Site icon Vistara News

Bengaluru News: ಎಐ ತಂತ್ರಜ್ಞಾನ ಬಳಕೆಯಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ: ಅಶೋಕ್ ಚತುರ್ವೇದುಲಾ

two days Code AI International Conference in Bengaluru

ಬೆಂಗಳೂರು: ಸ್ವೀಡನ್‌ನ ಲಿನ್ನಿಯಸ್ ವಿಶ್ವವಿದ್ಯಾಲಯ ಮತ್ತು ಎಸ್‌ಯುಪಿಎಸ್‌ಐ (ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಆಂಡ್ ಆರ್ಟ್ಸ್ ಆಫ್ ಸದರ್ನ್ ಸ್ವಿಟ್ಜರ್‌ಲ್ಯಾಂಡ್) ಸಹಯೋಗದಲ್ಲಿ ಸಿಜಿಐ ವತಿಯಿಂದ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಎಎಚ್ಇ-ಮಾಹೆ) ನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕೋಡ್-ಎಐ ಅಂತಾರಾಷ್ಟ್ರೀಯ ಸಮ್ಮೇಳನವನ್ನು (Bengaluru News) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಹಣಕಾಸು ಸೇವೆಗಳ ಏಷ್ಯಾ ಪೆಸಿಫಿಕ್ ಗ್ಲೋಬಲ್ ಡೆಲಿವರಿ ಸೆಂಟರ್ಸ್ ಆಫ್ ಎಕ್ಸಲೆನ್ಸ್, ಸಿಜಿಐಐ ಹಿರಿಯ ಉಪಾಧ್ಯಕ್ಷ ಅಶೋಕ್ ಚತುರ್ವೇದುಲಾ ಮಾತನಾಡಿ, ಎಐ ಮತ್ತು ಡೇಟಾ ಸೈನ್ಸ್‌ನ ವಿಚಾರದಲ್ಲಿನ ಇತ್ತೀಚಿನ ಪ್ರಗತಿಗಳು, ನೈತಿಕ ವಿಚಾರಗಳು ಮತ್ತು ಹೊಸ ಟ್ರೆಂಡ್‌ಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಅತ್ಯಾಧುನಿಕ ಎಐ ತಂತ್ರಜ್ಞಾನದ ಸಹಾಯದಿಂದ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಮರ್ಥರಾಗಿದ್ದೇವೆ ಎಂದು ಹೇಳಿದರು.

ಸಮಾಜವನ್ನು ಅಭಿವೃದ್ಧಿಗೊಳಿಸಲು, ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಾವೀನ್ಯತೆ ಮತ್ತು ಸಾಧ್ಯತೆಗಳ ದಿಗಂತವನ್ನು ವಿಸ್ತರಿಸಿಕೊಳ್ಳಲು, ಹೆಚ್ಚು ಬುದ್ಧಿವಂತ ಮತ್ತು ಸಂಪರ್ಕಿತ ಜಗತ್ತನ್ನು ನಿರ್ಮಿಸಲು ನಾವು ಅದರ ಸಾಮರ್ಥ್ಯದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Foreign Investment: ಜಪಾನ್‌, ದಕ್ಷಿಣ ಕೊರಿಯಾದಿಂದ ರಾಜ್ಯದಲ್ಲಿ ₹6,450 ಕೋಟಿ ಹೂಡಿಕೆ: ಎಂಬಿ ಪಾಟೀಲ್

