Site icon Vistara News

Rajakaluve Encroachment | ರಾಜಧಾನಿ ಅಭಿವೃದ್ಧಿ ಹೊಣೆ ಹೊತ್ತಿರುವ ಬಿಡಿಎಯಿಂದಲೇ 23 ಕೆರೆ ಒತ್ತುವರಿ!

Rajakaluve Encroachment

ಬೆಂಗಳೂರು: ಜನ ಸಾಮಾನ್ಯರು ಮಾತ್ರ ಅಲ್ಲ, ಬೆಂಗಳೂರಿನ ಅಭಿವೃದ್ಧಿ ಹೊಣೆ ಹೊತ್ತಿರುವ ಸಂಸ್ಥೆಯಿಂದಲೇ ಅಕ್ರಮ ನಡೆದಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(Rajakaluve Encroachment) ವಿರುದ್ಧ ನಗರದಲ್ಲಿ 2013-2014ರಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿದೆ.

ಬಿಡಿಎ ಕೆರೆಗಳನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ 2015ರಲ್ಲಿ ಒತ್ತುವರಿ ಕಾನೂನುಬದ್ಧಗೊಳಿಸುವಂತೆ ಬಿಡಿಎ ಸರ್ಕಾರಕ್ಕೆ ಪತ್ರ ಬರೆದಿತ್ತು. ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳನ್ನು ಮಣ್ಣು ತುಂಬಿ ಬಡಾವಣೆ ನಿರ್ಮಾಣ ಮಾಡಲಾಗಿದೆ. 23 ಕೆರೆ ಕೆಡಿಸಿ 3,530 ನಿವೇಶನಗಳನ್ನು ಮಾಡಿದೆ.

ಇದನ್ನೂ ಓದಿ | ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಹುಷಾರ್‌!: ಪ್ರತಿರೋಧದ ನಡುವೆಯೇ Footpath ಒತ್ತುವರಿ ತೆರವು

23 ಕೆರೆಗಳು ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪಕೊಟ್ಟು ಕೆರೆಗಳನ್ನು ಮುಚ್ಚಿರುವ ಬಿಡಿಎ, 1985ರಲ್ಲಿ ನಡೆದ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇಗಳ ವರದಿಯ ಆಧಾರದ ಮೇರೆಗೆ ಬಡಾವಣೆ ನಿರ್ಮಾಣ ಮಾಡಲಾಗಿದೆ. ಇದೀಗ ಈ ಕೆರೆಗಳಿದ್ದ ಭಾಗದಲ್ಲಿ ಸಣ್ಣ ಮಳೆಗೂ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಬಿಡಿಎ ಒತ್ತುವರಿ ಮಾಡಿರುವ ಬೆಂಗಳೂರಿನ 23 ಕೆರೆಗಳು

ಇದನ್ನೂ ಓದಿ | Rajakaluve Encroachment | ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಜೆಸಿಬಿ, ಸರ್ವೇಯರ್ ಕೊರತೆ

Exit mobile version