Site icon Vistara News

Beautiful IPS : ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು… ಖಾಕಿ ಬಿಟ್ಟು ಬ್ಯೂಟಿಯಲಿ ರಾಣಿಯಂತೆ ಮಿಂಚಿದಳು!

Roopa IPS in different look

ಬೆಂಗಳೂರು: ಈ ಚಿತ್ರ ನೋಡಿದರೆ ನಿಮಗೆ ಖಂಡಿತವಾಗಿಯೂ ಯಾರಿವಳು? ಯಾರಿವಳು? ಸೂಜಿಮಲ್ಲಿ ಕಣ್ಣವಳು, ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು ಎಂಬ ಹಾಡು ನೆನಪಾಗದಿರದು. ಕೆಲವರಿಗೆ ಆಕಾಶದಿಂದ ಧರೆಗಿಳಿದ ರಂಭೆ.. ಇವಳೇ ಇವಳೇ ಚಂದನದ ಗೊಂಬೆ ಹಾಡು ಕೂಡಾ ನೆನಪಾದೀತು (Beautiful IPS).

ಇಷ್ಟೊಂದು ಸುಂದರವಾಗಿ, ಎಲಿಗೆಂಟ್‌ ಆಗಿ, ಜಾರ್ಜಿಯಸ್‌ ಆಗಿ, ಬ್ರೈಟ್‌ ಆಗಿ ಮಿಂಚ್ತಾ ಇರುವ ಇವರು ಯಾರಪ್ಪಾ ಅನ್ನೋದು ನಿಮಗಿನ್ನೂ ಗೊತ್ತಾಗದೆ ಇದ್ದರೆ ನಿಮಗಾಗಿ ಕೆಲವೊಂದು ಕ್ಲೂಗಳನ್ನು ಕೊಡಬಹುದು.

ಇವರು ಖಾಕಿ ಹಾಕ್ಕೊಂಡು ಎದುರು ನಿಂತರೆ ಖಡಕ್‌ ಪೊಲೀಸ್‌ ಆಫೀಸರ್‌ (Police Officer), ಅದೇ ಚೆಂದಕ್ಕೆ ಡ್ರೆಸ್‌ ಮಾಡ್ಕೊಂಡು ಬಂದರೆ ಸಿನಿಮಾ ಹೀರೋಯಿನ್‌. ಒಂದು ಕಾಲದಲ್ಲಿ ದಾವಣಗೆರೆ ಸುಂದರಿಯಾಗಿ ಮಿಂಚಿದವರು. ಇವತ್ತಿಗೂ ಅದೇ ಖದರ್‌ ಉಳಿಸಿಕೊಂಡವರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬಹುದು ಎಂದರೆ ತಮ್ಮ ಖಡಕ್‌ತನದಿಂದ ರಾಜ್ಯದಲ್ಲೇ ಅತಿ ಹೆಚ್ಚು ಬಾರಿ ವರ್ಗಾವಣೆಗೆ ಒಳಗಾದ ಐಪಿಎಸ್‌ ಆಫೀಸರ್‌. ಹೋದಲ್ಲೆಲ್ಲ ತಮ್ಮದೇ ಛಾಪು ಒತ್ತಿದವರು. ತಮ್ಮ ಗಟ್ಟಿ ನಿಲುವು, ಯಾರನ್ನೇ ಆದರೂ ಎದುರು ಹಾಕಿಕೊಳ್ಳುವ ಛಾತಿಯಿಂದ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರು.

ಈಗಾಗಲೇ ಬಹುತೇಕರಿಗೆ ಇವರು ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿರುತ್ತದೆ. ಇಷ್ಟೂ ಹೇಳಿದ ಮೇಲೂ ಗೊತ್ತಾಗದಿದ್ದವರಿಗೆ ಅಲ್ಟಿಮೇಟ್‌ ಕ್ಲೂ ಒಂದಿದೆ. ಅದೇನೆಂದರೆ ಮೊನ್ನೆ ಮೊನ್ನೆಯಷ್ಟೇ ಐಎಎಸ್‌ ಆಫೀಸರ್‌ ರೋಹಿಣಿ ಸಿಂಧೂರಿ (Rohini Sindhuri IAS) ಅವರ ಜತೆ ನೇರಾನೇರ ಜಗಳಕ್ಕಿಳಿದು ಸುದ್ದಿಯಾದವರು.

