Site icon Vistara News

Abuse case: ನಡುರಸ್ತೆಯಲ್ಲಿ ಅಸಭ್ಯ ವರ್ತನೆ; ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡು ವಿಕೃತಿ

Man masturbates in front of young woman

ಬೆಂಗಳೂರು: ಕಾರ್‌ ಪಾರ್ಕ್‌ ಮಾಡಿ ಕುಳಿತುಕೊಂಡಿದ್ದ ಯುವತಿಯೊಂದಿಗೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ಎದುರಿಗೆ ವಿಕೃತನೊಬ್ಬ ಹಸ್ತಮೈಥುನ (Man Masturbates) ಮಾಡಿಕೊಂಡ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ (abuse case) ನಡೆದಿದೆ.

ಈ ಬಗ್ಗೆ ಯುವತಿ ಎಕ್ಸ್‌ (ಟ್ವೀಟ್‌) ಮೂಲಕ ತಾನು ಅನುಭವಿಸಿದ ಈ ಘಟನೆಯನ್ನು ಹಂಚಿಕೊಂಡಿದ್ದಾಳೆ. ಕಳೆದ ಜನವರಿ 5ರ ರಾತ್ರಿ 8:40 ರ ಸುಮಾರಿಗೆ ಮಹದೇವಪುರದ ಬಾಗ್ಮನೆ ಕಾನ್‌ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ಎದುರು ಪಾರ್ಕಿಂಗ್ ಸ್ಥಳದಲ್ಲಿದ್ದ ನನ್ನ ಕಾರಿನೊಳಗೆ ಕುಳಿತಿದೆ. ಈ ವೇಳೆ ಎಲ್ಲಿಂದಲ್ಲೋ ಬಂದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ನನ್ನನ್ನು ದಿಟ್ಟಿಸುತ್ತಿದ್ದ. ಬಳಿಕ ನನ್ನ ಕಾರಿನ ಮುಂಭಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಗೆ ಬೆದರಿದ ನಾನು ಕೂಡಲೇ ಕಾರಿನ ಡೋರ್‌ ಲಾಕ್‌ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾದೆ. ಆದರೆ, ನನ್ನ ಕಾರಿನ ಹಿಂದೆ ಇನ್ನೊಂದು ಕಾರು ಇದ್ದ ಕಾರಣಕ್ಕೆ ಅಲ್ಲಿಂದ ಹೋಗಲು ಆಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

https://x.com/BhatNush/status/1743319323182317891?s=20

ಹಸ್ತಮೈಥುನ ಮಾಡಿಕೊಂಡೆ, ಕಾರಿನ ಸುತ್ತಲು ಓಡಾಡಲು ಮುಂದಾಗಿದ್ದ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲೇ ನನ್ನ ನೋಡಿ ಸನ್ನೆ ಮಾಡಿದ್ದ. ಕೂಡಲೇ ನಾನು ಸ್ಟಿಯರಿಂಗ್ ಕೆಳಗೆ ಅವಿತುಕೊಂಡು, ನನ್ನ ಸೇಹಿತರಿಗೆ ಫೋನ್‌ ಮಾಡಿ ಕರೆಸಿಕೊಂಡೆ. ಅವರು ಬರುತ್ತಿದ್ದಂತೆ ಆತ ಮಾಯವಾಗಿದ್ದ. ಸ್ವಲ್ಪ ಸಮಯದ ನಂತರ ನಾವು ಪಾರ್ಕಿಂಗ್ ಪ್ರದೇಶದಲ್ಲಿ ಹುಡುಕಿದೆವು, ಆದರೆ ವ್ಯಕ್ತಿ ನಾಪತ್ತೆಯಾಗಿದ್ದ. ಇಂತಹ ಕಾಮುಕರಿಂದ ಹೆಣ್ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಯುವತಿ ಹಾಗೂ ಆಕೆ ಪೋಷಕರು ಟ್ವೀಟ್‌ ಮಾಡಿದ್ದಾರೆ. ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Self Harming: ನಾನು ಯಾರಿಗೂ ಮೋಸ ಮಾಡಿಲ್ಲ; ಡೆತ್‌ನೋಟ್‌ ಬರೆದಿಟ್ಟು ಯುವತಿ ಸೂಸೈಡ್‌

ರೈಲಿನಲ್ಲಿ ಮಲಗಿದ್ದ ಯುವತಿ ಮುಖದ ಎದುರೇ ಹಸ್ತಮೈಥುನ!

