Site icon Vistara News

Biggest Surprise! : ಹೀಗೂ ಉಂಟೆ! ರಾಜ್ಯದಲ್ಲಿ ವಿದ್ಯುತ್‌ ದರ ಭಾರಿ ಇಳಿಕೆ! ನಿಜಕ್ಕೂ ಶಾಕ್!‌

Biggest surprise power Tariff

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂಬ ಆರೋಪ, ಗುಲ್ಲುಗಳ ನಡುವೆಯೇ ನಂಬಲಸಾಧ್ಯ ಬ್ರೇಕಿಂಗ್‌ ನ್ಯೂಸ್‌ (Biggest Surprise!) ಬಂದಿದೆ. ಅದೇನೆಂದರೆ ‌ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ (Karnataka Electricity regulatory Commission) ವಿದ್ಯುತ್‌ ದರವನ್ನು (Power Tariff) ವಿಪರೀತ ಇಳಿಸಿದೆ! ಅತ್ಯಂತ ಅಪರೂಪದಲ್ಲಿ ಅಪರೂಪದಲ್ಲಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆದಾರರು (Household user) ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದೆ.

ಬುಧವಾರ ಸಂಜೆ ವೇಳೆ ವಿದ್ಯುತ್‌ ದರ ಪರಿಷ್ಕರಣೆ (Power Tariff revision) ಘೋಷಣೆಯಾಗಲಿದೆ. ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ Biggest Surprise ನೀಡಿದೆ. ವಿದ್ಯುತ್‌ ದರದಲ್ಲಿ ಭಾರಿ ಕಡಿತ ಮಾಡುವ ಮೂಲಕ ಶುಭ ಸುದ್ದಿ ನೀಡಿದೆ.

ಪರಿಷ್ಕೃತ ದರ ಮಾರ್ಚ್ ೧ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ.‌ ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆಇಆರ್‌ ಸಿ ಹೇಳಿದೆ.

ಇದನ್ನು ಓದಿ : Power Tariff : ರಾಜ್ಯಕ್ಕೆ ಕಾದಿದೆ ಕರೆಂಟ್‌ ಶಾಕ್‌; ಮಾ. 1ರಿಂದಲೇ ವಿದ್ಯುತ್‌ ದರ ಹೆಚ್ಚಳ?

ಇಳಿಕೆಯ ಕೆಲವೊಂದು ಪ್ರಮುಖಾಂಶಗಳು ಇಲ್ಲಿವೆ

1.ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ: 100 ಯೂನಿಟ್‌ಗಳಿಗಿಂತ ಹೆಚ್ಚಿನ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ. ಅಂದರೆ ಇದರ ಲಾಭ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಮಾತ್ರ ಸಿಗಲಿದೆ.

2. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್‌ ವಿದ್ಯುತ್‌ಗೆ 1 ರೂಪಾಯಿ 25 ಪೈಸೆ ಇಳಿಕೆ

3. ಕೈಗಾರಿಕೆಗಳಿಗೆ ಬಳಸುವ ವಿದ್ಯುತ್‌ ದರದಲ್ಲಿ ಯುನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ.

4. ಆಸ್ಪತ್ರೆ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್‌ ದರ ಒಂದು ಯುನಿಟ್‌ಗೆ 40 ಪೈಸೆ ಇಳಿಕೆ

5. ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ – 50 ಪೈಸೆ ಇಳಿಕೆ

6. ಖಾಸಗಿ ಏತ ನೀರಾವರಿ ವಿದ್ಯುತ್‌ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್‌ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ.

7. ಅಪಾರ್ಟ್‌ಮೆಂಟ್‌ಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ.

Exit mobile version