ಯೆಸ್‌ ಖಂಡಿತವಾಗಿಯೂ ಅವರೇ..ಐಪಿಎಸ್‌ ಆಫೀಸರ್‌ ಡಿ. ರೂಪಾ ಮೌದ್ಗಿಲ್‌ (D Roopa Moudgil IPS). ಸಮರ್ಥ, ದಕ್ಷ, ಪವರ್‌ಫುಲ್‌, ಖಡಾಖಡಿ, ವಿವಾದಪ್ರಿಯ ಪೊಲೀಸ್‌ ಅಧಿಕಾರಿಣಿ. ಯಾವನ್‌ ಬೇಕಾದರೂ ಬರ್ಲಿ ಕೇರ್‌ ಮಾಡಲ್ಲ ಎನ್ನುವ ಕೇರ್‌ಲೆಸ್‌ ಆಟಿಟ್ಯೂಡ್‌ನ ಒನ್‌ ಎಂಡ್‌ ಓನ್ಲಿ ಲೇಡಿ ಪೊಲೀಸ್‌ ಅಧಿಕಾರಿ.

D Roopa IPS in Navaratri Photo Shoot

ಈಗ ಆಂತರಿಕ ಭದ್ರತಾ ವಿಭಾಗದ ಐಪಿಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ. ರೂಪಾ ಐಪಿಎಸ್‌ ಅವರು ನವರಾತ್ರಿ ವಿಶೇಷವಾಗಿ ವಿಶೇಷ ಫೋಟೊಶೂಟ್‌ ಮಾಡಿಕೊಂಡಿದ್ದಾರೆ. ಖಾಕಿ ಬಿಟ್ಟು ಮಹಾರಾಣಿಯಂತೆ ಕಂಗೊಳಿಸಿದ್ದಾರೆ.

ಬಗೆ ಬಗೆಯ ರೂಪಗಳಲ್ಲಿ ಮಿಂಚಿದ ರೂಪಾ

ರೂಪಾ ಐಪಿಎಸ್‌ ಅವರು ಮೊದಲೇ ಹೇಳಿದಂತೆ ಸುರಸುಂದರಿ ಎಂಬ ಖ್ಯಾತಿವೆತ್ತವರು. ಮಿಸ್‌ ದಾವಣಗೆರೆ ಟೈಟಲ್‌ ಮುಡಿಗೇರಿಸಿಕೊಂಡವರು. ಪೊಲೀಸ್‌ ಅಧಿಕಾರಿಯಾದ ಬಳಿಕವೂ ಸ್ಟೈಲಿಷ್‌ ಆಗಿ ಮಿಂಚುತ್ತಿದ್ದ ಅವರು ಈಗ ಹೊಸ ರೂಪದೊಂದಿಗೆ ಬಂದಿದ್ದಾರೆ.

ಭಾರ್ಗವಿ ಕೆ.ಆರ್‌. ಎಂಬವರು ರೂಪಾ ಮೌದ್ಗಿಲ್‌ ಅವರನ್ನು ಹೊಸ ರೂಪಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಿ ಮಿಂಚಿಸಿದ್ದಾರೆ. ಇಲ್ಲಿ ರೂಪಾ ಅವರ ಎರಡು ರೂಪಗಳು ಅನಾವರಣಗೊಂಡಿವೆ. ಒಂದು ಎಂಥವರನ್ನೂ ಸೆಳೆಯುವ ಚೆಲುವಿನ ಖನಿ, ನಾಚಿ ನೀರಾಗುವ ಮಂಜಿನ ಹನಿ. ಇನ್ನೊಂದು ಖಡ್ಗ ಹಿಡಿದು ಯಾವ ಸಮರಕ್ಕಾದರೂ ರೆಡಿ ಎನ್ನುವ ಮಹಾರಾಣಿ.

ರೂಪಾ ಮೌದ್ಗಿಲ್‌ ಅವರನ್ನು ಈ ರೀತಿ ಚಿತ್ರಿಸಿರುವ ಭಾರ್ಗವಿ ಅವರು ರೂಪಾ ಅವರು ಹೆಣ್ಣಿನ ಶಕ್ತಿಯ ಪ್ರತಿರೂಪ ಎಂದು ವ್ಯಾಖ್ಯಾನಿಸಿದ್ದಾರೆ. ಇದು ನವರಾತ್ರಿಯ ನವಶಕ್ತಿಯಂತೆ ಎಂದಿದ್ದಾರೆ.

