Site icon Vistara News

ಗೃಹಸಚಿವರ ಮನೆ ಮುತ್ತಿಗೆ ಪ್ರಕರಣ: 30 ABVP ಕಾರ್ಯಕರ್ತರಿಗೆ ಸ್ಟೇಷನ್ ಬೇಲ್

ABVP ವಿದ್ಯಾರ್ಥಿಗಳ ಮುತ್ತಿಗೆ

ಬೆಂಗಳೂರು: ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 30 ABVP ಕಾರ್ಯಕರ್ತರಿಗೆ ಜೆಸಿ ನಗರ ಪೊಲೀಸರಿಂದ ಸ್ಟೇಷನ್ ಬೇಲ್ ನೀಡಲಾಗಿದೆ.

29 ಯುವಕರು, ಒಬ್ಬ ಯುವತಿ ಸೇರಿ 30 ಜನರನ್ನು ಜೆಸಿ ನಗರ ಪೊಲೀಸರು ಶನಿವಾರ ಬಂಧಿಸಿದ್ದರು. ವಿಚಾರಣೆ ನಡೆಸಿ ಷರತ್ತುಬದ್ದ ಜಾಮೀನನ್ನು ಪೊಲೀಸರು ನೀಡಿದ್ದಾರೆ. ಅವಶ್ಯಕತೆ ಇದ್ದರೆ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದು ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಆರಗ ಮನೆ ಮುತ್ತಿಗೆಯಿಂದ ಕಂಚಿಗೆ ಮುತ್ತಿಟ್ಟ ಕನ್ನಡಿಗನವರೆಗಿನ ಪ್ರಮುಖ ಸುದ್ದಿಗಳಿವು

ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು (Praveen Nettaru) ಬರ್ಬರ ಹತ್ಯೆ ಖಂಡಿಸಿ, ಶನಿವಾರ (ಜು.30) ಮುಂಜಾನೆ ೫೦ರಷ್ಟು ಎಬಿವಿಪಿ ಕಾರ್ಯಕರ್ತರು ಸಚಿವರ ಮನೆ ಮುಂದೆ ಧರಣಿ ನಡೆಸಿ ಬಳಿಕ ಮನೆಗೆ ಮುತ್ತಿಗೆ ಹಾಕಿದ್ದರು. ಕಾರ್ಯಕರ್ತರಿಗೆ ರಕ್ಷಣೆ ನೀಡಲಾಗದ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ನಗರ ಪೊಲೀಸ್‌ ಕಮಿಷನರ್ ಪ್ರತಾಪ್‌ ರೆಡ್ಡಿ, ಈ ರೀತಿ ನಡೆಯುವ ಬಗ್ಗೆ ಮುನ್ಸೂಚನೆ ಅರಿತುಕೊಳ್ಳಬೇಕಿತ್ತು. ಅದು ನಮ್ಮಿಂದ ಆಗಿಲ್ಲ. ಇದು ಸಮರ್ಥನೆ ಮಾಡುವ ವಿಚಾರವೇ ಅಲ್ಲ. ನಮಗೆ ಹತ್ತು ಗಂಟೆಗೆ ವಿಚಾರ ಗೊತ್ತಾಯಿತು. ನಮ್ಮ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವೈಫಲ್ಯವನ್ನು ಒಪ್ಪಿಕೊಂಡಿದ್ದರು.

ಇದನ್ನೂ ಓದಿ | ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ ; 30 ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

Exit mobile version