Site icon Vistara News

Attempt To Murder : ಹಣದಾಸೆಗೆ ಚಿಕ್ಕಮ್ಮನ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ

Attempt to murder case

ಬೆಂಗಳೂರು: ಹಣ ಅಂದರೆ ಹೆಣನೂ ಬಾಯಿಬಿಡುತ್ತೆ. ಹಣ- ಆಸ್ತಿ, ಚಿನ್ನಾಭರಣದ ವ್ಯಾಮೋಹದ ಮುಂದೆ ಯಾವ ಸಂಬಂಧಕ್ಕೂ ಕಿಂಚಿತ್ತು ಬೆಲೆ ಇಲ್ಲ. ಒಮ್ಮೊಮ್ಮೆ ನಾವೆಲ್ಲರೂ ನಾಗರೀಕ ಸಮಾಜದಲ್ಲಿ ಇದ್ದೀವಾ ಎನ್ನುವ ಅನುಮಾನ ಮೂಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕ್ರೂರಿ ಮಗಳೊಬ್ಬಳು ತನ್ನ ಪತಿ ಜತೆ ಸೇರಿ ಹಣಕ್ಕಾಗಿ ಚಿಕ್ಕಮ್ಮನ ಜೀವವನ್ನೇ ತೆಗೆಯಲು (Attempt To Murder) ಮುಂದಾಗಿದ್ದಾಳೆ.

ಇಂತಹದೊಂದು ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಅಣ್ಣಮ್ಮ ಅವರ ಅಕ್ಕನ ಮಗಳು ಸುಚಿತ್ರ ಹಾಗೂ ಅಳಿಯ ಮುನಿರಾಜು ಎಂಬುವವರಿಂದ ಈ ಕೃತ್ಯ ನಡೆದಿದೆ. ಅಣ್ಣಮ್ಮ ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡಿದ್ದರು. ಮಕ್ಕಳಿಲ್ಲದಿದ್ದರೂ ಮನೆ ಮಾಡಿಕೊಂಡು ಸೆಟಲ್ ಆಗಿದ್ದರು. ಒಂದಷ್ಟು ಮನೆಗಳನ್ನು ಬಾಡಿಗೆ ಬಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್ ವ್ಯವಹಾರ ತಿಳಿಯದ ಕಾರಣಕ್ಕೆ ಹಣ, ಬಂಗಾರವನ್ನೆಲ್ಲ ಮನೆಯಲ್ಲೇ ಇಡುತ್ತಿದ್ದರು.

ಅಣ್ಣಮ್ಮರ ಅಕ್ಕನ ಮಗಳು ಸುಚಿತ್ರ ಆಗಾಗ ಮನೆಗೆ ಬಂದು ಹೋಗುತ್ತಿದ್ದಳು. ಈ ವೇಳೆ ಚಿಕ್ಕಮ್ಮನ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದಳು. ಹೀಗಾಗಿ ಸುಚಿತ್ರ ತನ್ನ ಎರಡನೇ ಗಂಡ ಮುನಿರಾಜು ಜತೆ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಳು.

ಪ್ರಾಣಾಪಾಯದಿಂದ ಪಾರಾದ ಅಣ್ಣಮ್ಮ

ಅಜ್ಜಿಯ ಜೀವ ಉಳಿಸಿದ್ದ ಮೊಮ್ಮಗ

ಈ ಹಿಂದೆಯೇ ಖತರ್ನಾಕ್‌ ದಂಪತಿ ಒಮ್ಮೆ ಮನೆಯಲ್ಲಿ ಅಣ್ಣಮ್ಮನ ಕೊಲೆಗೆ ಯತ್ನಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಅಣ್ಣಮ್ಮ ಮಲಗಿದ್ದಾಗಲೇ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದರು. ಇನ್ನೇನು ಕೊಲ್ಲಬೇಕು ಎಂದಾಗ ಸುಚಿತ್ರಾಳ ಮಗ (15) ಅಜ್ಜಿ ಜಿರಳೆ ಬಂತು ಎಂದು ಕೂಗಿ ಎಚ್ಚರಿಸಿದ್ದ. ಹೀಗಾಗಿ ಮೊದಲ ಪ್ಲಾನ್‌ ಫ್ಲಾಪ್‌ ಆಗಿತ್ತು.

