ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೈಕ್ ಸವಾರನೊಬ್ಬ ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲೇ ನರಳಾಡುವಂತಾಗಿದೆ. ಮರ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಒಂದು ತಿಂಗಳಾದರೂ ಇನ್ನೂ ಸುಧಾರಿಸಿಲ್ಲ. ಬೆನ್ನು ಮೂಳೆ ಮುರಿದುಕೊಂಡು ಬೈಕ್ ಸವಾರ ಚಂದನ್ ಹಾಸಿಗೆ ಹಿಡಿದಿದ್ದಾರೆ. ಚಂದನ್ ಕುಟುಂಬಸ್ಥರು ಈಗಾಗಲೇ 8 ಲಕ್ಷಕ್ಕೂ ಅಧಿಕ ವೆಚ್ವ ಭರಿಸಿದ್ದು, ಎರಡೆರಡು ಆಸ್ಪತ್ರೆಯಲ್ಲಿ ಚಂದನ್‌ಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸದ್ಯ ಇನ್ಸೂರೆನ್ಸ್ ಕ್ಲೈಮ್ ಮಾಡಿ ಚಂದನ್‌ಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದೀಗ ಮತ್ತಷ್ಟು ಮೆಡಿಕಲ್ ಬಿಲ್ ಏರುತ್ತಿದ್ದು, ಕಂಗಾಲಾಗಿದ್ದಾರೆ. ಈ ಮಧ್ಯೆ ಆ ಬಿಲ್, ಈ ಬಿಲ್ ಕೊಡಿ ಎಂದು ಬಿಬಿಎಂಪಿ ಅಧಿಕಾರಿಗಳು ಓಡಾಡಿಸುತ್ತಿದ್ದಾರೆ. ಪರಿಹಾರದ ಹಣ ಕೊಡಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: Road Accident : ಕೆಆರ್ ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಸವಾರ ಬಲಿ
ಸಿಸಿಟಿವಿಯಲ್ಲಿ ಸೆರೆಯಾದ ಅವಘಡ
ಮಾ.7ರ ಬೆಳಗ್ಗೆ ಚಂದನ್ ರಿಚ್‌ಮಂಡ್ ರಸ್ತೆಯಲ್ಲಿರುವ ತಮ್ಮ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ದಿಢೀರನೇ ಬೃಹತ್ ಮರದ ಕೊಂಬೆಯೊಂದು ಮುರಿದು, ನೇರವಾಗಿ ಚಂದನ್ ಮೇಲೆ ಬಿದ್ದಿತ್ತು. ಈ ದೃಶ್ಯವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಂಬೆ ಬಿದ್ದ ರಭಸಕ್ಕೆ ಚಂದನ್ ಅವರ ಬೆನ್ನು ಮೂಳೆಯೇ ಮುರಿದಿದ್ದು, ಕತ್ತಿನ ಭಾಗಕ್ಕೂ ಗಂಭೀರ ಗಾಯವಾಗಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಚಂದನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಒಂದು ತಿಂಗಳು ಕಳೆದರೂ ಚಂದನ್ ಆರೋಗ್ಯದಲ್ಲಿ ಸುಧಾರಣೆ ಆಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಾಸಿಗೆ ಹಿಡಿಯುವಂತಾಗಿದೆ.
ಬಿಬಿಎಂಪಿ ಹಾಗೂ ಶಾಲೆ ವಿರುದ್ಧ ಎಫ್‌ಐಆರ್
ಖಾಸಗಿ ಶಾಲೆಯ ಕಾಂಪೌಂಡ್‌ನಲ್ಲಿದ್ದ ಬೃಹತ್ ಮರದ ರಂಬೆ-ಕೊಂಬೆಗಳು ರಸ್ತೆಗೆ ಚಾಚಿಕೊಂಡಿತ್ತು. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿರಲಿಲ್ಲ. ಜತೆಗೆ ಖಾಸಗಿ ಶಾಲೆಯ ನಿರ್ಲಕ್ಷ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ
ಮುಖಾಮುಖಿ ಡಿಕ್ಕಿಗೆ 2 ಕಾರುಗಳು ಛಿದ್ರ ಛಿದ್ರ; ಚಾಲಕ ಸ್ಪಾಟ್ ಔಟ್
ಶಿವಮೊಗ್ಗ : ಎರಡು ಕಾರುಗಳ (Car Accident) ನಡುವೆ ಭೀಕರ ಅಪಘಾತ (Road Accident) ನಡೆದಿದ್ದು, ಸ್ಥಳದಲ್ಲೇ ಕಾರು ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ (Shivamogga News) ತಾಲೂಕಿನ ನಿದಿಗೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಶಿವಮೊಗ್ಗ ನಗರದ ಮೇಘರಾಜ್ ಮೃತ ದುರ್ದೈವಿ.
ಮೇಘರಾಜ್ ಮಾಚೇನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಕೆಲಸಕ್ಕೆಂದು ಕಾರಿನಲ್ಲಿ ತೆರಳುವಾಗ ಈ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೇಘರಾಜ್ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಎರಡು ಕಾರುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಮತ್ತೊಂದು ಕಾರಿನೊಳಗೆ ಸಿಲುಕಿದ್ದ ವ್ಯಕ್ತಿಗೂ ಗಾಯವಾಗಿದ್ದು, ಮಹಿಳೆಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳಿಗೆ ಸ್ಥಳೀಯರು ಅಪಚರಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆ ಮಧ್ಯದಲ್ಲಿದ್ದ ಕಾರುಗಳನ್ನು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಪೂರ್ಣಚಂದ್ರ ಖಾಸಗಿ ಬಸ್‌ವೊಂದು ಕೆರೆಗೆ ಇಳಿದಿದೆ. ಕೆರೆಯಲ್ಲಿ ನೀರು ಇಲ್ಲದ ಕಾರಣ ದೊಡ್ಡ ಅನಾವುತವೊಂದು ತಪ್ಪಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ ಆನವಟ್ಟಿಯಿಂದ ಸೊರಬಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಸ್ತೆ ತಿರುವು ಇದ್ದ ಕಾರಣ ಚಾಲಕ ನಿಯಂತ್ರಣ ತಪ್ಪಿದ್ದು, ನೇರವಾಗಿ ಕೆರೆಗೆ ಇಳಿದಿದೆ. ಬಸ್‌ನ ಮುಂಭಾಗ ಹಾನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