ಬೆಂಗಳೂರು: ಯಂತ್ರಗಳು ಇರುವ ಉದ್ಯಮಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಎಷ್ಟೇ ಎಚ್ಚರ ವಹಿಸಿದರೂ ಸಾಕಾಗುವುದಿಲ್ಲ. ಅವರು ಧರಿಸುವ ಬಟ್ಟೆ, ತಲೆ ಕೂದಲು, ವೇಲುಗಳೇ ಅವರಿಗೆ ಅಪಾಯ ತಂದಿಡುವುದುಂಟು. ಬೆಂಗಳೂರಿನ ಒಂದು ಕಾರ್ಖಾನೆಯಲ್ಲಿ ಅಂತಹುದೇ ಘಟನೆ (Accidental death) ನಡೆದಿದೆ. ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ (Paint Mixer) ಕೂದಲು ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ (Woman Dead) ಮೃತಪಟ್ಟಿದ್ದಾರೆ.
ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ (Sri Paints Factory) ನಡೆದ ಘಟನೆಯಲ್ಲಿ ಶ್ವೇತಾ (34) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇದೊಂದು ಪೈಂಟ್ ಮಿಕ್ಸಿಂಗ್ ಕಾರ್ಖಾನೆಯಾಗಿದ್ದು, ಇಲ್ಲಿ ಒಂದು ಗ್ರೈಂಡರ್‌ನಲ್ಲಿ ಪೌಡರ್ ಮತ್ತು ಇತರ ಸಾಮಗ್ರಿಗಳನ್ನು ಹಾಕಿ ಬಣ್ಣವನ್ನು ತಯಾರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರೈಂಡರ್‌ಗೆ ಜಡೆ ಸಿಲುಕಿ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ.
ಗ್ರೈಂಡರ್‌ನ ಒಳಗೆ ಬಣ್ಣ ಗಟ್ಟಿಯಾಗಿತ್ತು. ಅದನ್ನು ಚೆಕ್ ಮಾಡಲೆಂದು ಒಳಗೆ ಬಗ್ಗಿದಾಗ ಒಮ್ಮೆಗೇ ತಲೆಕೂದಲು ಸಿಕ್ಕಿಹಾಕಿಕೊಂಡಿದೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್ ಸದ್ದಿನಿಂದಾಗಿ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಉಳಿದ ಕೆಲಸಗಾರರು ಬಂದು ನೋಡಿದಾಗ ಶ್ವೇತಾ ಸತ್ತುಬಿದ್ದಿದ್ದು ಕಂಡುಬಂತು.
ತಲೆಕೂದಲು ಸಿಕ್ಕಿಕೊಂಡ ಬಳಿಕ ಬ್ಲೇಡ್‌ಗಳು ಆಕೆಯ ಕೊರಳನ್ನೇ ಕತ್ತರಿಸಿದ್ದವು. ಆಗ ಆಕೆ ಹೊರಕ್ಕೆ ಎಸೆಯಲ್ಪಟ್ಟರು.
ಶ್ವೇತಾ ಅವರು ತಮ್ಮ ಗಂಡ ಮತ್ತು ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಈ ಘಟನೆಯಿಂದ ಕಾರ್ಖಾನೆ ಕಾರ್ಮಿಕರಲ್ಲಿ ಸೂತಕದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಇಂಥ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಆತಂಕ ಕೂಡಾ ಕಾಡುತ್ತಿದೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ, ಟೀ ಕುಡಿಯಲು ಬಂದವನ ಕೊಚ್ಚಿ ಕೊಂದರು
ಚಿಂತಾಮಣಿಯಲ್ಲಿ ಬಸ್- ಮಿನಿಬಸ್ ಅಪಘಾತ, ಒಬ್ಬನ ಸಾವು
ಚಿಕ್ಕಬಳ್ಳಾಪುರ: KSRTC ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿದ್ದು, ಒಬ್ಬ ಸಾವಿಗೀಡಾಗಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗೇಟ್ ಬಳಿ ಘಟನೆ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿದೆ. ಕೈವಾರ ಮೂಲದ ಇಲ್ಲು (40) ಮೃತ ವ್ಯಕ್ತಿ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಚಿಂತಾಮಣಿ – ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.