Site icon Vistara News

Bangalore Power Cut : ಗಮನಿಸಿ, ನಾಳೆ ಭಾನುವಾರ ಆದ್ರೂ ಬೆಂಗಳೂರಿನ ಈ ಏರಿಯಾಗಳಲ್ಲಿ 5 ಗಂಟೆ ಕರೆಂಟೇ ಇರಲ್ಲ

Power cut

ಬೆಂಗಳೂರು: ಆಗಸ್ಟ್‌ 13 ಭಾನುವಾರ. ರಜಾ ದಿನ (Sunday holiday) ಆಗಿರುವುದರಿಂದ ಮನೆಯಲ್ಲೇ ಸಿನಿಮಾ ನೋಡ್ಕೊಂಡು ಆರಾಮ ಆಗಿರೋಣ ಅಂತ ನೀವೇನಾದರೂ ಪ್ಲ್ಯಾನ್‌ ಮಾಡಿದ್ದರೆ, ಏನೋ ಅರ್ಜೆಂಟ್‌ ಕೆಲಸ ಇದೆ ಮುಗಿಸಿ ಬಿಡೋಣ ಅಂತೇನಾದರೂ ಯೋಚನೆ ಮಾಡಿದ್ದರೆ ಈ ಒಂದು ಮಾಹಿತಿಯನ್ನು ನೀವು ಸರಿಯಾಗಿ ಓದಿಕೊಳ್ಳಿ. ಸಾಮಾನ್ಯವಾಗಿ ಭಾನುವಾರ ಪವರ್‌ ಕಟ್‌ ಕಡಿಮೆ. ಜನರಿಗೆ ತೊಂದರೆ ಆಗಬಾರದು ಎನ್ನುವುದು ಬೆಸ್ಕಾಂನ (BESCOM issue) ನಿಲುವು. ಆದರೆ, ಈ ಬಾರಿ ಹಾಗಾಗುತ್ತಿಲ್ಲ. ಬೆಂಗಳೂರಿನ ಹಲವು ಭಾಗಗಳಲ್ಲಿ ಈ ಭಾನುವಾರ (ಆಗಸ್ಟ್‌ 13) ಹಗಲು ಸುಮಾರು ಏಳು ಗಂಟೆ ಹೊತ್ತು ಕರೆಂಟ್‌ (Bangalore power cut) ಇರುವುದಿಲ್ಲ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಸ್ಕಾಂ ವಿಭಾಗದ ತಾವರಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ವೃತ್ತ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ 11 ಕೆ.ವಿ. ಮಾರ್ಗಗಳಲ್ಲಿ ಆಗಸ್ಟ್ 13ರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಐದು ಗಂಟೆ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಯಾವ ಯಾವ ಏರಿಯಾದಲ್ಲಿ ಕರೆಂಟ್‌ ಇರಲ್ಲ ನೋಡ್ಕೊಳ್ಳಿ

