Site icon Vistara News

Bengaluru News : ಇಳಿ ವಯಸ್ಸಿನವರಿಗೆ ನಡುಕ ಹುಟ್ಟಿಸಿದ ಪಾರ್ಕಿನ್ಸನ್‌ ರೋಗ

India s first neurosmart portable MEC system used for Parkinson s disease

ಬೆಂಗಳೂರು: ಇಡೀ ದೇಹವನ್ನೇ ಒಂದು ರೀತಿಯ ನಡುಕು ಉಂಟು ಮಾಡುವ ಪಾರ್ಕಿನ್ಸನ್‌ ರೋಗಕ್ಕೆ (Parkinsons disease) ದೇಶದಲ್ಲೇ ಮೊದಲ ನ್ಯೂರೋಸ್ಮಾರ್ಟ್‌ ಪೋಟರ್ಬಲ್‌ ಎಂಇಸಿ ಸಿಸ್ಟಮ್‌ ಬಳಕೆ ಮಾಡಲಾಗುತ್ತಿದೆ. ನರಮಂಡಲ ಸಮಸ್ಯೆಯಿಂದ ಉಂಟಾಗುವ ಮಾರಣಾಂತಿಕ ʻಪಾರ್ಕಿನ್ಸನ್ʼ ರೋಗಕ್ಕೆ 68 ವರ್ಷದ ವ್ಯಕ್ತಿಯೊಬ್ಬ ತುತ್ತಾಗಿದ್ದರು. ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು “ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್‌” ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಪಾರ್ಕಿನ್ಸನ್‌ ರೋಗಕ್ಕೆ ದೇಶದಲ್ಲೇ ಮೊದಲ ಬಾರಿಗೆ ನೂತನ ಅಪ್ಲಿಕೇಷನ್‌ನನ್ನು ಫೋರ್ಟಿಸ್‌ ಆಸ್ಪತ್ರೆಯಲ್ಲಿ (Bengaluru News ) ಬಳಸಲಾಗಿದೆ.

ಈ ಕುರಿತು ಮಾತನಾಡಿದ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ, ನರಮಂಡಲದಲ್ಲಿ ಆಗುವ ಸಮಸ್ಯೆಯಿಂದ ಉಂಟಾಗುವ ಪಾರ್ಕಿನ್ಸನ್‌ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಡುತ್ತದೆ. ಈ ಕಾಯಿಲೆ ಬಂದವರ ದೇಹದಲ್ಲಿ ಒಂದು ರೀತಿಯ ನಡುಕು ಉಂಟಾಗುತ್ತದೆ.

68 ವರ್ಷದ ಪ್ರಕಾಶ್ ಅವರಿಗೂ ಸಹ ಪಾರ್ಕಿನ್ಸನ್‌ ಕಾಯಿಲೆಗೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ ಜತೆಗೆ ರಕ್ತದೊತ್ತಡ, ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆ ಹೊಂದಿದ್ದರು. ಈ ಹಿಂದೆ ಹೃದಯ, ಬೆನ್ನುಮೂಳೆ, ಅಂಡವಾಯುಗಳ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಹೊಂದಿರುವ ಇಳಿವಯಸ್ಸಿನ ಪ್ರಕಾಶ್‌ ಅವರ ಕುತ್ತಿಗೆಯೂ ಸೇರಿದಂತೆ ಇಡೀ ದೇಹವೇ ನಡುಕ ಉಂಟು ಮಾಡುವ ಪಾರ್ಕಿನ್ಸನ್‌ ಕಾಯಿಲೆಯು ಅವರನ್ನು ಸಂಪೂರ್ಣ ನಲುಗಿಸಿತ್ತು.

ಸುಧಾರಿತ ತಂತ್ರಜ್ಞಾನದಿಂದ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (DBS) ಚಿಕಿತ್ಸೆಗೆ ನಿಖರತೆ ನೀಡಲಿದೆ. ಹೀಗಾಗಿ ಈ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಆಗಿರುವ ಸಮಸ್ಯೆಗಳನ್ನು ಸೂಕ್ಷ್ಮರೀತಿಯಲ್ಲಿ ವಿಶ್ಲೇಷಣೆ ಮಾಡಿ, ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಈ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಡಾ.ರಘುರಾಮ್ ಜಿ ಹೇಳಿದರು.

ಇನ್ನು ಈ ನೂತನ ತಂತ್ರಜ್ಞಾನವಾದ ನ್ಯೂರೋಸ್ಮಾರ್ಟ್‌ನಲ್ಲಿ AI ಸಾಮರ್ಥ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ರೋಗಿಯು ಎಚ್ಚರವಾಗಿರುವಂತೆ ನೋಡಿಕೊಂಡು ಈ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರೋಗಿಯು ನಿದ್ರೆಗೆ ಜಾರದಂತೆ ನೋಡಿಕೊಳ್ಳಲಾಗುವುದು. ಈ ಮೂಲಕ ಸುಲಭ ಹಾಗೂ ವೇಗವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಾದ ಐದು ದಿನಗಳಲ್ಲೇ ರೋಗಿಯನ್ನು ಡಿಸ್ಚಾರ್ಚ್‌ ಮಾಡಲಾಯಿತು. ಪಾರ್ಕಿನ್ಸನ್‌ ಸಮಸ್ಯೆ ಇರುವ ವಯೋ ವೃದ್ಧರಿಗೆ ಈ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಿಸಿದರು.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ ನರವಿಜ್ಞಾನ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ MER ವ್ಯವಸ್ಥೆಯನ್ನು ಚಿಕಿತ್ಸಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version