Site icon Vistara News

Arun Yogiraj : ರಾಮ್‌ ಲಲ್ಲಾನ ಎಂದೂ ನೋಡದ ಚಿತ್ರ ತೋರಿಸಿದ ಶಿಲ್ಪಿ ಅರುಣ್‌ ಯೋಗಿರಾಜ್‌; ಎಷ್ಟು ಮುದ್ದಾಗಿದೆ ನೋಡಿ…

Arun Yogiraj at work time

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ (Sri Rama Mandir) ವಿರಾಜಮಾನನಾಗಿರುವ ಶ್ರೀ ರಾಮ ಲಲ್ಲಾನ (Ram lalla) ಸುಂದರ ಮೂರ್ತಿಯನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಕಳೆದ ಜನವರಿ 22ರಂದು ದೇವರ ಪ್ರಾಣಪ್ರತಿಷ್ಠೆ (Rama Pranaprathishte) ನಡೆದಿದ್ದು, ಅಂದು ಮೊದಲ ಬಾರಿಗೆ ಅಲಂಕೃತ ಶ್ರೀ ರಾಮನನ್ನು ನೋಡಿದ ಜನರು ಭಗವಂತನೇ ಧರೆಗಿಳಿದಂತೆ ಕಾಣುತ್ತಿದೆ ಎಂದು ಖುಷಿಪಟ್ಟಿದ್ದರು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರ ಭಕ್ತಿ ಮತ್ತು ಕೈಚಳಕದಿಂದ ಮೂಡಿ ಸುಂದರ ಶಿಲ್ಪ ಕಲಾಕೃತಿಯನ್ನು ಕಳೆದ 33 ದಿನಗಳಲ್ಲಿ ಒಟ್ಟು ಒಂದು ಕೋಟಿ ಜನ ನೋಡಿ ಭಾವುಕರಾಗಿದ್ದಾರೆ. ಇದರ ನಡುವೆಯೇ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಇದುವರೆಗೂ ಯಾರೂ ನೋಡಿರದ ಅಪರೂಪದ ಚಿತ್ರವೊಂದನ್ನು ‌ ತೆರೆದಿಟ್ಟಿದ್ದಾರೆ.

ಇದು ಕೆಲಸ ಪ್ರಗತಿಯಲ್ಲಿದ್ದ ಕಾಲದ ಚಿತ್ರ. ನಮಗೆ ಮೂರ್ತಿಯ ಆಯ ಅಳತೆಗಳ ಬಗ್ಗೆ ಧೈರ್ಯದ ಭಾವನೆ ಇತ್ತು. ಆದರೆ, ರಾಮ್‌ ಲಲ್ಲಾನನ್ನು ನಮ್ಮ ಸೂಕ್ಷ್ಮ ಸ್ಪರ್ಶದಿಂದ ಮೂಡಿಸಿದಾಗ ಅಂತಿಮ ಫಲಿತಾಂಶ ಅದ್ಭುತವಾಗಿ ಮೂಡಿಬಂತು ಎಂದಿದ್ದಾರೆ ಅರುಣ್‌ ಯೋಗಿರಾಜ್‌.

ಟ್ವಿಟರ್‌ನಲ್ಲಿ ತಾವು‌ ಮೂರ್ತಿ ಕೆತ್ತನೆ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿರುವ ಅವರು, ರಾಮನ ಮುದ್ದಾದ ಮುಖವನ್ನು ಕೈಯಲ್ಲಿ ಹಿಡಿದಿದ್ದಾರೆ.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಐದು ಲಕ್ಷದ 40 ಸಾವಿರ ಜನರು ವೀಕ್ಷಿಸಿದ್ದಾರೆ. ಅದ್ಭುತ ಕಲಾಕೃತಿ ಎಂದು ಹಾಡಿ ಹೊಗಳಿಸಿದ್ದಾರೆ. ಇದು ಮೈಸೂರು ಜಿಲ್ಲೆಯಲ್ಲಿ ಸಿಕ್ಕಿದ ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿಲ್ಪವಾಗಿದ್ದು, ಭಾರಿ ಜನಾಕರ್ಷಣೆಯನ್ನು ಪಡೆದಿದೆ.

ಇದನ್ನೂ ಓದಿ : Pandit Pacha Saab | ಶ್ರೀರಾಮ ಕೋಟಿ ಬರೆದಿದ್ದ ಮುಸ್ಲಿಂ ಪಂಡಿತ ವಿಧಿವಶ

ರಾಮ ಲಲ್ಲಾ, ರಾಮ ಜನ್ಮಭೂಮಿ ಚಿತ್ರವಿರುವ ನಾಣ್ಯ ಬಿಡುಗಡೆ

ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಮ ಲಲ್ಲಾ ಮತ್ತು ರಾಮ ಮಂದಿರದ ಚಿತ್ರವಿರುವ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

Exit mobile version