Site icon Vistara News

Assault in parking lot | ಪಾರ್ಕಿಂಗ್‌ ವಿಚಾರದಲ್ಲಿ ಕೇಕ್‌ ಶಾಪ್‌ ಮ್ಯಾನೇಜರ್‌ ಮೇಲೆ ಹಲ್ಲೆ

cake

ಬೆಂಗಳೂರು: ಪಾರ್ಕಿಂಗ್‌ ವಿಚಾರವಾಗಿ ಬೆಂಗಳೂರಿನ ಇಂದಿರಾ ನಗರದ ಸ್ಮೂರ್ ಕೇಕ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ (Assault in parking lot) ನಡೆಸಲಾಗಿದೆ.

ಶಾಪ್ ಮುಂದೆ ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದ ಶೈಲೇಶ್‌ ಎಂಬ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಲಾಗಿದೆ. ಸ್ಮೂರ್ ಕೇಕ್‌ ಶಾಪ್ ಮೇಲೆ ಹೌಸ್ ಆಫ್ ಕಾಮರ್ಸ್ ಎಂಬ ಬಾರ್ ಇದೆ. ಬಾರ್ ಗೆ ಕುಡಿಯಲು ಬಂದಿದ್ದ ಐದಾರು ಮಂದಿ, ಕೇಕ್‌ ಶಾಪ್ ಮುಂದೆ ಕಾರ್ ಪಾರ್ಕ್ ಮಾಡಿದ್ದರು. ಶೈಲೇಶ್, ಕಾರ್ ಪಾರ್ಕ್ ಮಾಡದಂತೆ ಹೇಳಿದ್ದರು. ಇದಕ್ಕೆ ರೊಚ್ಚಿಗೆದ್ದು ಶೈಲೇಶ್ ಮೇಲೆ ಹಲ್ಲೆ ನಡೆಸಲಾಗಿದೆ.

ಭಾನುವಾರ ರಾತ್ರಿ 8.30 ರ ಸುಮಾರಿಗೆ ಘಟನೆ ನಡೆದಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಶೈಲೇಶ್‌ಗೆ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ.

Exit mobile version