ಬೆಂಗಳೂರು: ಈ ಬಾರಿ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವದ (Amrit Mahotsav) ಜತೆಗೆ ಚಾಮರಾಜಪೇಟೆ ಮೈದಾನದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಬಂದೋಬಸ್ತ್ ಏರ್ಪಡಿಸಲಾಗಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಹಾಗು ಕಬ್ಬಿಣದ ಗೇಟ್ ನಿಂದ ಲಾಕ್ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾಂಗ್ರೆಸ್ ಕಾಲ್ನಡಿಗೆ, ಬಿಜೆಪಿ ಜಾಥಾ ಇವೆಲ್ಲದಕ್ಕೂ ಬೆಂಗಳೂರು ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ.
ಈ ಬಾರಿ ಪೊಲೀಸ್ ಭದ್ರತೆ ಹೆಚ್ಚಾಗಿದ್ದು, ಮೈದಾನದ ಸುತ್ತ ಖಾಕಿ ಸರ್ಪಗಾವಲು ಹಾಕಿದೆ. ಪೊಲೀಸರ ಮೇಲೆ ಸ್ವತಂತ್ರ ದಿನ ಸಂಭ್ರಮದ ಜತೆ ಒತ್ತಡ ಕೂಡ ಹೆಚ್ಚಾಗಿದೆ. ಮಾಣಿಕ್ ಷಾ ಮೈದಾನ ಹೊರತು ಪಡಿಸಿ ನಗರದ ಬೇರೆ ಕಾರ್ಯಕ್ರಮಗಳಿಗೆ ಪೊಲೀಸರು ಭದ್ರತೆ ಮಾಡಿಕೊಳ್ಳಬೇಕಿದೆ. ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ಹೆಚ್ಚುವರಿ ಆಯುಕ್ತರು 1, ಡಿಸಿಪಿ ಗಳು 10,ಎಸಿಪಿಗಳು 19, ಇನ್ಸ್‌ಪೆಕ್ಟರ್ 50, ಪಿ ಎಸ್‌ಐ 100, ಮಹಿಳಾ ಪಿಎಸ್ ಐ 15, ಎಎಸ್ ಐ 80, ಕಾನ್ಸ್‌ಟೇಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆ ಎಸ್ ಆರ್ ಪಿ 10 ತುಕಡಿ, ಕ್ಯುಆರ್ ಟಿ 1, ಡಿ ತುಕಡಿ, 1, ಆರ್ ಎ ಎಫ್ 1 ಸೇರಿ 10000 ಪೊಲೀಸರ ನಿಯೋಜನೆ ಮಾಡಲಾಗಿದೆ.
ಮೈದಾನಕ್ಕೆ ಹೆಚ್ಚುವರಿ ಆಯುಕ್ತರು 1, ಡಿಸಿಪಿ ಗಳು 3, ಎಸಿಪಿಗಳು 6, ಇನ್ಸ್‌ಪೆಕ್ಟರ್ 15, ಪಿಎಸ್ ಐ 45, ಮಹಿಳಾ ಪಿಎಸ್ ಐ 05, ಎಎಸ್ ಐ 30, ಕಾನ್ಸ್‌ಟೇಬಲ್ 300, ಗಸ್ತಿನಲ್ಲಿರುವ ಪೊಲೀಸರು 20, ಕೆ ಎಸ್ ಆರ್ ಪಿ 05 ತುಕಡಿ, ಸಿಎಆರ್ 2 ತುಕಡಿ, ಆರ್ ಎ ಎಫ್ 1 ನಿಯೋಜಿಸಲಾಗಿದೆ.
ಇದನ್ನೂ ಓದಿ | Amrit Mahotsav | ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್‌ಗೆ ಹಾನಿ, ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಕಾಲ್ನಡಿಗೆಗೆ ಡಿಸಿಪಿಗಳು 4, ಎಸಿಪಿಗಳು 15, ಇನ್ಸ್‌ಪೆಕ್ಟರ್ 20, ಪಿಎಸ್ ಐ 24 ,ಮಹಿಳಾ ಪಿಎಸ್ ಐ 03, ಎಎಸ್ ಐ 15, ಕಾನ್ಸ್‌ಟೇಬಲ್ 500, ಕೆ ಎಸ್ ಆರ್ ಪಿ 05 ತುಕಡಿ, ಸಿಎಆರ್ 6 ತುಕಡಿ ನಿಯೋಜಿಸಲಾಗಿದೆ.
ಆಗಸ್ಟ್ ೧೫ರಂದು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಕೊನೆ ದಿನವಾಗಿದ್ದು, ಲಾಲ್‌ಬಾಗ್‌ಗೆ ಸಾಕಷ್ಟು ಜನ ಬರುವ ನಿರೀಕ್ಷೆ ಇದೆ. ಆದ್ದರಿಂದ ಅಲ್ಲಿಯೂ ಪೊಲೀಸರು ಭದ್ರತೆ ಮಾಡಿದ್ದಾರೆ.
ಇದನ್ನೂ ಓದಿ | Amrit Mahotsav | ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಧ್ವಜಾರೋಹಣ