Site icon Vistara News

BDA Site: ಬಿಡಿಎ ಎಡವಟ್ಟಿಗೆ 700 ಸೈಟ್‌ ಅತಂತ್ರ! ಮುಚ್ಚಲಾಗುತ್ತಾ ಕೆಂಪೇಗೌಡ ಲೇಔಟ್‌?

BDA Site issue 700 sites disrupted due to BDA error

ಬೆಂಗಳೂರು: ಬೆಂಗಳೂರಿನಲ್ಲಿ ಬಿಡಿಎ ಅನುಮೋದಿತ ಸೈಟ್‌ಗಳು (BDA Site) ಎಂದರೆ ಸುರಕ್ಷಿತ ಎಂಬ ಭಾವನೆ ಎಲ್ಲರಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಸೈಟ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇರಲಿದೆ. ಆದರೆ, ಈಗ ಬಿಡಿಎ ಎಡವಟ್ಟಿಗೆ 700 ಸೈಟ್ ಮಾಲೀಕರು ಕಂಗಾಲಾಗಿದ್ದಾರೆ. ಬಿಡಿಎಯಿಂದ ಕೆಂಪೇಗೌಡ ಲೇಔಟ್‌ನಲ್ಲಿ (Kempegowda Layout) ನಿರ್ಮಾಣ ಮಾಡಲಾಗಿರುವ ಲೇಔಟ್‌ನಲ್ಲಿ ಮನೆ ನಿರ್ಮಾಣ ಮಾಡಲು ಆಗುತ್ತಿಲ್ಲ. ಕಾರಣ, ಅಲ್ಲಿ ಕೇವಲ ಮೂರೇ ಅಡಿಗೆ ಅಂತರ್ಜಲ (Ground Water) ಸಿಗುತ್ತಿದೆ!

ಕನ್ನಳ್ಳಿಕೆರೆ ಹಾಗೂ ಸೂಲಿಕೆರೆ ನಡುವೆ ಇರುವ ಕೆಂಪೇಗೌಡ ಲೇಔಟ್ ಇದಾಗಿದೆ. ಕೆರೆಯಿಂದ ಕೆಳಭಾಗದಲ್ಲಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಮನೆ ನಿರ್ಮಾಣಕ್ಕೆ ಮೂರು ಅಡಿ ಪಾಯ ತೆಗೆದರೆ ಸಾಕು ಅಂತರ್ಜಲ ಸಿಗುತ್ತಿದೆ. ಈ ಸಂಬಂಧ ಐಐಎಸ್‌ಸಿಯಿಂದ ವರದಿ ಸಲ್ಲಿಕೆಯಾಗಿದೆ. ಕೆರೆ ನೀರು ಬಸಿದು ಲೇಔಟ್‌ನೊಳಗೆ ಅಂತರ್ಜಲ ಉಕ್ಕಿ ಹರಿಯುತ್ತಿದೆ.

ಈಗ ಕೆರೆ ನೀರು ಬಸಿಯದಂತೆ ತಡೆಗೋಡೆ ನಿರ್ಮಾಣಕ್ಕೆ ಸಲಹೆ ನೀಡಲಾಗಿದೆ. ಆದರೆ, ತಡೆಗೋಡೆ ನಿರ್ಮಾಣ ಮಾಡಿದರೂ ಮನೆ ನಿರ್ಮಾಣ ಕಷ್ಟ ಎಂದು ಹೇಳಲಾಗುತ್ತಿದೆ. ಇಲ್ಲಿ ನೀಡಲಾದ 700 ನಿವೇಶನಗಳಿಗೆ ಬದಲಿ ನಿವೇಶನ ನೀಡಲು ಸದ್ಯಕ್ಕೆ ಪ್ಲ್ಯಾನ್‌ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Partition of India: ಡಿಕೆ ಸುರೇಶ್ ‌ʼದೇಶ ವಿಭಜನೆʼ ಹೇಳಿಕೆ; ಡಿಕೆ ಬ್ರದರ್ಸ್‌ ಮನೆಯತ್ತ ನುಗ್ಗಿದ ಬಿಜೆಪಿ

700 ಸೈಟ್‌ನಲ್ಲೂ ಅಂತರ್ಜಲ ಪತ್ತೆ!

ಈ ಕೆಂಪೇಗೌಡ ಲೇಔಟ್‌ನಲ್ಲಿರುವ 700 ಲೇಔಟ್‌ನಲ್ಲಿಯೂ ಅಂತರ್ಜಲ ಸಿಗುತ್ತಿದೆ. ಮೊದಲು ಇಲ್ಲಿದ್ದ ಪಾರ್ಕ್ ಅನ್ನು ಸೈಟ್‌ಗಳನಾಗಿ ಮಾರ್ಪಾಡು ಮಾಡಲು ಸಲಹೆ ನೀಡಲಾಗಿದೆ. ಹೀಗಾಗಿ ಈಗಿರುವ ಸೈಟ್‌ಗಳನ್ನು ಪುನಃ ಪಾರ್ಕ್ ಅನ್ನಾಗಿ ಮಾಡಲು ಸಲಹೆ ಕೇಳಿಬಂದಿದೆ. ಆದರೂ ಅಂತರ್ಜಲ ನಿಲ್ಲೋದು ಅನುಮಾನ ಎಂದು ಹೇಳಲಾಗಿದೆ. ಬಿಡಿಎ ಎಂಜಿನಿಯರ್‌ಗಳು ಮಾಡಿದ ಎಡವಟ್ಟಿಗೆ ಇಡೀ ಲೇಔಟ್ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.

Exit mobile version