Site icon Vistara News

Aero India 2023: ಇಂದು, ನಾಳೆ ಏರೋ ಇಂಡಿಯಾ ಕೊನೆಯ ಶೋ, ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

Aero India

#image_title

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನವನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಫೆ. 16 ಹಾಗೂ 17ರಂದು ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ವೀಕ್ಷಣೆಗೆ ಅವಕಾಶವಿದ್ದು, ಇಂದು‌ ಮತ್ತು ನಾಳೆ ವೈಮಾನಿಕ‌ ಪ್ರದರ್ಶನದ ಕೊನೆಯ ದಿನಗಳಾಗಿವೆ. ಬೆಳಗ್ಗೆ 9‌.30ರಿಂದ‌ 11 ಗಂಟೆವರೆಗೂ‌ ಮೊದಲ‌ ಪ್ರದರ್ಶನ, ಮಧ್ಯಾಹ್ನ 2 ರಿಂದ 3.30ರವರೆಗೂ ಎರಡನೇ ಪ್ರದರ್ಶನ ನಡೆಯಲಿವೆ.

ವಸ್ತು ಪ್ರದರ್ಶನ‌ಕ್ಕೆ ಬೆಳಗ್ಗೆ 9ರಿಂದ 6 ಗಂಟೆವರೆಗೂ ಅವಕಾಶವಿದೆ. ಒಂದು‌ ಪಾಸ್‌ನಲ್ಲಿ ಒಮ್ಮೆ ಮಾತ್ರ ಪ್ರವೇಶಕ್ಕೆ ಅವಕಾಶ. 12 ವರ್ಷದೊಳಗಿನ‌ ಮಕ್ಕಳಿಗೆ ಪ್ರವೇಶವಿಲ್ಲ.

ಇಂದು‌ ಮತ್ತು ನಾಳೆ ಈ ಮಾರ್ಗದಲ್ಲಿ ಜನದಟ್ಟಣೆ, ವಾಹನದಟ್ಟಣೆ ಆಗಬಹುದಾದ ಹಿನ್ನೆಲೆಯಲ್ಲಿ, ಬಳ್ಳಾರಿ ರಸ್ತೆಗೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ವಾಹನ‌ ಸವಾರರಿಗೆ ಸೂಚನೆ ನೀಡಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ಆ ಮಾರ್ಗದಿಂದ ಬೆಂಗಳೂರು ನಗರಕ್ಕೆ ಆಗಮಿಸುವ ವಾಹನಗಳಿಗೆ ಬದಲಿ ಮಾರ್ಗವಾಗಿ ಹೆಣ್ಣೂರು-ಬಾಗಲೂರು ರಸ್ತೆಯನ್ನು ಬಳಸುವಂತೆ ಮನವಿ ಮಾಡಲಾಗಿದೆ.

ಏರೋ ಇಂಡಿಯಾ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಕಲ್ಪಿಸಲಾಗಿದೆ. ಜಿ.ಕೆ.ವಿ.ಕೆ ಆವರಣದಲ್ಲಿ ಹಾಗೂ ಜಕ್ಕೂರು ಆವರಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ಪಾರ್ಕಿಂಗ್ ಸ್ಥಳದಿಂದ ಬಿ.ಎಂ.ಟಿ.ಸಿ ಶಟಲ್ ಬಸ್ ಮೂಲಕ ಪ್ರದರ್ಶನ ಸ್ಥಳಕ್ಕೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಏರ್ ಶೋ‌ ಹಿನ್ನೆಲೆ‌ ಬಿಎಂಟಿಸಿಯಿಂದ 10 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Aero India 2023 : ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ತಂಡ, ನೂತನ F-35 ಯುದ್ಧ ವಿಮಾನ ಪ್ರದರ್ಶನ

Exit mobile version