ಈ ಘಟನೆ ಬಳಿಕ ಸ್ವಲ್ಪ ಸಮಯ ಸುಮ್ಮನಿದ್ದ ಮುನಿರಾಜು ಹಾಗೂ ಸುಚಿತ್ರಾ, ಕಳೆದ ವಾರ ಮತ್ತೆ ಕೊಲೆಗೆ ಯತ್ನಿಸಿದ್ದರು. ರಾತ್ರಿ ನೆಪವೊಡ್ಡಿ ಗೊರಗುಂಟೆ ಪಾಳ್ಯದ ಸ್ಮಶಾನದ ಬಳಿ ಚಿಕ್ಕಮ್ಮಳನ್ನು ಕರೆಸಿಕೊಂಡಿದ್ದಳು. ಇತ್ತ ದೂರಿದಲ್ಲಿದ್ದ ಮುನಿರಾಜು, ಅಣ್ಣಮ್ಮ ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದ್ದ. ಏಕಾಏಕಿ ದಾಳಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದ. ಅಳಿಯನ ಹಲ್ಲೆಯಿಂದ ಅಣ್ಣಮ್ಮ ಕುಸಿದು ಬಿದ್ದಿದ್ದರು. ಇತ್ತ ಮಗಳು ಸುಮಿತ್ರಾ ಚಿಕ್ಕಮ್ಮನ ಬಳಿ ಇದ್ದ ಚಿನ್ನಾಭರಣ ಹಾಗೂ ಹಣವನ್ನೆಲ್ಲ ಕಿತ್ತುಕೊಂಡು ಪತಿ ಜತೆಗೆ ಪರಾರಿ ಆಗಿದ್ದಳು.

ಚಿಕ್ಕಮ್ಮ ಸತ್ತಿದ್ದಾಳೆಂದು ಎಂದುಕೊಂಡ ಸುಚಿತ್ರಾ ಹಾಗೂ ಮುನಿರಾಜು ನೆಮ್ಮದಿಯಿಂದ ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ ಹಲ್ಲೆಗೊಳಾಗಿ ನರಳಾಡುತ್ತಿದ್ದ ಅಣ್ಣಮ್ಮ ಜೋರಾಗಿ ಕಿರುಚಾಡಿದ್ದಾರೆ. ಇದನ್ನೂ ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಅದೃಷ್ಟವಶಾತ್‌ ಅಣ್ಣಮ್ಮ ಪ್ರಾಣಾಪಾಯದಿಂದ ಪಾರಾಗಿದ್ದರು.

ಇತ್ತ ಚಿಕ್ಕಮ್ಮ ಬದುಕಿರುವ ವಿಚಾರ ತಿಳಿದ ಈ ಖತರ್ನಾಕ್‌ ದಂಪತಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ನಂತರ ಪೊಲೀಸರ ಕಣ್ತಪ್ಪಿಸಿ ಹಾಸನ, ಸಕೇಲಶಪುರದ ಸುತ್ತಮುತ್ತ ಸುತ್ತಾಡುತ್ತಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಮಾತಿನಂತೆ ಖತರ್ನಾಕ್‌ ದಂಪತಿ ಜೈಲುಪಾಲಾಗಿದ್ದಾರೆ. ಆರ್‌ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ:Heart Attack : ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

ಚಿಕ್ಕಬಳ್ಳಾಪುರ‌: ಹೆತ್ತ ತಂದೆ-ತಾಯಿಯನ್ನೇ ವಯಸ್ಸಾಗುತ್ತಲೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಇನ್ನು, ತಾಯಿ ಸಮಾನಳಾದ ಅತ್ತೆ ಮೇಲೆ ಸೊಸೆಯಂದಿರುವ ತೋರುವ ದರ್ಪ, ಹಲ್ಲೆಯ ಸುದ್ದಿಗಳಂತೂ ಆಗಾಗ ಕೇಳಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (Chikkaballapur District) ಮಹಿಳೆಯೊಬ್ಬರು 80 ವರ್ಷದ ಅತ್ತೆಯನ್ನು (Mother In Law) ಎಳೆದೊಯ್ದು, ತಿಪ್ಪೆಗೆ ಎಸೆಯುವ ಮೂಲಕ ಅಮಾನವೀಯತೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಸೊಸೆಯು ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ. 80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಿದ್ದಾರೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಳಿಯ ವಯಸ್ಸಿನಲ್ಲಿ ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಬಯಸುವ ಜೀವಕ್ಕೆ ಕಿರುಕುಳ ನೀಡಲು ಅವರು ಮಾಡಿದ ತಪ್ಪೇನು ಎಂಬುದು ತಿಳಿದುಬಂದಿಲ್ಲ. ವೆಂಕಟಲಕ್ಷ್ಮಮ್ಮ ಅವರನ್ನು ಎಳೆದು, ತಿಪ್ಪೆಗೆ ಎಸೆಯುವಾಗ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version