ಎಂಐಟಿ-ಬಿ ಯ ನಿರ್ದೇಶಕ ಡಾ. ಜಗನ್ನಾಥ್ ಕರೋಡಿ ಮಾತನಾಡಿ, ನಾವು ಬಹಳ ಆಸಕ್ತಿದಾಯಕ ಸಮ್ಮೇಳನವನ್ನು ನಡೆಸಿದ್ದೇವೆ. ಬಿ.ಟೆಕ್. ಇನ್ ಡೇಟಾ ಸೈನ್ಸ್‌ ಮತ್ತು ಎಐ ಭಾರತದಲ್ಲಿ ಹೊಸತಾದ ಮತ್ತು ಹೆಚ್ಚು ಅಗತ್ಯವಿರುವ ಸಂಯೋಜನೆಯಾಗಿದೆ. ಅದಕ್ಕೆ ಅಗತ್ಯವಿರುವ ತಜ್ಞರನ್ನು ಕರೆತರುವ ಮೂಲಕ ಎರಡೂ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹೊಸ ಒಳನೋಟಗಳನ್ನು ಒದಗಿಸಿದೆ. ಎಲ್ಲರೂ ಒಗ್ಗಟ್ಟಾಗಿ ನಮ್ಮ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಅಧ್ಯಾಪಕರು ಮತ್ತು ಸಿಜಿಐ ಅನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಸ್ವಿಟ್ಜರ್ಲೆಂಡ್‌ನ ಎಸ್‌ಯುಎಸ್‌ಪಿಐ ಪ್ರೊ. ಡಾ. ಫ್ರಾನ್ಸೆಸ್ಕೊ ಫ್ಲಾಮಿನಿ ಮಾತನಾಡಿ, ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ ಏನೆಂದರೆ ಜಾಗತಿಕ ಮಟ್ಟದ ಪ್ರತಿಭೆಗಳನ್ನು ಪ್ರದರ್ಶಿಸುವುದು ಮತ್ತು ನವೀನ ಮನಸ್ಸುಗಳಿಗೆ ಹೊಸ ವಿಚಾರಗಳ ಮೇಲೆ ಬೆಳಕು ಚೆಲ್ಲುವುದು. ಇಂದು ನಾವು ಎದುರಿಸುತ್ತಿರುವ ಅಸಂಖ್ಯಾತ ಸಾಮಾಜಿಕ ಸವಾಲುಗಳನ್ನು ನಿಭಾಯಿಸಲು ಎಐ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯವಾಗಿದೆ ಮತ್ತು ಈ ಸಮಾವೇಶವು ವ್ಯಕ್ತಿಗಳು ತಮ್ಮ ಉತ್ಪನ್ನಗಳಲ್ಲಿ ಎಐ ಅನ್ನು ಚಿಂತನಶೀಲವಾಗಿ ಸಂಯೋಜಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇದಿಕೆಯ ಮೂಲಕ ವಿವಿಧ ವಿಭಾಗಗಳ ತಜ್ಞರೊಂದಿಗೆ ಸಂಪರ್ಕ ಹೊಂದುವ ಅವಕಾಶ ಒದಗಿಸಲಾಗಿದೆ ಮತ್ತು ಅದ್ಭುತ ಉತ್ಪನ್ನಗಳ ಜತೆ ಸಹಯೋಗ ಮಾಡಿಕೊಳ್ಳಲು ಅಸಾಧಾರಣ ಅವಕಾಶವನ್ನು ಒದಗಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಮಾಹೆಯ ಪ್ರೊ. ವೈಸ್ ಚಾನ್ಸಲರ್ ಡಾ. ಮಧು ವೀರರಾಘವನ್ ಮಾತನಾಡಿದರು.

ಇದನ್ನೂ ಓದಿ: Star Fashion: ಜ್ಯುವೆಲ್ಲರಿ ಶೋಗಾಗಿ ಅಪ್ಸರೆಯಂತೆ ಮಿಂಚಿದ ಮಾಲಾಶ್ರೀ ಪುತ್ರಿ ಆರಾಧನಾ!

ಈ ಸಂದರ್ಭದಲ್ಲಿ ಡಾ. ಪ್ರೇಮಾ ಕೆ.ವಿ., ಡಾ. ಸಂದೀಪ್ ಚಕ್ರವರ್ತಿ, ಬೆಂಗಳೂರು ಎಂಐಟಿ ಐಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಗುರುರಾಜ್ ಎಚ್.ಎಲ್, ಡಾ. ಗೋಪಾಲಕೃಷ್ಣನ್ ಟಿ., ಡಾ. ದಯಾನಂದ ಪಿ. ಹಾಗೂ ಇತರರು ಉಪಸ್ಥಿತರಿದ್ದರು. ಎಂಐಟಿಯ ಸಂಶೋಧನಾ ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದರು. ಡಾ. ಶ್ರೇಯಸ್ ಜೆ. ವಂದಿಸಿದರು.

Exit mobile version