Site icon Vistara News

Assault Case : ನಡುರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಗೆ ಮಚ್ಚು ಬೀಸಿದ ಪತಿ

Husband beats wife in the middle of the road

ಬೆಂಗಳೂರು: ದೂರಾಗಿದ್ದ ಪತ್ನಿ ಮತ್ತೊಬ್ಬನೊಟ್ಟಿಗೆ ಹೋಗುವುದನ್ನು ಕಂಡ ಪತಿಯೊಬ್ಬ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆಯನ್ನು (Assault Case) ನಡೆಸಿದ್ದಾನೆ. ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿಗೆ ಮಚ್ಚಿನಿಂದ ಹೊಡೆದಿದ್ದಾನೆ. ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ನೈಗರ್ (28) ಹಲ್ಲೆಗೊಳಗಾದವಳು. ಪತಿ ಶೇಕ್ ಮುಜೀಬ್‌ ಹಲ್ಲೆ ನಡೆಸಿದವನು. ನೈಗರ್‌ ಹಾಗೂ ಶೇಕ್‌ ಮುಜೀಬ್‌ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಕಲಹ ಉಂಟಾಗಿ ನಂತರ ಬೇರ್ಪಟ್ಟಿದ್ದರು. ಬೇರೆ ಬೇರೆಯಾಗಿ ವಾಸವಿದ್ದರು. ಈ ನಡುವೆ ನೈಗರ್‌ ಆರು ತಿಂಗಳ ನಂತರ ಮತ್ತೊಬ್ಬ ವ್ಯಕ್ತಿ ಸಲೀಂ ಎಂಬಾತನ ಜತೆ ಸಂಬಂಧ ಹೊಂದಿದ್ದಳು.

ಇದನ್ನೂ ಓದಿ: Dead Body Found : ಮೊನ್ನೆ ಮುಂಡವಿಲ್ಲದ ರುಂಡ ಇಂದು ಕೊಳೆತ ಸ್ಥಿತಿಯಲ್ಲಿ ಕೈ ಪತ್ತೆ!

ಸೋಮವಾರ ಸಂಜೆ ಪತ್ನಿ ನೈಗರ್‌ ಸಲೀಂ ಜತೆಗೆ ಹೋಗುತ್ತಿದ್ದರು. ಇದನ್ನು ಕಂಡ ಶೇಕ್‌ ಮುಜೀಬ್‌ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಮಚ್ಚು ಬೀಸಿದ ರಭಸಕ್ಕೆ ನೈಗರ್ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಗಾಯಾಳನ್ನು ಹೆಚ್ಎಎಲ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ಜೆ.ಬಿ ನಗರ ಪೊಲೀಸರು ಆರೋಪಿ ಶೇಖ್ ಮುಜಿಬ್‌ನನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ 307 ಕೇಸ್ ದಾಖಲಾಗಿದೆ.

ಹೆಂಡ್ತಿ ಬೆರಳು ಕತ್ತರಿಸಲು ಹೋಗಿದ್ದನಂತೆ

ಹೊಸಕೋಟೆ ಮೂಲದ ಆರೋಪಿ ಶೇಕ್‌ ಮುಜೀಬ್‌ ಆರ್‌ಟಿ ನಗರದಲ್ಲಿ ನೆಲೆಸಿದ್ದ. ನೈಗರ್‌ಳನ್ನ ಮೂರು ವರ್ಷ ಪ್ರೀತಿಸಿ ನಂತರ ಮದುವೆಯಾಗಿದ್ದ. ಪತ್ನಿ ನೈಗರ್‌ ಮುರುಗೇಶ್ ಪಾಳ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಶೇಕ್ ಮುಜೀಬ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಯುವಕನ ಜತೆ ಪತ್ನಿಗೆ ಸಂಬಂಧ ಇದೆ ಎಂದು ಶಂಕಿಸಿದ್ದ. ಹೀಗಾಗಿ ಕೆಲಸಕ್ಕೆ ಹೋಗುವುದನ್ನು ಬಿಡಿಸಬೇಕು ಎಂದುಕೊಂಡಿದ್ದ. ಇದಕ್ಕಾಗಿ ಆತ ಖತರ್ನಾಕ್‌ ಪ್ಲಾನ್‌ ಅನ್ನೇ ಮಾಡಿದ್ದ. ಆಕೆಯ ಕೈ ಬೆರಳುಗಳನ್ನು ಕತ್ತರಿಸಿದರೆ ಕೆಲಸ ಮಾಡಲು ಆಗುವುದಿಲ್ಲ. ಆಗ ಮನೆಯಲ್ಲೆ ಇರುತ್ತಾಳೆ ಎಂದುಕೊಂಡಿದ್ದ.

ಹೀಗಾಗಿ ಶೇಕ್‌ ಮುಜೀಬ್‌ ಶಿವಾಜಿನಗರದಲ್ಲಿ ಮೀನು ಕಟ್ ಮಾಡಲು ಮಚ್ಚು ಖರೀದಿ ಮಾಡಿದ್ದ. ಮಚ್ಚಿನ ಜತೆ ನಿನ್ನೆ ಸಂಜೆ ಜೀವನ್ ಭೀಮಾನಗರಕ್ಕೆ ಬಂದವನೇ ಏಕಾಏಕಿ ಪತ್ನಿ ಮೇಲೆ ಅಟ್ಯಾಕ್ ಮಾಡಿದ್ದ. ಈ ವೇಳೆ ನೈಗರ್‌ ಹಲ್ಲೆಯಿಂದ ತಪ್ಪಿಸಿಕೊಳ್ಳುವಾಗ ಕೈಗಳಿಂದ ತಲೆ ಮುಚ್ಚಿಕೊಂಡಿದ್ದಾಳೆ. ಮಚ್ಚಿನ ದಾಳಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಪೊಲೀಸರ ವಿಚಾರಣೆ ವೇಳೆ ಘಟನೆ ಬಗ್ಗೆ ಶೇಕ್ ಮುಜೀಬ್ ಬಾಯ್ಬಿಟ್ಟಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version