Site icon Vistara News

Banglore traffic | ಟ್ರಾಫಿಕ್‌ ರೂಲ್ಸ್ ಮುರಿಯುವವರೇ ಹುಷಾರ್‌, ಬಂದಿದೆ ಹದ್ದಿನ ಕಣ್ಣು !

traffic signal

ಬೆಂಗಳೂರು: ಇನ್ನು ಮುಂದೆ ಸಿಲಿಕಾನ್ ಸಿಟಿಯ ಸಿಗ್ನಲ್‌ಗಳಲ್ಲಿ ಟ್ರಾಫಿಕ್‌ ಪೊಲೀಸ್‌ ಇಲ್ಲದಿರಬಹುದು, ಆದರೆ ಸವಾರರ ಮೇಲೆ ಟ್ರಾಫಿಕ್ ಪೊಲೀಸರ ಹದ್ದಿನ ಕಣ್ಣು ಸದಾ ಇರುತ್ತದೆ. ಸಿಗ್ನಲಿನಲ್ಲಿ ಪೊಲೀಸರು ಇಲ್ಲವೆಂದು ಜಂಪ್ ಮಾಡಲು ಹೋದರೆ, ತ್ರಿಬಲ್‌ ರೈಡ್‌ ಮಾಡಿದರೆ ಕೇಸು ಬಿದ್ದೇ ಬೀಳಲಿದೆ.

ಅದು ಹೇಗೆ ಅಂತೀರಾ? ಸಂಚಾರಿ ಪೊಲೀಸರೂ ಈಗ ಅಪ್‌ಡೇಟ್‌ ಆಗಿದ್ದಾರೆ. ಸಿಗ್ನಲ್‌ಗಳಲ್ಲಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅಳವಡಿಸಲಾಗುತ್ತಿದೆ. ಏನಿದು ITM ಸಿಸ್ಟಮ್? ಇದು ಸಿಗ್ನಲ್‌ನಲ್ಲಿ ಅಳವಡಿಸಲಾಗುವ ಹೈ ರೆಸಲ್ಯೂಷನ್‌ ಇರುವ ಹೈ ಎಂಡ್ ಕ್ಯಾಮೆರಾ. ಇದರಲ್ಲಿ ನಿಮ್ಮ ಪ್ರತೀ ಚಲನೆಯೂ ರೆಕಾರ್ಡ್ ಆಗುತ್ತದೆ. 24 ಗಂಟೆಯೂ ಚಾಲನೆಯಲ್ಲಿರುತ್ತದೆ. ಈಗಾಗಲೇ 50 ಜಂಕ್ಷನ್‌ಗಳಲ್ಲಿ 250 ITMS ಕ್ಯಾಮರಾ ಅಳವಡಿಸಲಾಗಿದೆ.

ಹೇಗೆ ಕೆಲಸ ಮಾಡುತ್ತದೆ?

ರೂಲ್ಸ್ ಮುರಿದ ತಕ್ಷಣವೇ ಐದು ಸೆಕೆಂಡ್‌ನ ವಿಡಿಯೋ ಜೊತೆ ದಂಡದ ಸಂದೇಶ ಬರುತ್ತದೆ. ಅಲ್ಲೇ ಕ್ಯೂ ಆರ್ ಕೋಡ್ ಮೂಲಕ ದಂಡ ಕಟ್ಟಬೇಕು. ಫೈನ್ ಕಟ್ಟಲಿಲ್ಲ ಅಂದರೆ 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟೀಸ್‌ ಬರುತ್ತದೆ. ನೋಟೀಸ್ ಬಂದರೆ ಕೋರ್ಟಿಗೆ ಹೋಗಿ ಫೈನ್‌ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ | ಬೆಂಗಳೂರಿಗೆ ಹೊಸದಾಗಿ ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ

Exit mobile version