ಬೆಂಗಳೂರು: ಜಗಳ ಬಿಡಿಸಲು ಹೋದ ಟ್ರಾಫಿಕ್ ಪೊಲೀಸ್ ಮೇಲೆ ಎರಗಿ ಹಲ್ಲೆ (Assault Case) ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಅಬ್ದುಲ್ ಸುಬಾನ್ ಎಂಬಾತ ಚಿಕ್ಕಪೇಟೆ ಸಂಚಾರಿ ಠಾಣೆಯ ಸಿಬ್ಬಂದಿ ಆರ್. ಮಂಜು ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ.
ಕಾನ್ಸ್ಟೇಬಲ್ ಮಂಜು ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಆಟೋ ಹಿಂದಿಕ್ಕುವ ವಿಚಾರಕ್ಕೆ ಆಟೋ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ ನಡಿಯುತ್ತಿತ್ತು. ಇವರಿಬ್ಬರ ಗಲಾಟೆ ವಿಕೋಪಕ್ಕೆ ಹೋಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನು ಗಮನಿಸಿದ ಮಂಜು ಇವರಿಬ್ಬರ ಜಗಳ ಬಿಡಿಸಲು ಪ್ರಯತ್ನಿಸಿದ್ದರು.
ಗಲಾಟೆ ತಣ್ಣಗೆ ಆದ ಮೇಲೆ ಕಾನ್ಸ್ಟೇಬಲ್ ಮಂಜು ವಾಪಸ್ ಟ್ರಾಫಿಕ್ ಸಿಗ್ನಲ್ ಬಾಕ್ಸ್ನಲ್ಲಿ ಕೂತಿದ್ದರು. ಮತ್ತೆ ಅಲ್ಲಿಗೆ ಬಂದ ಅಬ್ದುಲ್ ಕ್ಯಾತೆ ತೆಗೆದು ಜಗಳವಾಡಿದ್ದಾನೆ. ಮಾತ್ರವಲ್ಲ ಅವಾಚ್ಯವಾಗಿ ನಿಂದಿಸಿ ಮಂಜು ಕೆನ್ನೆಗೆ ಹೊಡೆದು ಓಡಿ ಹೋಗುತ್ತಿದ್ದ. ಈ ವೇಳೆ ಸ್ಥಳೀಯರ ನೆರವಿನೊಂದಿಗೆ ಆರೋಪಿ ಅಬ್ದುಲ್ನನ್ನು ಮಂಜು ಹಿಡಿದುಕೊಂಡಿದ್ದಾರೆ.
ಬಳಿಕ ಹಲ್ಲೆ ಮಾಡಿದ ಅಬ್ದುಲ್ನನ್ನು ಚಾಮರಾಜಪೇಟೆ ಠಾಣೆಗೆ ಕರೆದೊಯ್ದ ಪ್ರಕರಣ ದಾಖಲಿಸಿದ್ದಾರೆ. ತನಿಖೆ ವೇಳೆ ಅಬ್ದುಲ್ ಸುಬಾನ್ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Theft Case : ದೂರು ನೀಡುತ್ತಿದ್ದಂತೆ ಪ್ರತ್ಯಕ್ಷವಾಯ್ತು ಚೆಂಬು! ಇದು ಪಕ್ಕದ ಮನೆಯ ಚೆಂಬೇಶ್ವರನ ಕಿತಾಪತಿ
ಶಕ್ತಿ ಯೋಜನೆ ಎಫೆಕ್ಟ್; ಬಸ್ ಸೀಟ್ಗಾಗಿ ಬಿಗ್ ಕಿತ್ತಾಟ; ಚಪ್ಪಲಿಯಿಂದ ಹೊಡೆದಾಟ
ಶಕ್ತಿ ಯೋಜನೆ (Shakti Scheme) ಯಿಂದ ಮಹಿಳೆಯರ ಓಡಾಟ (Free Bus service), ಆ ಮೂಲಕ ಸಬಲೀಕರಣವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಅದರ ನಡುವೆಯೇ ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರ (Fight between women in KSRTC Bus) ನಡುವೆ ವಿಪರೀತ ಕಾದಾಟವೂ ಜೋರಾಗಿದೆ. ಬೆಳಗಾವಿಯಲ್ಲಿ ಸರ್ಕಾರಿ ಬಸ್ನಲ್ಲಿ (Government bus) ಸೀಟ್ಗಾಗಿ ಇಬ್ಬರು ಮಹಿಳೆಯರ ನಡುವೆ ಶುರುವಾದ ಜಗಳ ಕೊನೆಗೆ ಒಬ್ಬ ಬಾಲಕಿಯ ಎಂಟ್ರಿ, ಆಕೆಯ ಮೇಲೆ ಚಪ್ಪಲಿ ಏಟಿನ ತಿರುವಿನೊಂದಿಗೆ ಮುನ್ನುಗ್ಗಿತ್ತು.
