Site icon Vistara News

Bangalore Traffic: ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ, ಈ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್

bangalore rajbhavan

ಬೆಂಗಳೂರು: ಇಂದು ರಾಜಭವನದಲ್ಲಿ ರಾಜ್ಯ ಸರ್ಕಾರದ ನೂತನ ಸಚಿವರ (Karnataka ministers) ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ, ವಾಹನ ಸಂಚಾರದಲ್ಲಿ (bangalore traffic) ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಕೆ.ಆರ್ ಸರ್ಕಲ್‌ನಿಂದ ಗೋಪಾಲ ಗೌಡ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನ ಸವಾರರು ನೃಪತುಂಗ ರಸ್ತೆ ಹಾಗೂ ಕಬ್ಬನ್‌ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶವಿದೆ. ಕ್ವೀನ್ಸ್ ರಸ್ತೆಯಿಂದ ಬರುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ನಿರ್ಬಂಧಿಸಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್‌ನಿಂದ ರಾಜಭವನದ ರಸ್ತೆ ಹಾಗೂ ಬಸವೇಶ್ವರ ವೃತ್ತದ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.

ಶಿವಾಜಿನಗರದಿಂದ ಪೊಲೀಸ್ ತಿಮ್ಮಯ್ಯ ವೃತ್ತ ಕಡೆಗೆ ಹೋಗುವ ಬಸ್‌ಗಳನ್ನು ಕ್ವೀನ್ಸ್ ಸರ್ಕಲ್ ಮತ್ತು ಸಿದ್ದಲಿಂಗಯ್ಯ ವೃತ್ತದ ಕಡೆಗೆ ಡೈವರ್ಟ್ ಮಾಡಲಾಗಿದೆ. ಬಸ್‌ಗಳು ಮತ್ತು ಗೂಡ್ಸ್ ವಾಹನಗಳು ಓಲ್ಡ್ ಹೈಗೌಂಡ್ ಜಂಕ್ಷನ್‌ನಿಂದ ಕಾಫೀಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

ಈ ಕೆಳಗಿನ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ.

ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿ ಎಲ್.ಹೆಚ್. ಗೇಟ್‌ನ ಮೂಲಕ ತೆರಳಿ ಪಾರ್ಕಿಂಗ್‌ ಲಾಟ್‌ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ವಿಧಾನ ಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನ ಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್‌ನ ಪಾರ್ಕಿಂಗ್ ಹಾಗೂ ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Bangalore police: ಟ್ರಾಫಿಕ್‌ ಜಾಮ್‌ ನಡುವೆ ಸೈರನ್‌ ಹಾಕುತ್ತಾ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಯನ್ನು ತಲುಪಿಸಿದ ಹೊಯ್ಸಳ ಪೊಲೀಸ್‌

Exit mobile version