Site icon Vistara News

ಬೆಂಗಳೂರಿಗೆ ಬರಲಿದ್ದಾರೆ ಅರುಂಧತಿ ರಾಯ್‌, ಜುಬೇರ್‌: ಗೌರಿ ಲಂಕೇಶ್‌ ನೆನಪಿನ ಕಾರ್ಯಕ್ರಮ

Arundhati roy

ಬೆಂಗಳೂರು: ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್‌ ಸ್ಮರಣೆಯ ಕಾರ್ಯಕ್ರಮದಲ್ಲಿ ಅರುಂಧತಿ ರಾಯ್‌ ಸೇರಿ ಅನೇಕರು ಬೆಂಗಳೂರಿನಲ್ಲಿ ಭಾಗವಹಿಸಲಿದ್ದಾರೆ.

ಗೌರಿ ಮೆಮೊರಿಯಲ್‌ ಟ್ರಸ್ಟ್‌ ವತಿಯಿಂದ ʼಗೌರಿ ನೆನಪುʼ ಹೆಸರಿನಲ್ಲಿ ಗೌರಿ ಲಂಕೇಶ್‌ ನೆನಪಿನ ಉಪನ್ಯಾಸ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್‌ 5ರ ಸಂಜೆ 5 ಗಂಟೆಗೆ ಮಹಾರಾಣಿ ಕಾಲೇಜು ಪಕ್ಕದಲ್ಲಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅರುಂಧತಿ ರಾಯ್‌ ಜತೆಗೆ ಚಲನಚಿತ್ರ ನಟ ಪ್ರಕಾಶ್‌ ರೈ ಹಾಗೂ ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಸಹಿತ ಭಾಗವಹಿಸಲಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಟ್ವೀಟ್‌ ಮಾಡಿದ ಆರೋಪದಲ್ಲಿ ಇತ್ತೀಚೆಗೆ ಜುಬೇರ್‌ ಬಂಧನಕ್ಕೊಳಗಾಗಿದ್ದರು, ನಂತರ ಜಾಮೀನು ಪಡೆದು ಹೊರಬಂದಿದ್ದಾರೆ.

ಇದನ್ನೂ ಓದಿ | ಆಲ್ಟ್‌ ನ್ಯೂಸ್‌ನ ಮೊಹಮ್ಮದ್‌ ಜುಬೇರ್‌ಗೆ ಬಿಡುಗಡೆ ಭಾಗ್ಯ; ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಜಾಮೀನು
ಇದನ್ನೂ ಓದಿ | Alt News ಸಹಸಂಸ್ಥಾಪಕ ಜುಬೇರ್‌ ವಿರುದ್ಧ ಸಾಕ್ಷ್ಯ ನಾಶ, ವಿದೇಶಿ ಫಂಡ್‌ ಸ್ವೀಕಾರದ ಹೊಸ ಆರೋಪ

Exit mobile version