ಅದು ಹಿಡಕಲ್ ಡ್ಯಾಂ – ಬೆಳಗಾವಿ ಮಾರ್ಗದ ಬಸ್ನಲ್ಲಿ ನಡೆದ ಹೊಡೆದಾಟದ ದೃಶ್ಯ ಈಗ ವೈರಲ್ ಆಗಿದೆ. ಇದರಲ್ಲಿ ಸೀಟ್ಗಾಗಿ ಇಬ್ಬರು ಮಹಿಳೆಯರ ನಡುವೆ ದೊಡ್ಡ ಕಿತ್ತಾಟವೇ ನಡೆಯುತ್ತದೆ. ಮಧ್ಯೆ ಒಬ್ಬ ಬಾಲಕಿ ಬರುತ್ತಾಳೆ, ಆಗ ಅವಳಿಗೆ ಚಪ್ಪಲಿ ಏಟು ಬೀಳುತ್ತದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಈ ಘಟನೆ ನಡೆದಿದೆ. ಅರಂಭದಲ್ಲಿ ಸೀಟಿನ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಕೊನೆಗೆ ಅದು ಜೋರಾಗಿ ಸೀಟಿನಲ್ಲಿ ಕುಳಿತ ಮಹಿಳೆ ನಿಂತಿದ್ದ ಮಹಿಳೆಗೆ ಹಲ್ಲೆ ಮಾಡುತ್ತಾಳೆ. ಆಗ ಆಕೆಯ ಜತೆಗಿದ್ದ ಸುಮಾರು 10 ವರ್ಷದ ಬಾಲಕಿ ಸೀಟಿನಲ್ಲಿ ಕುಳಿತ ಮಹಿಳೆಯನ್ನು ತಡೆಯಲು ಮುಂದಾಗುತ್ತಾಳೆ. ಮತ್ತು ಆಕೆ ಮೊದಲು ಹೊಡೆತ ತಿಂದ ಮಹಿಳೆಗೆ ರಕ್ಷಣೆಯಾಗಿ ನಿಲ್ಲುತ್ತಾಳೆ.
ಈ ನಡುವೆ, ಆ ಹುಡುಗಿ ಮತ್ತು ಸೀಟಿನಲ್ಲಿ ಕುಳಿತ ಮಹಿಳೆಯ ನಡುವೆ ಏನೋ ಮಾತುಕತೆ ನಡೆಯುತ್ತದೆ. ಆಗ ಸೀಟಿನಲ್ಲಿ ಕುಳಿತ ಮಹಿಳೆ ತನ್ನ ಚಪ್ಪಲಿಯನ್ನು ತೆಗೆದು ಬಾಲಕಿಯ ಮೇಲೆ ಹಲ್ಲೆ ಮಾಡುತ್ತಾಳೆ. ಪಕ್ಕದಲ್ಲಿ ಕುಳಿತಾಕೆ ಹಿಡಿದುಕೊಂಡರೂ ಬಿಡಿಸಿಕೊಂಡು ಹಲ್ಲೆ ಮಾಡುತ್ತಾಳೆ. ಬಾಲಕಿ ಜೋರಾಗಿ ಅಳುತ್ತಾ ರಕ್ಷಣೆ ಕೋರುತ್ತಾಳೆ.
ಆಗ ಎದುರಿನಿಂದ ಬರುವ ಒಬ್ಬ ಪುರುಷ ಮಹಿಳೆಯ ಕೈಯಿಂದ ಚಪ್ಪಲಿಯನ್ನು ಕಿತ್ತುಕೊಂಡು ಆಕೆಯ ಬೆನ್ನಿಗೂ ಒಂದು ಬಾರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಚಪ್ಪಲಿಯೇಟು ತಿಂದ ಮಹಿಳೆ ಮತ್ತು ಬಾಲಕಿ ಬೊಬ್ಬೆ ಹಾಕಿ ಕಣ್ಣೀರು ಸುರಿಸಿದರು. ಇದು ನಿನ್ನ ಬಸ್ಸಲ್ಲ, ನಿನ್ನ ಬಸ್ಸಲ್ಲ ಎಂಬ ಜಗಳ ಜೋರಾಗಿ ನಡೆಯಿತು. ಅಂತಿಮವಾಗಿ ಈ ಪ್ರಕರಣ ಏನಾಯಿತು ಎನ್ನುವುದು ವಿಡಿಯೊದಲ್ಲಿಲ್ಲ. ಆದರೆ, ಜೋರಾದ ಬೈಗುಳ, ಆಕ್ರೋಶಗಳು ಅಲ್ಲಿ ಕೇಳಿಬಂದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.