Site icon Vistara News

Acid Attack | 8 ಕೆಜಿ ಆ್ಯಸಿಡ್‌ ಇಟ್ಟುಕೊಂಡಿದ್ದ ನಾಗೇಶ್‌ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸ್ತಿರೋದು ಒಂದೇ ಶಬ್ದ

Acid nagesh

ಬೆಂಗಳೂರು : ಕಾಮಾಕ್ಷಿ ಪಾಳ್ಯದಲ್ಲಿ ಯುವತಿ ಮೇಲೆ ಆ್ಯಸಿಡ್‌ ಎರಚಿದ್ದ ನಾಗೇಶ್‌ ಮೇಲೆ ತ್ವರಿತವಾಗಿ ಚಾರ್ಜ್‌ಶೀಟ್‌ ಹಾಕಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೆ ಆರೋಪಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಆ್ಯಸಿಡ್‌ ದಾಳಿ ನಡೆದಿದ್ದ ಸ್ಥಳ ಸೇರಿದಂತೆ ಹಲವೆಡೆ ಮಹಜರು ನಡೆಸಿದ್ದಾರೆ.

ಮಹಜರು ವೇಳೆ 8 ಕೆಜಿ ಆ್ಯಸಿಡ್‌ ಪತ್ತೆಯಾಗಿದ್ದು, ಆ್ಯಸಿಡ್‌ ತೆಗೆದುಕೊಳ್ಳಲು ನಕಲಿ ಲೆಟರ್ ಹೆಡ್‌ ಬಳಸಿದ್ದ. ಇದೀಗ ನಕಲಿ ಲೆಟರ್‌ ಹೆಡ್‌ ಹಾಗೂ ಆ್ಯಸಿಡ್‌ ಹಾಗೂ ಆ್ಯಸಿಡ್‌ ತೆಗೆದುಕೊಂಡು ಹೋಗಲು ಬಳಸಿದ್ದ ಕಾರು ಕೂಡ ನಾಗೇಶನಿಂದ ವಶ ಪಡಿಸಿಕೊಂಡಿದ್ದಾರೆ. ಈ ನಡುವೆ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಪೊಲೀಸರು ಕೇಳುವ ಪ್ರತಿಯೊಂದು ಪ್ರಶ್ನೆಗೂ ʼಸಾರಿʼ ಎಂಬ ಒಂದು ಶಬ್ದದ ಉತ್ತರವನ್ನು ನಾಗೇಶ್‌ ನೀಡುತ್ತಿದ್ದಾನೆ. ನಾಗೇಶ್ ಚಲನವಲನ ಕುರಿತು ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದು, ಸದ್ಯ ತಿರುವಣ್ಣಾಮಲೈಗೆ ಕಾಮಾಕ್ಷಿಪಾಳ್ಯ ಪೊಲೀಸರು ತೆರಳಿದ್ದಾರೆ.

ದನ್ನೂ ಓದಿ | Acid Attack | 16 ದಿನದಲ್ಲಿ 100 ಪೊಲೀಸರಿಗೆ ಕೆಲಸ ಕೊಟ್ಟ ಆ್ಯಸಿಡ್‌ ನಾಗೇಶ್‌

ಚಾರ್ಚ್ ಶೀಟ್ ಸಿದ್ಧತೆ :

ಇದೀಗ ಚಾರ್ಜ್‌ಶೀಟ್‌ ಸಲ್ಲಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಪೊಲೀಸ್ ಮಾರ್ಗದರ್ಶನದಲ್ಲಿ ಸಿದ್ಧತೆ ಆಗುತ್ತಿದ್ದು, ಪಾಸ್ಟ್ ಟ್ರ್ಯಾಕ್ ಕೊರ್ಟ್ ನೇಮಕ ಮಾಡಲು ಮನವಿ ಸಲ್ಲಿಸಲಾಗಿದೆ. ಪ್ರಕರಣದ ತೀವ್ರತೆ ಅರಿತು ಪಾಸ್ಟ್ ಟ್ರ್ಯಾಕ್ ಕೊರ್ಟ್ ಅನುವು ಮಾಡಿಕೊಡುವಂತೆ ನಗರ ಪೊಲೀಸ್ ಆಯುಕ್ತರಿಂದ ಕೋರ್ಟ್‌ ರಿಜಿಸ್ಟ್ರರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದರ ಜೊತೆಗೆ ಪ್ರಕರಣದ ವಾದ ಮಂಡನೆಗೆ ಸ್ಪೇಷಲ್ ಪಿಪಿ ನೇಮಕಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವ ಸಾಧ್ಯತೆಗಳಿದ್ದು, ಕೃತ್ಯ ನಡೆದಾಗ ಇದ್ದ ಪ್ರತ್ಯಕ್ಷದರ್ಶಿಗಳ ಸಾಕ್ಷಿ, ತಾಂತ್ರಿಕ ಆಯಾಮದಲ್ಲಿ ಕಲೆ ಹಾಕಿದ ಸಾಕ್ಷಿ, ಕೃತ್ಯಕ್ಕೆ ಬಳಸಿದ ವಸ್ತುಗಳ ಬಗ್ಗೆ ತನಿಖಾಧಿಕಾರಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Acid Attack | ಬೆಂಗ್ಳೂರ್‌ To ತಿರುವಣ್ಣಾಮಲೈ: ಆ್ಯಸಿಡ್‌ ನಾಗನ Travel History

Exit mobile version