Site icon Vistara News

Acid Attack : ಕೌಟುಂಬಿಕ ಕಲಹ; ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಧೂರ್ತ ಗಂಡ

Acid Attack Anekal coupleAcid Attack Anekal couple

ಆನೇಕಲ್: ಹೆಣ್ಮಕ್ಕಳ ಮೇಲೆ ದುಷ್ಟರು, ಕಾಮುಕರು ಆಸಿಡ್‌ ದಾಳಿ (Acid Attack) ನಡೆಸುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ದುಷ್ಟ ಪತಿಯೇ ತನ್ನ ಹೆಂಡತಿಯ ಮೇಲೆ ಆಸಿಡ್‌ ದಾಳಿ (Man throws Acid on wife) ನಡೆಸಿದ್ದಾನೆ. ಘಟನೆ ನಡೆದಿರುವುದು ಬೆಂಗಳೂರು ಹೊರವಲಯದ (Bangalore News) ಆನೆಕಲ್‌ ತಾಲೂಕಿನ ಗೌರೇನ ಹಳ್ಳಿಯಲ್ಲಿ.

ಚಾಂದ್‌ ಪಾಷಾ (45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಂದ್‌ ಪಾಷಾ ಮತ್ತು ನಾಜಿಯಾ ಬೇಗಂ ಹಲವು ವರ್ಷದ ಹಿಂದೆ ಮದುವೆಯಾದವರು. ಆದರೆ, ಹಿಂದಿನಿಂದಲೇ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಗಂಡನ ಕಿರಿಕಿರಿಯಿಂದ ನಾಜಿಯಾ ಹತಾಶರಾಗಿದ್ದರು. ಆತ ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಹಿಂಸೆ ನೀಡುತ್ತಿದ್ದ. ಆದರೆ ನಾಜಿಯಾ ಅದನ್ನೆಲ್ಲ ಸಹಿಸಿಕೊಂಡಿದ್ದರು.

ಇದನ್ನೂ ಓದಿ: Family Problem : ಹೆಂಡತಿಗೆ ಮಂಡೆ ಸರಿ ಇಲ್ಲ ಎಂದ ಗಂಡನಿಗೆ ಹೈಕೋರ್ಟ್‌ ದಂಡ!

ಕೌಟುಂಬಿಕ ಕಲಹ ಇತ್ತೀಚೆಗೆ ತೀವ್ರವಾಗಿತ್ತು. ಈ ಹಂತದಲ್ಲಿ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ. ಮಾರ್ಚ್‌ 17ನೇ ತಾರೀಖಿನ ರಾತ್ರಿ ಪತ್ನಿ ಮಲಗಿದ್ದನ್ನು ಗಮನಿಸಿದ ಧೂರ್ತ ಗಂಡ ಆಕೆಯ ಮೇಲೆ ಮಲಗಿದಲ್ಲಿಗೇ ಆಸಿಡ್‌ ದಾಳಿ ನಡೆಸಿದ್ದಾನೆ. ಮನೆಯಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡಲು ಬಳಸುವ ಆಸಿಡನ್ನೇ ಆತ ಆಕೆಯ ಮೇಲೆ ಎರಚಿದ್ದ.

ಮಲಗಿದ್ದಾಗ ಒಮ್ಮಿಂದೊಮ್ಮೆಗೇ ಮುಖದ ಮೇಲೆ ಏನೋ ಬಿದ್ದು ಉರಿ ಏಳುತ್ತಿದ್ದಂತೆಯೇ ನಾಜಿಯಾ ಎದ್ದು ಜೋರಾಗಿ ಬೊಬ್ಬೆ ಹೊಡೆದರು. ಹೆಂಡತಿ ಕಿರುಚಾಡುತ್ತಿದ್ದಂತೆಯೇ ಚಾಂದ್‌ ಪಾಷಾ ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಸೇರಿ ನಾಜಿಯಾ ಅವರನ್ನು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಯ್ಲೆಟ್‌ಗೆ ಬಳಸುವ ಆಸಿಡ್‌ ಆಗಿದ್ದರಿಂದ ಸ್ವಲ್ಪ ದುರ್ಬಲವಾಗಿದೆ. ಹೀಗಾಗಿ ಆಕೆಯ ಪ್ರಾಣ ಉಳಿದಿದೆ ಎನ್ನಲಾಗಿದೆ.

ವಿಜಯಪುರದಲ್ಲಿ ಜೋಡಿ ಕೊಲೆ: ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

ವಿಜಯಪುರ: ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಕೊಲೆ (Murder Case) ಮಾಡಲಾಗಿದೆ. ಅವರಿಬ್ಬರೂ ಬೇರೆ ಬೇರೆಯವರಾಗಿದ್ದು, ಜತೆಯಾಗಿದ್ದಾಗ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಹಾಗಾಗಿ ಇದು ಅಕ್ರಮ‌ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ನಡೆದಿರುವ ಜೋಡಿ ಕೊಲೆ (Couple murder) ಆಗಿರಬಹುದು ಎಂದು ಸಂಶಯಿಸಲಾಗಿದೆ.

ಕೊಲೆಯಾದವರನ್ನು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35 ಮತ್ತು ಪಾರ್ವತಿ ತಳವಾರ (38) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಜತೆಯಾಗಿ ಗಣಿ ಗ್ರಾಮಕ್ಕೆ ಬರುವ ದಾರಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಇದೆ.

ನಿಡಗುಂದಿ ತಾಲೂಕಿನ‌ ಮಾರಡಗಿ ತಾಂಡಾದ ಸಮೀಪ ಸೋಮವಾರ ರಾತ್ರಿ ನಡೆದಿದೆ ಎನ್ನಲಾದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಲೆ ಯಾರು ಮಾಡಿದರು? ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಇಬ್ಬರೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವರಾಗಿದ್ದು, ಪ್ರತ್ಯೇಕ ಸಂಸಾರಗಳು ಇರುವುದರಿಂದ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇದ್ದಿರಬಹುದು, ಅದಕ್ಕಾಗಿ ಜತೆಯಾಗಿದ್ದಾಗಲೇ ಕೊಲೆ ಮಾಡಲಾಗಿದೆ ಎಂಬ ಸಂಶಯ ಪರಿಸರದಲ್ಲಿದೆ. ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version