ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಬೆಂಗಳೂರಿನಲ್ಲೂ ಅದೇ ಖದರಿನೊಂದಿಗೆ ನಡೆಯುತ್ತಿದೆ. ಶನಿವಾರ ಬೆಳಗ್ಗೆ (ನವೆಂಬರ್ 25) ಆರಂಭಗೊಂಡಿರುವ ಬೆಂಗಳೂರು ಕಂಬಳ (Bangalore Kambala) ಭಾನುವಾರ ಸಂಜೆಯವರೆಗೂ ನಡೆಯಲಿದೆ. ಸುಮಾರು 158 ಜೋಡಿ ಕೋಣಗಳು ಭಾಗವಹಿಸಿದ ಈ ಕೂಟಕ್ಕೆ ಮುಂಜಾನೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini puneet Rajkumar), ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಚಾಲನೆ ನೀಡಿದರೆ, ಸಂಜೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಉದ್ಘಾಟಿಸಿದರು. ಕರಾವಳಿಯ ಈ ಜಾನಪದ ಕ್ರೀಡೆಯನ್ನು ನೋಡಲು ಲಕ್ಷಾಂತ ಮಂದಿ ಆಗಮಿಸಿದ್ದಾರೆ. ಇಲ್ಲಿ ಕೋಣಗಳ ಓಟವಲ್ಲದೆ, ಸಾಂಸ್ಕೃತಿಕ ವೈಭವ, ಆಹಾರ ಮೇಳ, ಕರಾವಳಿಯ ಸಂಸ್ಕೃತಿಯ ಪ್ರತಿಬಿಂಬಗಳ ವಸ್ತುಪ್ರದರ್ಶನ ಸೇರಿದಂತೆ ಹಲವು ಅಚ್ಚರಿಗಳು ಇದ್ದವು. ಅವುಗಳ ಒಂದು ಝಲಕ್ ಇಲ್ಲಿದೆ.