ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿರುವ (BESCOM Order) ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್‌ಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಜು. 8ರ ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್‌ಗಳಿಗೆ ಬೆಸ್ಕಾಂ ಗಡುವು ನೀಡಿದೆ.
ಹಿಂದೊಮ್ಮೆ ಕಳೆದ 2023ರಂದು ಆಗಸ್ಟ್ 23 ರಂದು ಬೆಂಗಳೂರಿನ ಸುದ್ಗುಂಟೆಪಾಳ್ಯ ಬಳಿ ಇರುವ ಸೆಂಟ್ ಕ್ರೈಸ್ಟ್ ಕಾಲೇಜು ಬಳಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ವಿದ್ಯುತ್ ತಂತಿ (electric shock) ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಳು. ಈ ಘಟನೆ ನಡೆದ ದಿನದಿಂದ ಬೆಸ್ಕಾಂ ಅಧಿಕಾರಿಗಳು ಆ್ಯಕ್ವಿವ್ ಆಗಿದ್ದಾರೆ.
ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ, ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಅನಧಿಕೃತ ಡಾಟ ಕೇಬಲ್, ಓಎಫ್‌ಸಿ ಕೇಬಲ್ ಹಾಗೂ ಡಿಶ್ ಕೇಬಲ್‌ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು.
ಇದನ್ನೂ ಓದಿ: Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು
ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್‌ಗಳನ್ನು ವಿದ್ಯುತ್ ಕಂಬಗಳ ಮೇಲೆ ಡಿಶ್ ಕೇಬಲ್ ಹಾಗೂ ಡಾಟ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಬೆಸ್ಕಾಂ ವಿದ್ಯುತ್ ಕಂಬಗಳಲ್ಲಿ ಹಾಕಿರುವ ಓಎಫ್‌ಸಿ, ಇಂಟರ್ ನೆಟ್ ಡಾಟ ಕೇಬಲ್ ಹಾಗೂ ಡಿಶ್ ಕೇಬಲ್‌ಗಳನ್ನು ಬರುವ ಸೋಮವಾರದೊಳಗೆ (08.07.2024) ತೆರವುಗೊಳಿಸಲು ಸೂಚಿಸಿದೆ.
ಸಂಬಂಧಪಟ್ಟ ಇಂಟರ್ ನೆಟ್ ಕಂಪನಿಗಳು ಹಾಗೂ ಡಿಶ್ ಕೇಬಲ್ ಅಪರೇಟರ್‌ಗಳು ತೆರವುಗೊಳಿಸಲು ತಪ್ಪಿದ್ದಲ್ಲಿ, ಬೆಸ್ಕಾಂ ಅವುಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಿದೆ. ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಒಂದು ವೇಳೆ ಅನಧಿಕೃತ ಕೇಬಲ್‌ಗಳಿಂದ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದ ಓಎಫ್‌ಸಿ, ಡಾಟ ಕೇಬಲ್, ಡಿಶ್ ಕೇಬಲ್ ಅಪರೇಟರ್‌ಗಳು ಅಥವಾ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