Site icon Vistara News

Bengaluru Power Cut: ಜೂನ್‌ 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಇರಲ್ಲ

Bengaluru Power Cut

ಬೆಂಗಳೂರು: ‘66/11ಕೆ.ವಿ ಎಚ್.ಬಿ.ಆರ್’ ಸ್ಟೇಷನ್ ಮತ್ತು 66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಸ್ಕಾಂ ಬೆಂಗಳೂರು ಪೂರ್ವ ಭಾಗದ (Bengaluru Power Cut) ವ್ಯಾಪ್ತಿಯಲ್ಲಿ ಜೂನ್‌ 20ರಂದು ವಿದ್ಯುತ್‌ ವ್ಯತ್ಯಯ (Power outage) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಎಚ್.ಬಿ.ಆರ್’ ಸ್ಟೇಷನ್‌ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

‘66/11ಕೆ.ವಿ ಎಚ್.ಬಿ.ಆರ್’ ಸ್ಟೇಷನ್‌ನಲ್ಲಿ ದುರಸ್ತಿ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 10:30ರಿಂದ 4 ಗಂಟೆಯವರೆಗೆ ಎಚ್.ಬಿ.ಆರ್. 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್‌ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್‌ ಕಾಲೋನಿ, ಎಚ್.ಬಿ.ಆರ್. 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ, ಸಿ.ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶ.

ಎಚ್.ಬಿ.ಆರ್. ಲೇಔಟ್ 4ನೇ ಬ್ಲಾಕ್, ಯಾಸಿನ್‌ನಗರ, 5ನೇ ಬ್ಲಾಕ್, ಎಚ್.ಬಿ.ಆರ್. ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಹೆಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಹೆಚ್.ಬಿ.ಆರ್. ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಸೆಂಟ್ರಲ್ ಎಕ್ಸೈಸ್, ಕೆ.ಕೆ. ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಎಚ್.ಆರ್.ಬಿ.ಆರ್. 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್‌ ಸ್ಟ್ರೀಟ್, ಎ.ಕೆ.ಕಾಲೋನಿ, ಎಚ್.ಆರ್.ಬಿ.ಆರ್. 1ನೇ ಬ್ಲಾಕ್, 80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ‍್ಸ್, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ. ಲೇಔಟ್, ಭಾರತೀಯ ಸಿಟಿ, ನೂರ್ ನಗರ ಭಾರತ ಮಾತ ಲೇಔಟ್, ಭಾರತ ಮಾತ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ., ಬಿ.ಎಮ್.ಆರ್.ಸಿ.ಎಲ್, ಗಾಂಧಿನಗರ, ಕುಶಾಲನಗರ, ಶಾಂಪುರ ಮೇನ್ ರೋಡ್‌ ಭಾಗದಲ್ಲಿ ವಿದ್ಯುತ್‌ ಕಡಿತವಾಗಲಿದೆ.

ಇದನ್ನೂ ಓದಿ | PGCET 2024: ಪಿಜಿಸಿಇಟಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ; ಶುಲ್ಕ ಪಾವತಿಗೂ ಅವಕಾಶ

ಆಸ್ಟಿನ್ ಟೌನ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸ್ಥಳಗಳು

66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್‌ನಲ್ಲಿ ದುರಸ್ತಿ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿದ ಮಧ್ಯಾಹ್ನ 03 ಗಂಟೆಯವರೆಗೆ ರಿಚ್ಮಂಡ್ ರಸ್ತೆ, ಸಿಲ್ವರ್ ಲೇಕ್ ಅಪಾರ್ಟ್‌ಮೆಂಟ್, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ವಿಜಯ ಬ್ಯಾಂಕ್, ಬ್ರಿಗೇಡ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಟಾಟಾ ಲೇನ್, ಉದಯ ಟಿವಿ, ಐಟಿಸಿ, ಫೋರ್ ಸೀಸನ್ ಅಪಾರ್ಟ್‌ಮೆಂಟ್, ಕೆಎಸ್‌ಆರ್‌ಪಿ, ರಿಚ್‌ಮಂಡ್ ರಸ್ತೆ, ರತ್ನ ಅವೆನ್ಯೂ, ಹೇಯ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಬ್ರಿಗೇಡ್ ರಸ್ತೆ, ವಿಟ್ಠಲ್ ಮಲ್ಯ ರಸ್ತೆ, ಫುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಶಾಪರ್ ಸ್ಟಾಪ್, ಮ್ಯಾಗ್ರತ್ ರಸ್ತೆ, ಆಲ್ಬರ್ಟ್‌ ಸ್ಟ್ರೀಟ್, ಕಾನ್ವೆಂಟ್ ರಸ್ತೆ, ರಿಚ್ಮಂಡ್ ಸರ್ಕಲ್, ಎಂಬಸ್ಸಿ ಕಚೇರಿ, ಕಮಿಷನರೇಟ್ ರಸ್ತೆ, ಬ್ರಂಟನ್ ರಸ್ತೆ, ಗರುಡಾ ಮಾಲ್, ಅಶೋಕನಗರ, ಪೀರನ್, ಮಾರ್ಕ್ಹಮ್ ರಸ್ತೆ , ಬೋವೀ ಲೇನ್, ಮ್ಯೂಸಿಯಂ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಸಂಬಂಧಿತ ಯಾವುದೇ ದೂರಿಗಾಗಿ ಗ್ರಾಹಕರು ಬೆಸ್ಕಾಂ ಸಹಾಯವಾಣಿ ಸಂಖ್ಯೆ ‘1912’ ಗೆ ಸಂಪರ್ಕಿಸಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version