ಬೆಂಗಳೂರು
Bangalore Traffic: ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ, ಈ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್
ಇಂದು ರಾಜಭವನದಲ್ಲಿ ರಾಜ್ಯ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ, ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಬೆಂಗಳೂರು: ಇಂದು ರಾಜಭವನದಲ್ಲಿ ರಾಜ್ಯ ಸರ್ಕಾರದ ನೂತನ ಸಚಿವರ (Karnataka ministers) ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ, ವಾಹನ ಸಂಚಾರದಲ್ಲಿ (bangalore traffic) ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಕೆ.ಆರ್ ಸರ್ಕಲ್‌ನಿಂದ ಗೋಪಾಲ ಗೌಡ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನ ಸವಾರರು ನೃಪತುಂಗ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶವಿದೆ. ಕ್ವೀನ್ಸ್ ರಸ್ತೆಯಿಂದ ಬರುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ನಿರ್ಬಂಧಿಸಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್‌ನಿಂದ ರಾಜಭವನದ ರಸ್ತೆ ಹಾಗೂ ಬಸವೇಶ್ವರ ವೃತ್ತದ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ಶಿವಾಜಿನಗರದಿಂದ ಪೊಲೀಸ್ ತಿಮ್ಮಯ್ಯ ವೃತ್ತ ಕಡೆಗೆ ಹೋಗುವ ಬಸ್‌ಗಳನ್ನು ಕ್ವೀನ್ಸ್ ಸರ್ಕಲ್ ಮತ್ತು ಸಿದ್ದಲಿಂಗಯ್ಯ ವೃತ್ತದ ಕಡೆಗೆ ಡೈವರ್ಟ್ ಮಾಡಲಾಗಿದೆ. ಬಸ್‌ಗಳು ಮತ್ತು ಗೂಡ್ಸ್ ವಾಹನಗಳು ಓಲ್ಡ್ ಹೈಗೌಂಡ್ ಜಂಕ್ಷನ್‌ನಿಂದ ಕಾಫೀಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಈ ಕೆಳಗಿನ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ.
- ರಾಜಭವನ ರಸ್ತೆ
- ಡಾ| ಬಿ.ಆರ್. ಅಂಬೇಡ್ಕರ್ ರಸ್ತೆ
- ಕ್ವೀನ್ಸ್ ರಸ್ತೆ
- ಇನ್‌ಫೆಂಟ್ರಿ ರಸ್ತೆ
- ಸ್ಯಾಂಕಿ ರಸ್ತೆ
- ಪ್ಯಾಲೇಸ್ ರಸ್ತೆ
- ಕಬ್ಬನ್ ರಸ್ತೆ
ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿ ಎಲ್.ಹೆಚ್. ಗೇಟ್‌ನ ಮೂಲಕ ತೆರಳಿ ಪಾರ್ಕಿಂಗ್ ಲಾಟ್‌ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ವಿಧಾನ ಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನ ಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್‌ನ ಪಾರ್ಕಿಂಗ್ ಹಾಗೂ ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಆರೋಗ್ಯ
Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!
Chamarajanagar oxygen tragedy: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021ರಲ್ಲಿ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ ಮೇ 2ರಂದು 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆಗ್ರಹಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಬೆಂಗಳೂರು: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಅವಧಿಯ ಟೆಂಡರ್‌ಗಳ ಮರು ಪರಿಶೀಲನೆ ಮಾಡಾಗುತ್ತದೆ. ಅನುಮಾನ ಬಂದ ಟೆಂಡರ್‌ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಕರ್ನಾಟಕ
Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!
ಬೆಂಗಳೂರು: ಅನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್ (Viral News) ಆಗಿದೆ.
ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ಮನವಿ ಪತ್ರದಲ್ಲೇನಿದೆ?
ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು, ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.
ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.
ಕರ್ನಾಟಕ
Nirmala Sitharaman: ಬೆಂಗ್ಳೂರಲ್ಲಿ ಸದ್ದಿಲ್ಲದೆ ನಡೆಯಿತು ವಿತ್ತ ಸಚಿವೆ ನಿರ್ಮಲಾ ಪುತ್ರಿಯ ಮದ್ವೆ! ಆಶೀರ್ವದಿಸಿದ ಅದಮಾರು ಶ್ರೀಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪುತ್ರಿ ಪರಕಾಲ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ.
ಬೆಂಗಳೂರು: ಈಗೆಲ್ಲ ಮದುವೆ ಎನ್ನುವುದೇ ಆಡಂಬರ. ಅದರಲ್ಲೂ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದುಬಿಟ್ಟರಂತೂ ಕೇಳುವುದೇ ಬೇಡ. ಕೋಟಿ ಕೋಟಿ ಹಣ ಸುರಿದು ಅದ್ಧೂರಿ ಮದುವೆ ಮಾಡಿಬಿಡುತ್ತಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾತ್ರ ಈ ಐಷಾರಾಮಿ ರೂಢಿಯನ್ನು ಮುರಿದು, ತಮ್ಮ ಮಗಳಿಗೆ ಮದುವೆ (Marriage) ಮಾಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಮಗಳು ಪರಕಾಲ ವಂಗಮಾಯಿ ಅವರು ಪ್ರತೀಕ್ ಅವರ ಜತೆ ಗುರುವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಿವಾಹ ಕಾರ್ಯಕ್ರಮ ಜರುಗಿದೆ. ಈ ವೇಳೆ ಹಾಜರಿದ್ದ ಉಡುಪಿಯ ಅದಮಾರು ಮಠದ ಶ್ರೀಗಳು ಹಾಜರಿದ್ದು, ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಯಾವುದೇ ರಾಜಕಾರಣಿಯನ್ನು ಮದುವೆಗೆ ಆಮಂತ್ರಿಸದೆ ಕೆಲವೇ ಕೆಲವು ಬಂಧುಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ವರದಿಯಿದೆ.
