Site icon Vistara News

Tirumala Tirupati | ತಿರುಪತಿಯಲ್ಲಿ ನಾಳೆ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆ, ಹೊಸ ವರ್ಷಕ್ಕೆ ವಿಶೇಷ ಪೂಜೆ

tirupati

ತಿರುಪತಿ/ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಜನವರಿ 2ರಂದು ವೈಕುಂಠ ಏಕಾದಶಿಯ ವೈಕುಂಠ ದ್ವಾರ ದರ್ಶನ ಸಲುವಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ ಬೆಳಗ್ಗೆ 3 ಗಂಟೆಯಿಂದ ವಿಶೇಷ ಪೂಜೆ ಆರಂಭವಾಗಿದೆ. ನಾಳೆ ವೈಕುಂಠ ಏಕಾದಶಿಗೆ (ಜ.2) ಸಕಲ ಸಿದ್ಧತೆ ಮಾಡಲಾಗಿದೆ.

ತಿರುಪತಿಯಲ್ಲಿ ವೈಕುಂಠ ಏಕಾದಶಿಗೆ ಎಲ್ಲಾ ಸಿದ್ಥತೆಯಾಗಿದೆ ಟಿಟಿಡಿ ಕಾರ್ಯದರ್ಶಿ ಭಕ್ತ ವತ್ಸಲ ರೆಡ್ಡಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ ಏಕಾದಶಿ ದರ್ಶನ ನಡೆಯಲಿದೆ. ಈ ಬಾರಿ 200 ರೂ. ವಿಶೇಷ ಟಿಕೆಟ್ ಕೊಡುತ್ತಿದ್ದೇವೆ. ಈ ಬಾರಿ 1 ಲಕ್ಷ ಲಡ್ಡುಗಳು ಬರಬೇಕಿತ್ತು. ಸದ್ಯ ಬರುತ್ತಿರುವ ಲಡ್ಡುಗಳು ಸಾಕಾಗುತ್ತಿಲ್ಲ. ಈ ವಾರದೊಳಗೆ ಲಡ್ಡು ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Exit mobile version