ರೂಪಾ ಮೌದ್ಗಿಲ್‌ ಅವರು ಸಾಮರ್ಥ್ಯ, ಬೆಡಗು ಮತ್ತು ಸಬಲೀಕರಣಗಳ ಸಂಕಲಿತ ರೂಪ ಎನ್ನುತ್ತಾರೆ ಭಾರ್ಗವಿ. ಒಬ್ಬ ಐಎಎಸ್‌ ಅಧಿಕಾರಿಯಾಗಿ ಸವಾಲುಗಳನ್ನು ಎದುರಿಸುತ್ತಾ ಎತ್ತರೆತ್ತರ ಬೆಳೆಯುತ್ತಿದ್ದಾರೆ ಎನ್ನುವುದು ಭಾರ್ಗವಿಯವರ ವ್ಯಾಖ್ಯಾನ.

ಜಗತ್ತಿನಲ್ಲಿ ಹೆಣ್ಣುಮಕ್ಕಳು ತಮ್ಮ ಮುಂದಿರುವ ಎಲ್ಲ ಬೇಲಿಗಳನ್ನು ಮುರಿದು ಮುನ್ನುಗುತ್ತಿರುವ ಹೊತ್ತಿನಲ್ಲಿ ಕಠೋರ ಮತ್ತು ಕೋಮಲ ಎಂಬ ಭಿನ್ನ ನಿಲುಮೆಗಳು ಒಂದಾಗಿ ನಿಂತ ನಿದರ್ಶನವಾಗಿ ರೂಪಾ ಎದುರಾಗುತ್ತಾರೆ ಎನ್ನುತ್ತಾರೆ.

ಈ ಚಿತ್ರಗಳು ಕೇವಲ ಫ್ಯಾಷನ್‌ ಅಲ್ಲ, ಇದು ಸಬಲೀಕರಣ, ಎಲ್ಲದಕ್ಕೂ ಹೊಂದಿಕೊಳ್ಳುವ, ಯಾವ ಕೆಲಸವನ್ನಾದರೂ ಮಾಡಬಲ್ಲ, ಯಾವುದಕ್ಕೂ ಹೆದರದ, ಬೆದರದ, ಜಗ್ಗದ ಹೆಣ್ಣೊಬ್ಬಳ ಸಾಮರ್ಥ್ಯದ ದಿಟ್ಟ ಉದಾಹರಣೆ ಎನ್ನುತ್ತಾರೆ ಭಾರ್ಗವಿ ಕೆ.ಆರ್‌.

D Roopa IPS in Navaratri Photo Shoot

ನೀವು ನೀವಾಗಿದ್ದುಕೊಂಡೇ ಈ ಜಗತ್ತನ್ನು ಗೆಲ್ಲಬಹುದು ಎನ್ನುವುದನ್ನು ನೆನಪಿಸುವ ಉಪಮೆ ಇದು. ಅಧಿಕಾರ ಮತ್ತು ಹೆಣ್ತನವನ್ನು ಸಮತೋಲಿತವಾಗಿ ಇಟ್ಟುಕೊಂಡು ಅತ್ಯಂತ ಶಕ್ತಿಶಾಲಿಯಾದ ಹೆಜ್ಜೆಗಳನ್ನು ದಿಟ್ಟವಾಗಿ ಮತ್ತು ಅಷ್ಟೇ ನಾಜೂಕಾಗಿ ಹೇಗೆ ಇಡಬಹುದು ಎಂದು ತೋರಿಸುವ ಹಾದಿ ರೂಪಾ ಅವರದ್ದು ಎಂದಿದ್ದಾರೆ ಭಾರ್ಗವಿ.

ಇದನ್ನೂ ಓದಿ: D Roopa IPS : ಹಿರಿಯ ಅಧಿಕಾರಿಗಳನ್ನೂ ಬಿಡದೆ ಬೆನ್ನಟ್ಟುವ ಡಿ. ರೂಪಾ; ಯಾರಿವರು, ಇವರ ಹಿನ್ನೆಲೆ ಏನು?

ಈ ಸುಂದರ ಚಿತ್ರಣದ ವಿಡಿಯೊವನ್ನು ಇಲ್ಲಿ ನೋಡಿ

ಈ ಚಿತ್ರಗಳನ್ನು ನೋಡಿ ನೆಟ್ಟಿಗರು ವ್ಹಾ ಎಂದಿದ್ದಾರೆ. ಕೆಲವರು ಕಿತ್ತೂರು ರಾಣಿ ಚೆನ್ನಮ್ಮ ಅಂದಿದ್ದಾರೆ. ಅಂತೂ ಹಬ್ಬದ ಸಂದರ್ಭದಲ್ಲಿ ಚೆಲುವು ಮತ್ತು ಬುದ್ಧಿಶಕ್ತಿಯ ಸಂಗಮವಾಗಿ ರೂಪಾ ಐಪಿಎಸ್‌ ಮಿಂಚಿದ್ದಾರೆ.

Exit mobile version