Site icon Vistara News

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Sri Vedavyasa Jayanti programme at Bengaluru

ಬೆಂಗಳೂರು: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ (Bengaluru News) ಹೇಳಿದರು‌.

ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಮಠದಲ್ಲಿ ಗುರುವಾರ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ, ಶ್ರೀ ಮಾಧ್ವ ರಾದ್ಧಾತ ಸಂವರ್ಧಕ ಸಭಾದ 81ನೇ ಅಧಿವೇಶನ, ಶ್ರೀ ವೇದವ್ಯಾಸ ಜಯಂತಿ ಸರಣಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಿದ ಅವರು, ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌. ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಹೇಳಿದರು.

ಹರಿಕಥಾಮೃತಸಾರವನ್ನು ಓದಿ ನಾವು ವಿಶಾಲರಾಗಬೇಕು. ಆ ಮೂಲಕ ದೊಡ್ಡವರಾಗಬೇಕು. ಬದುಕನ್ನು ಹಸನ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಬ್ಯಾಗವಟ್ಟಿಯ ನರಸಿಂಹ ದಾಸ ಕುಲಕರ್ಣಿ ಅವರು ನಡೆಸಿದ ಸಮಾಜಮುಖಿ ಚಟುವಟಿಕೆಗಳನ್ನು ವಿವರಿಸಿದರು.

ಮಾನವಿ ಜಗನ್ನಾಥದಾಸರ ಮನೆಯೇ ಮಂದಿರವಾದ ಕಥೆಯನ್ನು ಸುಂದರವಾಗಿ ನಿರೂಪಿಸಿದರು. ಹರಿಕಥಾಮೃತಸಾರ ರಚನೆ ಆದಂತಹ ಸಂದರ್ಭ, ಹಿರಿಯರು ಅವರ ಮೇಲೆ ಮಾಡಿದಂತಹ ಕೃಪೆ ಮತ್ತು ಜಗನ್ನಾಥದಾಸರ ಕಾರುಣ್ಯಗಳನ್ನು ಸಮರ್ಥವಾಗಿ ಅಪ್ಪಣ್ಣಾಚಾರ್ಯರು ವಿವರಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಸಂಜೆ ಮಹಾಭಾರತ ಕುರಿತು ವಿವಾದ-ಸಂವಾದ ಕಾರ್ಯಕ್ರಮ ನಡೆಯಿತು. ವಿದ್ವಾನ್ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Exit mobile version