Site icon Vistara News

Abuse case : ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡ ವಿಕೃತಿ ಅರೆಸ್ಟ್‌

man masturbates in front of young woman Accused arrested

ಬೆಂಗಳೂರು: ಕಾರನ್ನು ಪಾರ್ಕ್‌ ಮಾಡಿ ಒಳಗೆ ಕುಳಿತುಕೊಂಡಿದ್ದ ಯುವತಿಯೊಂದಿಗೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿದ್ದ. ವಿಕೃತಕಾಮಿ ನಡುರಸ್ತೆಯಲ್ಲೇ ಯುವತಿ ಎದುರಿಗೆ ಹಸ್ತಮೈಥುನ (Man Masturbates) ಮಾಡಿಕೊಂಡ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ (abuse case) ನಡೆದಿತ್ತು. ಇದೀಗ ಪೊಲೀಸರು ಆರೋಪಿ ಸುನೀಲ್‌ ಕುಮಾರ್ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ.

ಕಳೆದ ಜನವರಿ 5ರ ರಾತ್ರಿ 8:40 ರ ಸುಮಾರಿಗೆ ಈ ಘಟನೆ ನಡೆದಿತ್ತು. ಯುವತಿ ಎಕ್ಸ್‌ (ಟ್ವೀಟ್‌) ಮೂಲಕ ತಾನು ಅನುಭವಿಸಿದ ಈ ಘಟನೆಯನ್ನು ಹಂಚಿಕೊಂಡಿದ್ದಳು. ಸ್ನೇಹಿತರ ಜತೆ ಊಟಕ್ಕೆಂದು ಡಾಬಾಕ್ಕೆ ಹೋಗಲು ಮಹದೇವಪುರದ ಬಾಗ್ಮನೆ ಕಾನ್‌ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ಎದುರು ಪಾರ್ಕಿಂಗ್ ಸ್ಥಳದಲ್ಲಿ ಕಾಯುತ್ತಿದ್ದಳು.

ಈ ವೇಳೆ ಎಲ್ಲಿಂದಲ್ಲೋ ಬಂದ ಈ ದುಷ್ಟ ಸುನೀಲ್‌ ಕುಮಾರ್ ಶರ್ಮಾ ಅನುಚಿತವಾಗಿ ವರ್ತಿಸಿ, ಯುವತಿಯನ್ನೇ ದಿಟ್ಟಿಸುತ್ತಿದ್ದ. ಬಳಿಕ ಕಾರಿನ ಮುಂಭಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಗೆ ಬೆದರಿದ ಆಕೆ ಕೂಡಲೇ ಕಾರಿನ ಡೋರ್‌ ಲಾಕ್‌ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾದಳು. ಆದರೆ, ಕಾರಿನ ಹಿಂದೆ ಇನ್ನೊಂದು ಕಾರು ಇದ್ದ ಕಾರಣಕ್ಕೆ ಅಲ್ಲಿಂದ ಹೋಗಲು ಆಗಿರಲಿಲ್ಲ.

ಇದನ್ನೂ ಓದಿ: Road Accident : ಯಮನಂತೆ ಬಂದ ಟಂಟಂ ವಾಹನ; ವಿದ್ಯಾರ್ಥಿನಿ ದಾರುಣ ಸಾವು

ಹಸ್ತಮೈಥುನ ಮಾಡಿಕೊಂಡೆ, ಕಾರಿನ ಸುತ್ತಲು ಓಡಾಡಲು ಮುಂದಾಗಿದ್ದ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲೇ ನೋಡಿ ಸನ್ನೆ ಮಾಡಿದ್ದ. ಕೂಡಲೇ ಸಂತ್ರಸ್ತ ಯುವತಿ ಸ್ಟೇರಿಂಗ್ ಕೆಳಗೆ ಅವಿತುಕೊಂಡು, ಸೇಹಿತರಿಗೆ ಫೋನ್‌ ಮಾಡಿ ಕರೆಸಿಕೊಂಡಿದ್ದಳು. ಅವರೆಲ್ಲರೂ ಬರುತ್ತಿದ್ದಂತೆ ಈ ಕಾಮುಕ ಮಾಯವಾಗಿದ್ದ. ಸ್ವಲ್ಪ ಸಮಯದ ನಂತರ ಆತನಿಗಾಗಿ ಪಾರ್ಕಿಂಗ್ ಪ್ರದೇಶದಲ್ಲಿ ಹುಡುಕಾಡಿದ್ದರು, ಆದರೆ ಆತ ನಾಪತ್ತೆಯಾಗಿದ್ದ.

ಕಾಮುಕರಿಂದ ಹೆಣ್ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಯುವತಿ ಹಾಗೂ ಆಕೆ ಪೋಷಕರು ಟ್ವೀಟ್‌ ಮಾಡಿದ್ದರು. ಇದನ್ನೂ ಗಂಭೀರವಾಗಿ ಪರಿಗಣಿಸಿದ ಮಹಾದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಸುನೀಲ್‌ ಕುಮಾರ್ ಶರ್ಮಾನನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version