪಠ್ಯದಲ್ಲಿ ಸಾಕಷ್ಟು ಪರಿಷ್ಕರಣೆ ಮಾಡಿ, ಅವರ ಪಠ್ಯದಲ್ಲೂ ವೀರಶೈವ ಸಿದ್ಧಾಂತವನ್ನು ಪ್ರಚುರಪಡಿಸಿದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಎನ್ನುವ ದೋಷಗಳಿವೆʼʼ ಎಂದು ವಿವರಿಸಿದ್ದಾರೆ.

ಆದ್ದರಿಂದ ಹಿಂದಿನ ಪಠ್ಯಗಳನ್ನು ಬಿಟ್ಟು ಹೊಸದಾಗಿ ಬರೆಸಿ ವಿದ್ಯಾರ್ಥಿಗಳಿಗೆ ಕೊಡುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | ಪರಿಷ್ಕೃತ ಪಠ್ಯ ಹಿಂಪಡೆಯುವಂತೆ ಬೆಂಗಳೂರಲ್ಲಿ ನಾಳೆ ರ‍್ಯಾಲಿ, ಭಾಗಿಯಾಗಲಿದ್ದಾರೆ ದೇವೇಗೌಡ

Exit mobile version