ಬೆಂಗಳೂರು: ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದ್ದು, ಸೆಪ್ಟೆಂಬರ್ 30ರವರೆಗೆ ಹಲವು ಏರಿಯಾಗಳಲ್ಲಿ ನಿಗದಿತ ಸಮಯದವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (Bangalore Electricity Supply Company – ಬೆಸ್ಕಾಂ) ತಿಳಿಸಿದೆ.
ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಈ ಮಾಸಾಂತ್ಯದವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯಾಗಲಿದೆ.
ಇದನ್ನೂ ಓದಿ: Weather report : ಕರಾವಳಿ, ಉತ್ತರ ಒಳನಾಡಲ್ಲಿ ಇಂದು ಭಾರಿ ಮಳೆ; ಬೆಂಗಳೂರಲ್ಲಿ ರಾತ್ರಿ ಅಬ್ಬರ
ಗುರುವಾರ (ಸೆಪ್ಟೆಂಬರ್ 28) ದಿಂದ ಶನಿವಾರ (ಸೆಪ್ಟೆಂಬರ್ 30) ವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ. ಬಹುತೇಕ ಕಡೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಶನಿವಾರದವರೆಗೆ ಇಲ್ಲೆಲ್ಲ ವಿದ್ಯುತ್ ವ್ಯತ್ಯಯ
ದೊಡ್ಡಸೀಬಿ, ತಿರಸನಹಳ್ಳಿ, ದುರ್ಗದಹಳ್ಳಿ, ದುರ್ಗದಹಳ್ಳಿ ಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ, ಎಲ್.ಎಚ್. ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ ಪ್ರದೇಶಗಳಲ್ಲಿ ಸೆಪ್ಟೆಂಬರ್ 28ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೆಪ್ಟೆಂಬರ್ 29ರಂದು ವಿದ್ಯುತ್ ವ್ಯತ್ಯಯ
ಹರೇಬೋಮನಹಳ್ಳಿ ಗ್ರಾಪಂ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾಪಂ ಹಾಗೂ ಹರೇಬೋಮನಹಳ್ಳಿ ಗ್ರಾಮ ಪಂಚಾಯಿತಿ, ಬಿಲಂಕೋಟೆ ಪ್ರದೇಶ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಕುಲವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸೆಪ್ಟೆಂಬರ್ 30ರಂದು ವಿದ್ಯುತ್ ವ್ಯತ್ಯಯ ಆಗಲಿರುವ ಪ್ರದೇಶಗಳಿವು
ಬೂದಿಹಾಳ್, ಕಾಚನಹಳ್ಳಿ, ವೀರರಂಜಿಪುರ, ಭುವನೇಶ್ವರಿ, ಯರಮಂಚನಹಳ್ಳಿ, ಫಿಡೆಲಿಟಿ, ಫಿಲಿಪ್ಸ್, ಐಕ್ಯುಬೇಟರ್, ಐಬಿಎಂ ಡಿ4 ಬ್ಲಾಕ್, ಐಬಿಎಂ ಡಿ1 ಮತ್ತು ಡಿ2 ಬ್ಲಾಕ್, ಐಬಿಡಿ ಡಿ3 ಬ್ಲಾಕ್, ಎಫ್2 ಬ್ಲಾಕ್, ಎಲ್6 ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೂಸೆಂಟ್, ಅಪಾರ್ಟ್ಮೆಂಟ್, ಹೆಬ್ಬಾಳ ಕೆಂಪಾಪುರ, ವಿನ್ಯಾಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ1 ಬ್ಲಾಕ್, ಎಂಫಾರ್, ಮಧುವನ ಎಂ2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಕರ್ನಾಟಕ, ಮೇಸ್ತ್ರಿ ಪಾಳ್ಯ, ಬಿ.ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್ ಮತ್ತು ಮರಿಯಣ್ಣ ಪಾಳ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: Bangalore Traffic : ಬೆಂಗಳೂರಿನಲ್ಲಿ ಬುಧವಾರ ಸಂಜೆ ಭಯಾನಕ ಟ್ರಾಫಿಕ್ ಜಾಮ್ ಉಂಟಾಗಿದ್ದೇಕೆ?
ಸಾರ್ವಜನಿಕರ ಸಹಕಾರಕ್ಕೆ ಮನವಿ
ವಿವಿಧ ದುರಸ್ತಿ, ನಿರ್ವಹಣಾ ಕೆಲಸಗಳು ನಡೆಯುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ.