ವಿಧಾನಸಭೆ: ತಾನು ದೇವರ ವಿರೋಧಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದು, ನಾನೂ ಒಬ್ಬ ಹಿಂದೂ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದರು.
ಇತ್ತೀಚೆಗೆ ಸಿದ್ದರಾಮಯ್ಯ ಹಣೆಗೆ ತಿಲಕ ಇಡುತ್ತಿದ್ದಾರೆ, ಹೋಮ ಜೋರಾಗಿರಬೇಕು ಎಂದು ಬಿಜೆಪಿಯ ಆರ್. ಅಶೋಕ್ ಮಾತಿಗೆ ಉತ್ತರ ನೀಡಿದ ಸಿದ್ದರಾಮಯ್ಯ, ಇಲ್ಲ ಇಲ್ಲ ನಾನು ಹೋಮ ಮಾಡಲ್ಲ. ನಾನು ದೇವರ ವಿರೋಧಿ ಅಲ್ಲ, ಹಿಂದೂ ವಿರೋಧಿ ಅಲ್ಲ. ಆದ್ರೆ ನಾನು ಹಿಂದೂ ಎಂದರು.
ಬಿಜೆಪಿಯವ್ರು ತಮಗೆ ಆಗದೇ ಇರೋದಿಕ್ಕೆ, ಸಿದ್ದರಾಮಯ್ಯ ಹಿಂದೂ ವಿರೋಧಿ ಅಂತ ಹೇಳ್ತಾರೆ. ವಿವೇಕಾನಂದ ಕೂಡಾ ಹಿಂದೂ. ಈ ದೇಶಕ್ಕೆ ಮನುವಾದ, ಪುರೋಹಿತಷಾಹಿ ಶಾಪ ಅಂತ ವಿವೇಕಾನಂದ ಹೇಳಿದ್ರು. ಹಾಗಾದ್ರೆ ವಿವೇಕಾನಂದ ಹಿಂದೂ ವಿರೋಧಿನಾ?
ಇದನ್ನೂ ಓದಿ: Karnataka Election : ಸಿದ್ದರಾಮಯ್ಯ ಸಾಕು ಮಾಡು ನಿನ್ನ ಹೈಡ್ರಾಮಾ, ನಿನಗೆ ವರುಣಾ ಒಂದೇ ಆಸರೆ ಎಂದ ಇಬ್ರಾಹಿಂ
ನಾವು ಸತ್ಯ ಒಪ್ಕೋತೇವೆ, ಸತ್ಯವನ್ನು ಅಸತ್ಯ ಮಾಡಲ್ಲ. ನೀವು ಮನುವಾದದಲ್ಲಿ ನಂಬಿಕೆ ಇಟ್ಟು ಸುಳ್ಳು ಹೇಳ್ತೀರ. ನಮ್ಮದು ಗಾಂಧಿವಾದ, ಸತ್ಯ ಅಷ್ಟೇ ಹೇಳ್ತೀವಿ. ಸತ್ಯ ಹೇಳೋದು ಗಾಂಧಿವಾದ -ಸುಳ್ಳು ಹೇಳೋದು ಮನುವಾದ. ಇಷ್ಟೇ ವ್ಯತ್ಯಾಸ ಎಂದರು.
ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳದ ಕುರಿತು ಮಾತನಡಿದ ಸಿದ್ದರಾಮಯ್ಯ, ಬಿಜೆಪಿಯವರು ಮೂಗಿಗೆ ತುಪ್ಪ ಸುರಿಸುವ ಕೆಲಸ ಮಾಡ್ತಿದ್ದಾರೆ. ಅದನ್ನ ಕೇಂದ್ರದಲ್ಲಿ ಆದೇಶ ಮಾಡ್ಸಿ. ನೀವು ಏನೇ ಹೇಳಿದ್ರು ಅದರ ಕ್ರೆಡಿಟ್ ನಮಗೆ ಬಂದಿದೆ ಎಂಬ ಅಶೋಕ್ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮಗೆ ಕ್ರೆಡಿಟ್ ಸಿಕ್ಕಿಲ್ಲ. ಜನರಿಗೆ ಗೊತ್ತಾಗಿದೆ. ಅದು ಉರ್ಜಿತ ಆಗಿಲ್ಲ..9 ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದರು.
ನಿಮ್ಮ ಸರ್ಕಾರ ಇದ್ದಾರ ಇದರ ಕುರಿತು ಏನೂ ಮಾಡಲಿಲ್ಲ ಎಂದು ಮತ್ತೆ ಅಶೋಕ್ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೌದು 14 ಜನರನ್ನ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ರಿ. ನಿಮಗೆ ಜನರ ಬೆಂಬಲ ಇರಲಿಲ್ಲ. ವಾಮ ಮಾರ್ಗದ ಮೂಲಕ ಅಧಿಕಾರ ಸರ್ಕಾರ ಮಾಡಿದ್ರಿ. ಜನರಿಗೆ ಇದು ಚೆನ್ನಾಗಿ ಗೊತ್ತಿದೆ. 9 ಶೆಡ್ಯೂಗೆ ಸೇರಿಸಿ ನಾವು ಸಹ ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.