ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಅಲ್ತಾಫ್ ಖಾನ್ ಮೇಲೆ ದಾಳಿಗೆ ಯತ್ನ ನಡೆದಿದ್ದು, ಮೂವರನ್ನು ಪೊಲೀಸರು ವಶಕ್ಕೆ (Attempted attack ) ತೆಗೆದುಕೊಂಡಿದ್ದಾರೆ.
ಮಾರಕಾಸ್ತ್ರಗಳೊಂದಿಗೆ ಮನೆ ಬಳಿ ಬಂದಿದ್ದ ಮೂವರು ಯುವಕರು ಜೆ.ಜೆ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಅಲ್ತಾಪ್ ಖಾನ್ ಮನೆ ಬಳಿ ಆರೋಪಿಗಳು ಬಂದಿದ್ದರು. ಆಟೋರಿಕ್ಷಾದಲ್ಲಿ ಬಂದು ಹೊಂಚು ಹಾಕಿದ್ದರು.
ಬಳಿಕ ಮನೆಯಿಂದ ಹೊರ ಬರ್ಲಿಲ್ಲ ಬಚಾವ್ ಆದ ಅಂತ ಮಾತನಾಡಿಕೊಂಡು ಒಟ್ಟು ನಾಲ್ವರು ಆರೋಪಿಗಳು ಹೋಗುತ್ತಿದ್ದರು. ಆ ಮಾತು ಕೇಳಿಸಿಕೊಂಡ ಸ್ಥಳೀಯರು ಆಟೋದ ಬೆನ್ನತ್ತಿ ಹಿಡಿದಿದ್ದಾರೆ. ಚಾಕು, ಬ್ಲೇಡ್ ಗಳನ್ನ ಹಿಡಿದು ಬಂದಿದ್ದ ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜನ ಬೆನ್ನತ್ತಿದ್ದನ್ನು ನೋಡಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ತನಿಖೆ ಮುಂದುವರಿದಿದೆ.