ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದಿಂದ(Bruhath Bangalore Hotels Association) ಸೆ.20ರಂದು ನಗರದ ರೆಸಿಡೆನ್ಸಿ ರಸ್ತೆಯ ಚಾನ್ಸೆರಿ ಪೆವಿಲಿಯನ್‌ನ ಬಾಲ್ ರೂಮ್‌ನಲ್ಲಿ ಬಿಬಿಎಚ್‌ಎ-2022 ಫುಡ್ ಅವಾರ್ಡ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸಂಜೆ 4.30ರಿಂದ 5 ಗಂಟೆವರೆಗೆ ಹೈ ಟೀ(ಚಹಾಕೂಟ)ವಿದೆ. 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಂಜೆ 5.30ರಿಂದ ರಾತ್ರಿ 8.30ರವರೆಗೆ ಬಿಬಿಎಚ್‌ಎ ಫುಡ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, 8.30ಕ್ಕೆ ಭೋಜನ ಕೂಟ ಏರ್ಪಡಿಸಲಾಗಿದೆ.
ಇದನ್ನೂ ಓದಿ | ಡಿಕೆಶಿಗೆ ಡಬಲ್ ಸಂಕಷ್ಟ: ಒಂದು ಕಡೆ ಇ.ಡಿ ಗ್ರಿಲ್, ಇನ್ನೊಂದು ಕಡೆ ಐಟಿ ತನಿಖೆಗೆ ಸುಪ್ರೀಂಕೋರ್ಟ್ ಅಸ್ತು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜನಪ್ರಿಯ ನಟ, ಸೆಲೆಬ್ರಿಟಿ ಚೆಫ್ ಸಿಹಿ ಕಹಿ ಚಂದ್ರು, ಜಿಆರ್‌ಬಿ ಕಾರ್ಯನಿರ್ವಾಹಕ ಧನರಾಜ್ ಬಾಲಸುಬ್ರಹ್ಮಣ್ಯಂ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಭಾಗವಹಿಸಲಿದ್ದಾರೆ.
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಡಾ.ಆರ್.ರವಿಚಂದರ್, ಅಧ್ಯಕ್ಷ ಪಿ.ಸಿ.ರಾವ್, ಚೇರ್‌ಮನ್ ಅರುಣ್ ಅಡಿಗ, ಉಪಾಧ್ಯಕ್ಷರಾದ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ರಾಧಾಕೃಷ್ಣ ಅಡಿಗ, ಗೌರವ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್, ಜಂಟಿ ಕಾರ್ಯದರ್ಶಿಗಳಾದ ಶಕೀರ್ ಹಾಕ್, ಎ.ಎಲ್. ರಾಕೇಶ್, ಖಜಾಂಚಿ ಜಿ.ಸುಧಾಕರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | Good News | 11,133 ಪೌರ ಕಾರ್ಮಿಕರ ಕಾಯಂಗೆ ರಾಜ್ಯ ಸಚಿವ ಸಂಪುಟ ಅನುಮೋದನೆ