  1. ಡಿಎಫ್‌ 1 ಮಾರ್ಗ: ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿನಗರ, ಎಸ್‌. ಗೊಲ್ಲಹಳ್ಳಿ, ಚಂದ್ರಪ್ಪ ವೃತ್ತ, ಸೂಲವಾರ, ಹುಣ್ಣಿಗೆರೆ, ಹುಲುವೇನಹಳ್ಳಿ, ಆಲಮ್ಮನ ಪಾಳ್ಯ, ಪುರದ ಪಾಳ್ಯ, ಕನಕನಗರ, ಕೂಡು ಸಿದ್ದನಪಾಳ್ಯ,
  2. ಡಿಎಫ್-2 ಮಾರ್ಗದ ಚಿಕ್ಕನಹಳ್ಳಿ, ಕೋಲೂರು, ಲಕ್ಕಯ್ಯನಪಾಳ್ಯ, ಗೋಪಾಲನಗರ, ದೊಡ್ಡರಿ ಡಿಎಫ್‌ನ ಚಿಕ್ಕಲ್ಲೂರು, ವೆಂಕಟಪುರ, ರಾಮಪುರ ಸುತ್ತಮುತ್ತ ವ್ಯತ್ಯಯ ಆಗಲಿದೆ.
  3. ಡಿಎಫ್ 3 ಮಾರ್ಗದ ಲಕ್ಕಯ್ಯನಪಾಳ್ಯ, ಉದ್ದಂಡಹಳ್ಳಿ, ಲಕ್ಷ್ಮೀಪುರ, ಚಿಕ್ಕೆಲ್ಲೂರು, ಕೋಲೂರು, ಕುಂದಾಳನಗರ, ಶೇಷಗಿರಿ ಮರ, ಸುಬ್ಬರಾಯನಪಾಳ್ಯ, ಸಿ.ಕೆ. ತಾಂಡ್ಯ, ಕೇತೋಹಳ್ಳಿ,
  4. ಡಿಎಫ್-4 ಮಾರ್ಗದ ದೊಡೇರಿ, ದೊಡೇರಿಕಾಲೋನಿ, ದೋಣೇನ ಹಳ್ಳಿ, ರಾಮನಾಯಕ ತಾಂಡ್ಯ, ಬ್ಯಾಲಾಳು, ಚುಂಚನಕುಪ್ಪೆ
  5. ಡಿಎಫ್‌ 5 ಮಾರ್ಗದ ಮುದ್ದನಪಾಳ್ಯ, ದೊಡ್ಡಮಾರನಹಳ್ಳಿ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ಹೊಸಪಾಳ್ಯ, ಕಾಳಯ್ಯನಪಾಳ್ಯ
  6. ಡಿಎಫ್ 6 ಮಾರ್ಗದ ಹುಲುವೇನ ಹಳ್ಳಿ ಮತ್ತು ಮಾದಾಪಟ್ಟಣ ಸುತ್ತಮುತ್ತಲಿನ ಚೆಲ್ಲಿ ಕ್ರಷರ್ ಪ್ರದೇಶ
  7. ಡಿಎಫ್7 ಮಾರ್ಗದ ದೊಡ್ಡರಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ
  8. ಡಿಎಫ್ 8 ಮಾರ್ಗದ ಕುರುಬರಪಾಳ್ಯ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ
  9. ಡಿಎಫ್9 ಮಾರ್ಗದ ಗೊಲ್ಲಹಳ್ಳಿ ಮತ್ತು ಸೂಲಿವಾರ ಸುತ್ತಮುತ್ತಲಿನ ಚೆಲ್ಲಿ ಕ್ರಷರ್‌ಪ್ರದೇಶ,
  10. ಡಿಎಫ್10 ಮಾರ್ಗದ ಚುಂಚನಕುಪ್ಪೆ, ದೊಡೇನಹಳ್ಳಿ, ಬ್ಯಾಲಾಳು, ಚುಂಚನಕುಪ್ಪೆ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ದೊಡ್ಡ ಮಾರನಹಳ್ಳಿ, ಮುದ್ದನ ಪಾಳ್ಯ
  11. ಡಿಎಫ್11 ಮಾರ್ಗದ ಉದ್ದಂಡನ ಹಳ್ಳಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ
  12. ಡಿಎಫ್12 ಮಾರ್ಗದ ಸೂಲಿವಾರ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ದೊಡ್ಡರಿ

ಮುನ್ನೆಚ್ಚರಿಕೆ ವಹಿಸಿಕೊಳ್ಳಿ

  1. ನಿಮ್ಮ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ಮೊದಲೇ ಚಾರ್ಜ್‌ ಮಾಡಿಟ್ಟುಕೊಳ್ಳಿ.
  2. ಮಧ್ಯಾಹ್ನದ ಅಡುಗೆಯ ಸಿದ್ಧತೆಗಳನ್ನು ಬೇಗ ಮಾಡಿಕೊಂಡು ಬೆಳಗ್ಗೆ 10 ಗಂಟೆಯ ಒಳಗೆ ಮುಗಿಸಿಕೊಳ್ಳಿ
  3. ಎಲ್ಲಾದರೂ ಹೊರಗೆ ಹೋಗುವ ಪ್ರೋಗ್ರಾಂ ಇದ್ದರೆ ಕರೆಂಟ್‌ ಇಲ್ಲದ ಟೈಮಿನಲ್ಲೇ ಮುಗಿಸಿಕೊಳ್ಳಿ

ಇದನ್ನೂ ಓದಿ:

Exit mobile version