Site icon Vistara News

Bengaluru News : 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ; ತ್ರಿಬಲ್‌ ರೈಡಿಂಗ್‌ಗೆ ಬ್ರೇಕ್‌!

Helmets are also mandatory for children above 6 years of age

ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic police) ಶಾಲೆಗಳ ಬಳಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಮಕ್ಕಳು ಹೆಲ್ಮೆಟ್ ಧರಿಸದೇ (Helmet Awareness) ಬಂದ ಹಿನ್ನೆಲೆಯಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶವನ್ನು (Bengaluru News) ಹೊರಡಿಸಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತರುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಜತೆಗೆ ಮೂರಕ್ಕೂ ಹೆಚ್ಚು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಕರೆದುಕೊಂಡು ಹೋದರೆ ಅಂತಹ ಪೋಷಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಲಾ ಆಟೋ, ಖಾಸಗಿ ಕಾರು, ಟಿಟಿ ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಕೂರಿಸಿಕೊಂಡರೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’ ಎಂದ ಪ್ರಿಯತಮೆಯನ್ನೇ ಕೊಚ್ಚಿ ಕೊಂದ ಬಾಯ್‌ಫ್ರೆಂಡ್

ವೈಲೆನ್ಸ್ ಮಾಡಿದ್ರೆ ಮನೆ ಬಾಗಿಲಿಗೆ ಬರ್ತಾರೆ ಟ್ರಾಫಿಕ್‌ ಪೊಲೀಸರು

ನಿರಂತರವಾಗಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಕಂಟಕ ಕಾದಿದೆ. ಟ್ರಾಫಿಕ್‌ ಪೊಲೀಸರು ನಮ್ಮ ಮೇಲೆ ಕಣ್ಣಿಡುತ್ತಿಲ್ಲ ಎಂದು ಸಿಗ್ನಲ್‌ ಜಂಪ್‌ ಮಾಡುವುದು, ಹೆಲ್ಮೆಟ್‌ ಹಾಕದೇ ಇರುವುದು, ಸೀಟ್‌ ಬೆಲ್ಟ್‌ ಹಾಕದೇ ಕಾರು ಚಲಾಯಿಸುವುದು ಸೇರಿದಂತೆ ನಾನಾ ರೀತಿಯ ಟ್ರಾಫಿಕ್‌ ವೈಲೆನ್ಸ್‌ ಮಾಡುತ್ತಿದ್ದಾರೆ. ಇಂತಹವರಿಂದ ದಂಡದ ಹಣವನ್ನು ಕಟ್ಟಿಸಿಕೊಳ್ಳಲು ಸಂಚಾರಿ ಪೊಲೀಸರು ಮನೆ ಬಾಗಿಲಿಗೆ ಬರುತ್ತಿದ್ದಾರೆ.

50 ಸಾವಿರಕ್ಕೂ ಅಧಿಕ ದಂಡ ಹೊಂದಿರುವ ವಾಹನ ಸವಾರರಿಗೆ ಈ ಮೂಲಕ ಶಾಕ್ ನೀಡುತ್ತಿದ್ದಾರೆ. ಈಗಾಗಲೇ ಹಲವು ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಲಾಗಿದೆ. 2,300ಕ್ಕೂ ಅಧಿಕ ವಾಹನಗಳ ಸವಾರರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಸುಮಾರು 50 ಸಾವಿರಕ್ಕೂ ಅಧಿಕ ದಂಡ ಇದ್ದು, ಕಟ್ಟದೇ ಇರುವವರಿಗೆ ಚಾರ್ಜ್ ಶೀಟ್ ಮಾಡಲಿದ್ದಾರೆ. ಕೋರ್ಟ್‌ನಿಂದ ಮನೆಗೆ ಸಮನ್ಸ್‌ ನೋಟಿಸ್‌ ಬರಲಿದೆ.

ಸಿಗ್ನಲ್ ಜಂಪ್ ಮಾಡೊದ್ರಲ್ಲಿ ಎತ್ತಿದ ಕೈ

ಈ ಆಸಾಮಿ ಸಿಗ್ನಲ್ ಜಂಪ್‌ ಮಾಡುವುದರಲ್ಲಿ ಎತ್ತಿದೆ ಕೈ.. ಒಂದಲ್ಲ ಎರಡಲ್ಲ ಬರೋಬ್ಬರಿ 158 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. 30 ಸಾವಿರ ರೂ. ಮೌಲ್ಯದ ಸ್ಕೂಟಿ ಮೇಲೆ 82,000 ರೂ ದಂಡವೇ ಇದೆ. ನಗರದ ಮೂಲೆ ಮೂಲೆಯಲ್ಲೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಹೀಗಾಗಿ ಯಾಕೆ ಇನ್ನೂ ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೆಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version