ಬೆಂಗಳೂರು : ಬೊಜ್ಜು ಕರಗಿಸಲು ಹೋದ ಕಿರುತೆರೆ ನಟಿ ಚೇತನ ಸಾವಿನ ಬೆನ್ನಲ್ಲೆ ಮತ್ತೊಂದು ದುರಂತ ಸಂಭವಿಸಿದೆ. ಡೆಂಟಲ್ ಕ್ಲಿನಿಕ್‌ಗೆ ಹೋದ ನಟಿಯ ಮುಖವನ್ನೇ ವೈದ್ಯರು ವಿರೂಪಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಸಕತ್ ಆ್ಯಕ್ಟಿವ್ ಆಗಿದ್ದ ಸ್ವಾತಿ ಮುಖ ವೈದ್ಯರ ನಿರ್ಲಕ್ಷ್ಯದಿಂದ ವಿರೂಪವಾಗಿದೆ. ಎಫ್ಐಆರ್, 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ಸ್ವಾತಿ ನಟಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ನಟಿ ಸ್ವಾತಿ ಹಲ್ಲಿನ ಚಿಕಿತ್ಸೆಗಾಗಿ ಜೆಪಿ ನಗರದಲ್ಲಿರುವ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ರೂಟ್ ಕ್ಯಾನಲ್‌ಗೆ ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪ ತಾಳಿದೆ. ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ | Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು
ಫೈ ಸ್ಟಾರ್ ರಿವ್ಯೂ ನೋಡಿ ಕ್ಲಿನಿಕ್‌ಗೆ ಹೋಗಿದ್ದ ನಟಿಗೆ ಸ್ಟಾರ್ ಆಗುವ ಭಾಗ್ಯವನ್ನು ವೈದ್ಯರು ಕಸಿದಿದ್ದಾರೆ. ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತದೆ ಎಂದು ಡಾಕ್ಟರ್ ಹೇಳಿದ್ದರು. 20 ದಿನಗಳು ಕಳೆದರೂ ಊತ ಮಾತ್ರ ಕಡಿಮೆಯಾಗಿಲ್ಲ. ದಂತ ವೈದ್ಯೆಯ ಯಡವಟ್ಟಿನಿಂದ ಇದೀಗ ನಟಿ ಅವಕಾಶ ವಂಚಿತರಾಗಿದ್ದಾರೆ. ಸದ್ಯ ಕೆಲಸವಿಲ್ಲದೇ, ಸಿನಿಮಾದಲ್ಲೂ ನಟಿಸಲಾಗದೇ ಕಂಗಾಲಾಗಿದ್ದಾರೆ. ಸದ್ಯ ಬೇರೆ ಆಸ್ಪತ್ರೆಯಲ್ಲಿ ನಟಿ ಸ್ವಾತಿ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | ಫ್ಯಾಟ್ ಸರ್ಜರಿಯ ಇನ್ನೊಂದು ಎಡವಟ್ಟು: ಯುವತಿ ಸೊಂಟದಲ್ಲಿ ಕೀವು, ಗಾಯ