ಮುಂಬೈ: ರೈಲಿನಲ್ಲಿ (Train) ಮಲಗಿದ್ದ ಮಹಿಳೆಯ (Woman) ಮುಖದ ಎದುರೇ 47 ವರ್ಷದ ವಿಕೃತನೊಬ್ಬ ಹಸ್ತುಮೈಥುನ (Man Masturbates) ಮಾಡಿಕೊಂಡ ಘಟನೆ ಪೂರ್ಣ ಎಕ್ಸ್‌ಪ್ರೆಸ್ ರೈಲಿನಲ್ಲಿ (Poorna Express Train) ನಡೆದಿದೆ. ಕರ್ನಾಟಕದ ಗೋಕರ್ಣ (Karnataka Gokarna) ಸಮೀಪ ರೈಲು ಬರುತ್ತಿದ್ದಂತೆ ಆರೋಪಿ, ಮಲಗಿದ್ದ ಮಹಿಳೆಯ ಮುಖದ ಮುಂದೆ ಹಸ್ತಮೈಥುನ ಮಾಡಲು ಆರಂಭಿಸಿದ್ದಾನೆ. ಆ ಮಹಿಳೆಯ ಜತೆಗೆ ಬಂದಿದ್ದ ಇಬ್ಬರು ಸ್ನೇಹಿತರು ಇದನ್ನು ಗಮನಿಸಿ ಕೂಡಲೇ ರೈಲ್ವೆ ಪೊಲೀಸರಿಗೆ (Railway Police) ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಈ ಘಟನೆ ಮಂಗಳವಾರ ಬೆಳಗ್ಗೆ 7.30 ರ ಸುಮಾರಿಗೆ ಕರ್ನಾಟಕದ ಗೋಕರ್ಣ ರೈಲು ನಿಲ್ದಾಣದ ಬಳಿ ನಡೆದಿದೆ. ಮಹಿಳೆ ಮಲಗಿದ್ದಾಗ ಆರೋಪಿ ಆಕೆಯ ಬಳಿ ಬಂದು ಆಕೆಯ ಮುಖದ ಮುಂದೆ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದ. ಆಕೆಯೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಸ್ನೇಹಿತರು ಈ ಕೃತ್ಯವನ್ನು ಗಮನಿಸಿ, ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಗೋವಾದ ಕೊಂಕಣ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಗುಡ್ಲಾರ್ ಹೇಳಿದ್ದಾರೆ. ಅಂತಿಮವಾಗಿ ಪೊಲೀಸರು ಆತನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಆರೋಪಿಯನ್ನು ದತ್ತಾತ್ರೇಯ ಚವಾಣ್ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವನಾಗಿದ್ದಾನೆ. ಕೇರಳದ ಕಣ್ಣೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಮಾಹಿತಿ ನೀಡಿದ ಇನ್ಸ್‌ಪೆಕ್ಟರ್ ಗುಡ್ಲಾರ್, 22 ವರ್ಷದ ಸಂತ್ರಸ್ತ ಮಹಿಳೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಪೂರ್ಣ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಳು‌ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ಹಾಗೂ ಆ ಇಬ್ಬರು ಯುವಕರು ಸಿನಿಮಾಟೋಗ್ರಫಿ ಅಭ್ಯಾಸ ಮಾಡುತ್ತಿದ್ದು, ಕೆಲವು ವೀಡಿಯೊಗಳನ್ನು ಚಿತ್ರೀಕರಿಸಲು ಕೇರಳದಿಂದ ಗೋವಾಕ್ಕೆ ಹೋಗುತ್ತಿದ್ದರು. ಸಂತ್ರಸ್ತೆ ಕೇರಳದ ಕೋಜಿಕ್ಕೋಡ್ ಮೂಲದವರು. ಆರೋಪಿಯನ್ನು ಬಂಧಿಸಿದ ಬಳಿಕ ಆಕೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ನಾವು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version