ಬೆಂಗಳೂರು: ಓವರ್ ನೈಟ್ ಪಾರ್ಟಿಗೆ ಅವಕಾಶ ಮಾಡಿಕೊಡುತ್ತಿದ್ದ ಬಾರ್, ರೆಸ್ಟೋರೆಂಟ್, ಪಬ್‌ಗಳಿಗೆ ಸಿಟಿ ಪೊಲೀಸರು (Bengaluru News) ತಡರಾತ್ರಿ ಬಿಸಿ ಮುಟ್ಟಿಸಿದ್ದರು. ಪಬ್ ಓಪನ್ ಮಾಡಲು ಟೈಮ್ ಇದೆ, ಆದರೆ ಕ್ಲೋಸ್ ಮಾಡೋಕೆ ಟೈಮ್ ಫಾಲೋ ಮಾಡುತ್ತಿರಲಿಲ್ಲ. ಹೀಗೆ ಲೇಟ್ ನೈಟ್ ಪಾರ್ಟಿಗೆ ಅವಕಾಶ ನೀಡಿದ್ದ ಪಬ್‌ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು. ವಿರಾಟ್ ಕೊಹ್ಲಿ ಪಬ್ ಸೇರಿ ಹಲವು ಪಬ್‌ಗಳ ಮೇಲೆ ಸೆಂಟ್ರಲ್ ಡಿವಿಷನ್ ಪೊಲೀಸರು ಸ್ಪೆಷಲ್ ರೈಡ್ ಮಾಡಿದರು.
ಬೆಂಗಳೂರಿನ ಚಿನ್ನಸ್ಚಾಮಿ ಸ್ಟೇಡಿಯಂ ಬಳಿ ಇರುವ ಕ್ರಿಕೆಟರ್ ವಿರಾಟ್ ಕೊಹ್ಲಿ ಒಡೆತನದ 18 ಪಬ್ ಮೇಲೆ ಕೇಂದ್ರ ವಿಭಾಗದ ಪೊಲೀಸರು ಶನಿವಾರ ರಾತ್ರಿ ರೇಡ್ ಮಾಡಿದ್ದಾರೆ. ಅವಧಿ ಮುಗಿದರೂ ಲೇಟ್ ನೈಟ್‌ವರೆಗೂ ಓಪನ್ ಮಾಡಿದ್ದ ಕೊಹ್ಲಿ ಪಬ್ ಸೇರಿ ಕೇಂದ್ರ ವಿಭಾಗದ ಹಲವು ಪಬ್‌ಗಳ ಮೇಲೆ ರೇಡ್ ಮಾಡಿ ಕೇಸ್ ಹಾಕಲಾಗಿದೆ.
ಅತಿಯಾದ ಡಿಜೆ ಸೌಂಡ್, ಓವರ್ ನೈಟ್ ಪಾರ್ಟಿಗಳಿಂದ ತೊಂದರೆ ಅನುಭವಿಸಿದ ಅಕ್ಕ-ಪಕ್ಕದ ಜನರಿಂದ ಈ ಬಗ್ಗೆ ಪೊಲೀಸರಿಗೆ ಸಾಲು ಸಾಲು ದೂರುಗಳು ಬರುತ್ತಿದ್ದವು. ಈ ಬೆನ್ನಲ್ಲೇ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ ನಿನ್ನೆ ಶನಿವಾರ ರಾತ್ರಿ ಪಬ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಕೊಹ್ಲಿ ಒಡೆತನದ 18 ಪಬ್ ಸೇರಿ ಹಲವೆಡೆ ದಾಳಿ ನಡೆಸಿದ್ದ ಪೊಲೀಸರು ಬಂದ್ ಮಾಡಿ ಕ್ಲೋಸ್ ಮಾಡಿಸಿದ್ದಾರೆ.
ಇದನ್ನೂ ಓದಿ: Kalaburagi News : ಕಾಮಗಾರಿ ವೇಳೆ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು
ಈ ಹಿಂದೆಯೂ ಕೊಹ್ಲಿ ಒಡೆತನದ 18ಪಬ್ ಅವಧಿ ಮೀರಿ ಪಾರ್ಟಿಗೆ ಅವಕಾಶ ನೀಡಿತ್ತು. ಆಗಲೂ ಪೊಲೀಸರು ಹೋಗಿ ಪಬ್‌ನ ಕ್ಲೋಸ್ ಮಾಡಿಸಿ ವಾರ್ನ್ ಮಾಡಿದ್ದಲ್ದೇ ಕೇಸ್ ಕೂಡ ದಾಖಲಿಸಿದ್ದರು. ಇಷ್ಟಾದರೂ ಮತ್ತೆ ಲೇಟ್ ನೈಟ್‌ವರೆಗೂ ಪಬ್‌ಅನ್ನು ತೆರೆದಿದ್ದರು. ಎಂಜಿ. ರೋಡ್ , ಬ್ರಿಗೇಡ್ ರೋಡ್ , ಚರ್ಚ್ ಸ್ಟ್ರೀಟ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಅವಧಿ ಮೀರಿ ನಡೆಯುತ್ತಿದ್ದ 15 ಪಬ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸದ್ಯ ಪಬ್‌ಗಳು ಹೆಚ್ಚಿರುವ ಕೇಂದ್ರ ವಿಭಾಗದ ಇಂದಿರಾನಗರ, ಕೋರಮಂಗಲ ಕಡೆ ಕೂಡ ಇದೆ ರೀತಿಯ ನಿಯಮ ಉಲ್ಲಂಘನೆ ನಡೆಯುತ್ತಿದೆ. ಹೀಗಾಗಿ ಈ ವಿಶೇಷ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