ಬೆಂಗಳೂರು: ʼಪ್ರಸಂಗʼ ರಂಗತಂಡ ಅಭಿನಯಿಸುವ ʼಅನಭಿಜ್ಞ ಶಾಕುಂತಲ’ ನಾಟಕದ 78ನೇ ಪ್ರದರ್ಶನ ಇಂದು ರಂಗಶಂಕರದಲ್ಲಿ ನಡೆಯಲಿದೆ.
2012ರಿಂದ ಪ್ರದರ್ಶಿತಗೊಳ್ಳುತ್ತಿರುವ ʼಅನಭಿಜ್ಞ ಶಾಕುಂತಲ’ ನಾಟಕಕಾರ ಕಾಳಿದಾಸನ ಜೀವನಕಥೆಯನ್ನು ಆಧರಿಸಿದೆ. ʼಪ್ರಸಂಗʼ ರಂಗತಂಡ ಈ ನಾಟಕದ ಮೂಲಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ್ದಲ್ಲದೆ ಸತತ 77 ಪ್ರದರ್ಶನಗಳನ್ನು ನೀಡಿತು. ಕವಿ, ನಾಟಕಕಾರ ಡಾ. ಕೆ.ವೈ. ನಾರಾಯಣಸ್ವಾಮಿಯವರ ಈ ಕೃತಿ ಅಭಿಜಾತ- ಆಧುನಿಕ ಅಭಿರುಚಿಗಳ ಪ್ರೇಕ್ಷಕರೆಲ್ಲರಿಗೂ ಇಷ್ಟವಾಗಬಲ್ಲ ನಾಟಕ. ಇತಿಹಾಸ, ಕಾವ್ಯಕಲ್ಪನೆ, ಭಾರತೀಯ ರಂಗಭೂಮಿ ಎಲ್ಲದರ ಹಿನ್ನೆಲೆಯನ್ನು ಹೊಂದಿರುವ ಈ ನಾಟಕ ನೋಡುಗರಿಗೆ ಹಬ್ಬದೂಟವೆಂದೇ ಹೇಳಬಹುದು. ನಿರ್ದೇಶಕ ಪ್ರಕಾಶ್ ಶೆಟ್ಟಿಯವರ ನಿರ್ದೇಶನದ ಈ ನಾಟಕ ಬೆಂಗಳೂರು, ಮೈಸೂರು, ಮುಂಬೈ, ಹೈದ್ರಾಬಾದ್, ತಿರುಪತಿ, ಪಾಂಡಿಚೇರಿ ಮುಂತಾದ ಕಡೆ ಪ್ರದರ್ಶಿತಗೊಂಡು ಅಪಾರ ಜನಮೆಚ್ಚುಗೆ ಗಳಿಸಿದೆ. ರಂಗ ಚಿಂತಕರ ಪ್ರಶಂಸೆಗೆ ಪಾತ್ರವಾಗಿದೆ.
ʼಅನಭಿಜ್ಞ ಶಾಕುಂತಲ’ದ 78ನೇ ಪ್ರದರ್ಶನ ಅ.21ರಂದು ರಂಗಶಂಕರದಲ್ಲಿ ಸಂಜೆ 7.30 ಗಂಟೆಗೆ ನಡೆಯಲಿದೆ. ಟಿಕೆಟ್‌ಗಳು ರಂಗಶಂಕರ ಅಥವಾ ಬುಕ್‌ಮೈಶೋದಲ್ಲಿ ದೊರೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ 9341222546/ 9845663646 ಸಂಪರ್ಕಿಸಬಹುದು.
ಇದನ್ನೂ ಓದಿ | ಪುನೀತ್ ರಾಜಕುಮಾರ್‌ಗೂ ಮುನ್ನ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರಾರು? ಇಲ್ಲಿದೆ ವಿವರ