ಇದನ್ನೂ ಓದಿ: Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು
ಬ್ರಾಹ್ಮಣ ಕುಟುಂಬದವರಾಗಿರುವ ನಿರ್ಮಲಾ ಅವರು ಬ್ರಾಹ್ಮಣ ಸಂಪ್ರದಾಯದಂತೆಯೇ ಮಗಳ ಮದುವೆ ನೆರವೇರಿಸಿದ್ದಾರೆ. ಉಡುಪಿಯ ಅದಮಾರು ಮಠದ ಆಶೀರ್ವಾದ ಮತ್ತು ಸೂಚನೆಗಳಂತೆ ಮದುವೆ ನಡೆಸಲಾಗಿದೆ.
ಪರಕಾಲ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಸದ್ಯ ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ನಿರ್ಮಲಾ ಅವರ ಅಳಿಯ ಪ್ರತೀಕ್ ದೋಷಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದಾರೆ.
ಕರ್ನಾಟಕ
Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Laxmi Hebbalkar: ಮನೆಯ ಯಜಮಾನಿಗೆ ಮಾಸಿಕವಾಗಿ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಪತಿಯಲ್ಲದೆ, ಮಗ ತೆರಿಗೆ ಕಟ್ಟುತ್ತಿದ್ದರೂ ಅರ್ಹತೆ ಇಲ್ಲ ಎಂದು ಹೇಳಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಉಲ್ಟಾ ಹೊಡೆದಿದ್ದು, ಮಗನ ತೆರಿಗೆ ಅಥವಾ ಜಿಎಸ್‌ಟಿ ರಿಟರ್ನ್ಸ್ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ಗಂಡ ತೆರಿಗೆ ಕಟ್ಟುತ್ತಿದ್ದರೆ ಮಾತ್ರವಲ್ಲ ಮಗ ತೆರಿಗೆ ಕಟ್ಟುತ್ತಿದ್ದರೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಾಗಿರುವ “ಗೃಹಲಕ್ಷ್ಮಿ”ಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ದಿನಕ್ಕೆ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಈ ಯೋಜನೆಗೆ ಗಂಡ ತೆರಿಗೆ ಕಟ್ಟುವುದು ಮಾತ್ರ ಒಳಪಡುತ್ತದೆ. ಮಗ ತೆರಿಗೆ ಕಟ್ಟುತ್ತಿದ್ದರೆ, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈಗ ಸೋಷಿಯಲ್ ಮೀಡಿಯಾ ಸೇರಿದಂತೆ ಹೊರಗಡೆ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಫಾರ್ಮ್ ಅಸಲಿಯಾಗಿದೆ. ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್‌ಬುಕ್ ಅನ್ನು ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು ಎಂದು ಹೇಳಿದರು.
ಶೇಕಡಾ 90ರಷ್ಟು ಬಿಪಿಎಲ್ ಕಾರ್ಡ್ ಮಹಿಳೆಯರು ಅರ್ಹರಿದ್ದಾರೆ. ಯಾರಿಗೆಲ್ಲ ಫಲ ಸಿಗಬೇಕೋ ಅವರನ್ನೆಲ್ಲ ಸೇರ್ಪಡೆ ಮಾಡಲಾಗುತ್ತದೆ. ಈಗ ಬಂದಿರುವ ಅರ್ಜಿ ಡ್ರಾಫ್ಟ್ ಮಾತ್ರ. ಆಗಸ್ಟ್ 17 ಅಥವಾ 18ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ: Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್, ಡಯಾಲಿಸಿಸ್ ಟೆಂಡರ್ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ
ಗೃಹ ಲಕ್ಷ್ಮಿ ಯೋಜನೆ ಮಾರ್ಗಸೂಚಿ
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
- ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ, ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
- ಈ ಯೋಜನೆಯ ಫಲಾನುಭವಿಗಳು 2023ರ ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು. ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
- ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲೀ ಅಥವಾ ಭೌತಿಕವಾಗಿಯಾಗಲೀ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡುವುದು. ಅರ್ಜಿಯಲ್ಲಿನ ಅಂಶಗಳ ಬಗ್ಗೆ, ತದನಂತರ ಪರಿಶೀಲನೆ ಮಾಡುವುದು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡುವುದು ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.
- ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡುವುದು.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಹಾಗೂ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಯೋಜನೆಗೆ ಅರ್ಹರಲ್ಲ.
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ20 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