ಬೆಂಗಳೂರು: ನಗರದ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ (Bengaluru News) ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮೊಹಮ್ಮದ್ ರಫಿ ಹಕೀಂ, ಬೆಂಗಳೂರು ಡಿಎಒ ಡಾ. ಶಹಾಬುದ್ದಿನ್, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಬಲ್ಲಾಳ ಕೆ.ಸಿ., ಡಾ. ಗಿರಿಧರ್ ಕಜೆ ಮತ್ತು ಇತರ ವೈದ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ಸ್ವಾಮಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಇದಾಗಿದ್ದು, ಜೆಪಿ ನಗರದ 9ನೇ ಕ್ರಾಸ್ ರಸ್ತೆಯ ತಿರುಮಲಗಿರಿ ದೇವಸ್ಥಾನದ ಮುಂಭಾಗದಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್ ಅನ್ನು ಆರಂಭಿಸಲಾಗಿದೆ.
ಭಾರತೀಯ ಪಾರಂಪರಿಕ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ. ರಾಜಶೇಖರ ಭೂಸನೂರಮಠ ಮತ್ತು ಡಾ. ಮಹತಿ ಸಾಹುಕರ್ ಅವರು, ಈ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: Shira News: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಟಿ.ಬಿ.ಜಯಚಂದ್ರ
ಈ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದಲ್ಲಿ ವಿಶೇಷವಾದ ಆಸ್ಪತ್ರೆಯಿದಾಗಿದ್ದು, ತ್ವಚೆ ಆರೈಕೆ, ಗಾಯದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಿಟಾಕ್ಸ್, ಮಾನಸಿಕ, ವಿಶೇಷ ಚಿಕಿತ್ಸೆಗಳು ಮತ್ತು ಸಾಮಾನ್ಯ ಚಿಕಿತ್ಸೆಗಳನ್ನು ನಡೆಸುವ ವಿವಿಧ ವಿಭಾಗಗಳನ್ನು ಹೊಂದಿದೆ. ಜನರು ಆರೋಗ್ಯದ ಉತ್ತಮ ಲಾಭಗಳನ್ನು ಪಡೆಯಲು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಭೂಸನೂರಮಠ ತಿಳಿಸಿದ್ದಾರೆ.