Site icon Vistara News

Bags of rice seized : ಮಾಜಿ ಕಾರ್ಪೊರೇಟರ್‌ ಕಚೇರಿಯಲ್ಲಿ ಅಕ್ಕಿ ಚೀಲಗಳು ಜಪ್ತಿ, ಚುನಾವಣಾ ಅಕ್ರಮ ಶಂಕೆ

rice

#image_title

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೆಂಗಳೂರು ಪೊಲೀಸರು ಸಕ್ರಿಯರಾಗಿದ್ದಾರೆ. ಶಿವಾಜಿನಗರದ ಮಾಜಿ ಕಾರ್ಪೊರೇಟರ್, ರೌಡಿಶೀಟರ್ ಇಶ್ತಿಯಾಖ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. (Bags of rice seized) ಮಾಜಿ ಕಾರ್ಪೊರೇಟರ್ ಇಶ್ತಿಯಾಖ್ ಕಚೇರಿ ಮೇಲೆ ದಾಳಿಯಾಗಿದೆ.

ಶಿವಾಜಿನಗರ ನೋವಾ ರಸ್ತೆಯಲ್ಲಿ ಕಚೇರಿ ಇದೆ. ಮತದಾರರಿಗೆ ಹಂಚಲು ಅಕ್ಕಿ ಚೀಲಗಳನ್ನು ಸಂಗ್ರಹಿಸಿಟ್ಟಿದ್ದ ಬಗ್ಗೆ ಶಂಕೆ ಹಿನ್ನಲೆ ದಾಳಿ ನಡೆಸಲಾಗಿತ್ತು. ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ವೇಳೆ ಅಕ್ಕಿ ಚೀಲಗಳು ಪತ್ತೆಯಾಗಿತ್ತು.

ಅಕ್ಕಿಚೀಲಗಳನ್ನು ಶಿವಾಜಿ ನಗರ ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.

Exit mobile version